ETV Bharat / bharat

ಮಹಿಳೆ ಕೊಲೆ ಪ್ರಕರಣ: ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿದ ತ್ರಿಪುರಾ ಕೋರ್ಟ್​

author img

By

Published : Jan 20, 2022, 10:40 AM IST

2008 ರ ನವೆಂಬರ್ 11 ರಂದು ಅಗರ್ತಲಾ ನಗರದಲ್ಲಿರುವ ಬರ್ಜಾಲಾದ ಕಲ್ಯಾಣಪುರ ಪಾರಾದಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಗೋವಿಂದ ದಾಸ್ ಅವರು ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಜೀವಾವಧಿ ಶಿಕ್ಷೆ
ಜೀವಾವಧಿ ಶಿಕ್ಷೆ

ತ್ರಿಪುರ: 14 ವರ್ಷಗಳ ಹಿಂದೆ 80 ವರ್ಷದ ಮಹಿಳೆಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ತ್ರಿಪುರಾದ ಸ್ಥಳೀಯ ನ್ಯಾಯಾಲಯವು ಏಳು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಪುಲಕ್ ಕರ್ ದೇವ್​ನಾಥ್, 2008 ರ ನವೆಂಬರ್ 11 ರಂದು ಅಗರ್ತಲಾ ನಗರದಲ್ಲಿರುವ ಬರ್ಜಾಲಾದ ಕಲ್ಯಾಣಪುರ ಪಾರಾದಲ್ಲಿ ನಡೆದ ಮಹಿಳೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಗೋವಿಂದ ದಾಸ್ ಅವರು ಏಳು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ ಎಂದರು.

ಲಾಲ್ ಮೋಹನ್ ಸರ್ಕಾರ್ ಎಂಬಾತ ತನ್ನ ಹೊಲದಲ್ಲಿ ಜಾನುವಾರುಗಳಿಗೆ ಹುಲ್ಲು ಕತ್ತರಿಸುತ್ತಿದ್ದಾಗ ಸುಜಿತ್ ಮಾಲಕರ್ ಎಂಬಾತ ಲಾಲ್ ಮೋಹನ್ ಜೊತೆ ಜಗಳ ತೆಗೆದು ಹುಲ್ಲು ಕತ್ತರಿಸಬೇಡ ಎಂದು ವಾಗ್ವಾದ ನಡೆಸಿದ್ದಾನೆ. ಅಂದು ಸಂಜೆ 7 ರಿಂದ 7.30 ಕ್ಕೆ ಸುಜಿತ್ ಮಾಲಕರ್ 8 ರಿಂದ 10 ಜನರೊಂದಿಗೆ ಬಂದು ಲಾಲಮೋಹನ್ ಸರ್ಕಾರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮನೆಯಲ್ಲಿ ಮೋಹನ್ ಪತ್ನಿ ಮತ್ತು ಅವರ ಮಗ ಕೂಡ ಇದ್ದರು.

ಪತ್ನಿಯ ಮೇಲಾಗುತ್ತಿರುವ ಹಲ್ಲೆಯನ್ನು ತಡೆಯಲು ಲಾಲ್ ಮೋಹನ್ ಪತಿ ಮುಂದಾದಾಗ ಉತ್ತಮ್ ಸರ್ಕಾರ್, ಉಜ್ಜಲ್ ದೇಬ್, ಪಂಕಜ್ ಸೂತ್ರದಾರ್, ಲಿಟನ್ ನಾಗ್, ಅಮಿತ್ ದೇಬ್, ರಾಜೇನ್ ದೇಬ್, ಅಜಿತ್ ಸರ್ಕಾರ್ ಮತ್ತು ಗೋಪಾಲ್ ಪಾಲ್ ಎಂಬುವರು ಆಕೆಯ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿ, ತಲೆಗೆ ಗಾಯಗೊಳಿಸಿದ್ದರು. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದರು.

ಈ ಕುರಿತು ಲಾಲ್ ಮೋಹನ್ ಅವರ ಮಗ ಅಜಿತ್ ಸರ್ಕಾರ್ ರಾಮನಗರ ಹೊರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 2009ರಲ್ಲಿ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಚಾರ್ಜ್ ಶೀಟ್ ಸಲ್ಲಿಸಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯ, ಉತ್ತಮ್ ಸರ್ಕಾರ್, ಉಜ್ಜಲ್ ದೇಬ್, ಪಂಕಜ್ ಸೂತ್ರಧಾರ್, ಲಿಟನ್ ನಾಗ್, ಅಮಿತ್ ದೇಬ್, ರಾಜೇನ್ ದೇಬ್, ಅಜಿತ್ ಸರ್ಕಾರ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಆದರೆ ಪ್ರಮುಖ ಆರೋಪಿಗಳಾದ ಸುಜಿತ್ ಮಾಲಕರ್ ಮತ್ತು ಗೋಪಾಲ್ ಪಾಲ್ ಇನ್ನೂ ತಲೆಮರೆಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.