ಚಮೋಲಿ (ಉತ್ತರಾಖಂಡ): ರಾಜ್ಯದ ವಿವಿಧ ಭಾಗಗಳಲ್ಲಿ ಭಾನುವಾರ ರಾತ್ರಿ 12.45 ಸುಮಾರಿಗೆ 4.3 ತೀವ್ರತೆಯ ಭೂಕಂಪ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಚಮೋಲಿ ಜಿಲ್ಲೆಯ ಜೋಶಿಮಠದ ಉತ್ತರ ಮತ್ತು ಈಶಾನ್ಯ ಭಾಗ ಭೂಕಂಪದ ಕೇಂದ್ರ ಬಿಂದು ಗುರುತಿಸಲಾಗಿದೆ.
ಭೂಕಂಪನದ ಬಳಿಕ, ರಾಜ್ಯದ ಕೆಲ ಜಿಲ್ಲೆಗಳಾದ ಡೆಹ್ರಾಡೂನ್, ಪೌರಿ ಮತ್ತು ಗರ್ವಾಲ್ಗಳಲ್ಲಿ ಭೂಮಿ ಕಂಪಿಸಿದೆ. ವರದಿಗಳನ್ನು ಪರಿಶೀಲಿಸಿದ ಬಳಿಕ ಭೂಕಂಪನ ಸಂಭವಿಸಿರುವುದು ನಿಜ ಎಂದು ಭೂಕಂಪನದ ರಾಷ್ಟ್ರೀಯ ಕೇಂದ್ರ ಖಚಿತಪಡಿಸಿದೆ.
ವೀಕ್ಷಿಸಿ: ಬೈಕ್ ಹಿಡಿಯುವ ಭಯದಲ್ಲಿ ಚೆಕ್‌ಪೋಸ್ಟ್ ಕೆಳಗೆ ನುಗ್ಗಲು ಯತ್ನ: ಸ್ನೇಹಿತನ ಸಾವಿಗೆ ಕಾರಣವಾದ ಸವಾರ
ಎನ್‌ಸಿಎಸ್ ಪ್ರಕಾರ, ಭೂಮಿಯ 22 ಕಿ.ಮೀ ಆಳದಲ್ಲಿ, 30.94 ಅಕ್ಷಾಂಶ, 79.44 ರೇಖಾಂಶದಲ್ಲಿ ಭೂಮಿ ನಡುಗಿದೆ.