ಹಲ್ದ್ವಾನಿ(ಉತ್ತರಾಖಂಡ): ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬ ಮಾಡುತ್ತಿದ್ದ ವಂಚನೆ ಬಯಲಿಗೆ ತರುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಆತನ ಖಾತೆಯಲ್ಲಿ 10 ತಿಂಗಳಲ್ಲಿ 1 ಕೋಟಿ ರೂ. ಜಮಾವಣೆ ಆಗಿರುವುದು ತಿಳಿದು ಬಂದಿದೆ.
ಉತ್ತರಾಖಂಡದ ಅಜ್ಮೀರ್ ನಿವಾಸಿ ರಂಜಿತ್ ವೃತ್ತಿಯಲ್ಲಿ ಆಟೋ ಚಾಲಕನೆಂದು ಗುರುತಿಸಿಕೊಂಡಿದ್ದನು. ಆದರೆ, ಸೇನೆ ಸೇರುವ ಯುವಕರಿಂದ ಹೆಚ್ಚಿನ ಪ್ರಮಾಣದಲ್ಲಿ ಹಣ ಪಡೆದುಕೊಂಡು ಮೋಸ ಮಾಡುತ್ತಿದ್ದನು. ಇದರ ಜತೆಗೆ OLXನಲ್ಲಿ ಸ್ಕೂಟರ್ ಮಾರಾಟ ಮಾಡುವುದಾಗಿ ಹೇಳಿ ವ್ಯಕ್ತಿಯೊಬ್ಬನಿಂದ ಹಣ ಕೂಡ ವಂಚಿಸಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಪ್ರಕರಣ ಬೆಳಕಿಗೆ ತರುವಲ್ಲಿ ಹಲ್ದ್ವಾನಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆಟೋ ಚಾಲಕ ರಂಜಿತ್ನ ಜೈಪುರದ ಐಸಿಐಸಿಐ ಬ್ಯಾಂಕ್ ಖಾತೆಯಲ್ಲಿ ಕಳೆದ 10 ತಿಂಗಳಲ್ಲಿ 1 ಕೋಟಿಗೂ ಹೆಚ್ಚಿನ ವಹಿವಾಟು ನಡೆದಿದೆ. ಇದರ ಬಗ್ಗೆ ತನಿಖೆ ಆರಂಭಿಸಿದಾಗ ಮಹತ್ವದ ಮಾಹಿತಿ ಬಹಿರಂಗಗೊಂಡಿದೆ. ಇತನೊಂದಿಗೆ ಇತರರು ಶಾಮೀಲಾಗಿದ್ದರು ಎನ್ನಲಾಗಿದ್ದು, ಅವರ ಬಂಧನಕ್ಕಾಗಿ ಇದೀಗ ಶೋಧಕಾರ್ಯ ಆರಂಭ ಮಾಡಲಾಗಿದೆ. ಪ್ರಮುಖ ಆರೋಪಿ ರಂಜಿತ್ನ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ತಾನು ಮಾಡಿರುವ ಮೋಸ ಒಪ್ಪಿಕೊಂಡಿದ್ದಾನೆ.
ತನಿಖೆ ವೇಳೆ ಅನೇಕ ರಾಜ್ಯದ ಯುವಕರಿಗೆ ವಂಚನೆ ಮಾಡಿದ್ದು, ಅದರಿಂದಲೇ ಕೋಟ್ಯಂತರ ರೂ. ಸಂಪಾದನೆ ಮಾಡಿದ್ದಾನೆ. ಇತನ ಬಳಿ ಮೂರು ಆಟೋಗಳಿದ್ದು, ಅವುಗಳನ್ನ ಕೃತ್ಯಕ್ಕಾಗಿ ಬಳಸಿಕೊಳ್ಳುತ್ತಿದ್ದನು ಎನ್ನಲಾಗಿದೆ.