ಪ್ರಕಾಶಂ(ಆಂಧ್ರಪ್ರದೇಶ): ಜಿಲ್ಲೆಯ ಸುರರೆಡ್ಡಿಪಾಲಂನಲ್ಲಿ ದುರಂತ ಅಂತ್ಯದ ಘಟನೆಯೊಂದು ನಡೆದಿದೆ. ರೈಲ್ವೆ ಹಳಿಗೆ ತಲೆಕೊಟ್ಟು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೊಪ್ಪೋಲು ನಿವಾಸಿ ವಿಷ್ಣುವರ್ಧನ್ ರೆಡ್ಡಿ, ವೆಂಕಟೇಶ್ವರ ಕಾಲೊನಿಯ ನಾಗಿನೇನಿ ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು. ಬೇರೆ ಬೇರೆ ಜಾತಿಯವರಾದ ಇವರು ಕೆಲವು ದಿನಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು.
![ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು](https://etvbharatimages.akamaized.net/etvbharat/prod-images/11126266_.jpg)
ಪೋಷಕರು ತಮ್ಮ ಮದುವೆಗೆ ಒಪ್ಪುವುದಿಲ್ಲ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷ್ಣುವರ್ಧನ್ ರೆಡ್ಡಿ ಎಂಜಿನಿಯರಿಂಗ್ ಎರಡನೇ ವರ್ಷ ಓದುತ್ತಿದ್ದರೆ, ನಾಗಿನೇನಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು.
ಇಬ್ಬರ ದೇಹ ರೈಲಿನ ರಭಸಕ್ಕೆ ಸಿಲುಕಿ ಛಿದ್ರವಾಗಿವೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.