ETV Bharat / bharat

ಟ್ವಿಟರ್​ನಲ್ಲಿ ಸದ್ದು ಮಾಡುತ್ತಿದೆ ರೈತರ ಟ್ರ್ಯಾಕ್ಟರ್​ ರ‍್ಯಾಲಿ: 6ನೇ ಸ್ಥಾನದಲ್ಲಿದೆ #HistoricTractorMarch

ಟ್ವಿಟ್ಟರ್​ನಲ್ಲಿ #HistoricTractorMarch ಆರನೇ ಸ್ಥಾನದಲ್ಲಿ ಟ್ರೆಂಡಿಂಗ್ ಆಗಿದೆ. ಇದು ಟ್ವಿಟರ್​​ ಸೇರಿದಂತೆ ಸಾಮಾಜಿಕ ಜಾಲತಾಣದ ಇಂದಿನ ಟ್ರೆಂಡಿಂಗ್​ ಸುದ್ದಿಯಾಗಿ ಹೊರ ಹೊಮ್ಮುತ್ತಿದೆ.

#HistoricTractorMarch
#HistoricTractorMarch
author img

By

Published : Jan 26, 2021, 10:14 AM IST

ನವದೆಹಲಿ: ಮೋದಿ ಸರ್ಕಾರವನ್ನ ನಡುಗುವಂತೆ ಮಾಡಿರುವ ರೈತರ ಟ್ರ್ಯಾಕ್ಟರ್​ ರ‍್ಯಾಲಿ, ಟ್ವಿಟರ್​​ ಸೇರಿದಂತೆ ಸಾಮಾಜಿಕ ಜಾಲತಾಣದ ಇಂದಿನ ಟ್ರೆಂಡಿಂಗ್​ ಸುದ್ದಿಯಾಗಿ ಹೊರ ಹೊಮ್ಮುತ್ತಿದೆ. ನೆಟ್ಟಿಗರು #HistoricTractorMarch ಬಗ್ಗೆ ನಿರಂತರವಾಗಿ ಟ್ವೀಟ್ ಮಾಡುತ್ತಿದ್ದಾರೆ.

ಇದು ಟ್ವಿಟ್ಟರ್​ನಲ್ಲಿ #HistoricTractorMarch ಆರನೇ ಸ್ಥಾನದಲ್ಲಿ ಟ್ರೆಂಡಿಂಗ್ ಆಗಿದೆ. ನಿಮ್ಮ ಜಾತಿ, ಧರ್ಮ, ರಾಜ್ಯ, ನಿಮ್ಮ ಭಾಷೆ, ರಾಜಕೀಯ ಸಂಬಂಧ ಹೀಗೆ ಎಲ್ಲವನ್ನೂ ಇವತ್ತು ಮರೆತು ಬಿಡಿ ಎಂದು ಟ್ವಿಟರ್ ಬಳಕೆದಾರರೊಬ್ಬರು ಬರೆದು ಕೊಂಡಿದ್ದಾರೆ.

ದೇಶದ ರೈತರ ಪರ ಕೈ ಜೋಡಿಸಿ. 2021ರ ಜನವರಿ 26ರಂದು ಭಾರತದ ಇತಿಹಾಸದಲ್ಲಿ ಟ್ರ್ಯಾಕ್ಟರ್ ಯಾತ್ರೆ ಅವೀಸ್ಮರಣೀಯವಾಗಲಿದೆ ಎಂದು ಬರೆದುಕೊಂಡಿದ್ದಾರೆ. ಸಿಂಘು ಗಡಿಯಿಂದ ಪಾದಯಾತ್ರೆಯಲ್ಲಿ ಭಾಗವಹಿಸುವ ಲಕ್ಷಾಂತರ ಟ್ರ್ಯಾಕ್ಟರ್ ಮತ್ತು ಟ್ರಾಲಿಗಳು ಈಗಾಗಲೇ ದೆಹಲಿ ತಲುಪಿದ್ದು, ರೈತ ಧ್ವಜಗಳೊಂದಿಗೆ ರಾಷ್ಟ್ರ ಧ್ವಜವನ್ನ ಅಲಂಕರಿಸಲಾಗಿದೆ ಎಂದು ಗುರ್ ಪ್ರೀತ್ ಕೌರ್ ಎಂಬುವವರು ಬರೆದುಕೊಂಡಿದ್ದಾರೆ. ಈ ದಿನವನ್ನು ಪುಸ್ತಕ ಮತ್ತು ಮನಸ್ಸಿನಲ್ಲಿ ಶಾಶ್ವತವಾಗಿ ಬರೆದಿಟ್ಟುಕೊಳ್ಳಿ ಎಂದು ಒಬ್ಬರು ಟ್ವೀಟ್​ ಮಾಡಿದ್ದರೆ, ಮತ್ತೊಬ್ಬ ಈ ಇತಿಹಾಸದ ಭಾಗವಾಗಿರುವುದಕ್ಕೆ ಹೆಮ್ಮೆ ಪಡುತ್ತೇನೆ. ಇದು ಪ್ರತಿಯೊಬ್ಬ ಭಾರತೀಯನ ಹೆಮ್ಮೆಯ ಕ್ಷಣ. ಇದು ಭಾರತೀಯ ಗಣರಾಜ್ಯೋತ್ಸವದ ಸಾರ್ಥಕ ಕ್ಷಣ ಎಂದು ಬರೆದುಕೊಂಡಿದ್ದಾನೆ.

ಈ ತಂಡದ ಪಂಜಾಬ್ ಬಳಕೆದಾರನೊಬ್ಬ ವೃದ್ಧರೊಬ್ಬರ ಜತೆ ಇರುವ ಫೋಟೋ ಶೇರ್ ಮಾಡಿ, ದೇವರು ಅವನನ್ನು ಮತ್ತು ಇತರ ಎಲ್ಲ ರೈತರನ್ನು ರಕ್ಷಿಸಬೇಕು ಎಂದು ಟ್ವೀಟಿಸಿದ್ದಾನೆ. ಅಷ್ಟೇ ಏಕೆ ನನ್ನ ತಾತ ಬದುಕಿದ್ದಿದ್ದರೆ, ಇವರು ಅವರಂತೆಯೇ ಕಾಣಬಹುದಿತ್ತು ಎಂದು ಭಾವನಾತ್ಮಕವಾಗಿ ಟ್ವೀಟಿಸಿ ಗಮನ ಸೆಳೆದಿದ್ದಾನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.