ನವದೆಹಲಿ: ಲಸಿಕೆ ಸಿಕ್ಕಾಯಿತು, ಪ್ರಕರಣಗಳು ಕಡಿಮೆಯಾಯಿತು. ಇನ್ನೇನು ಕೊರೊನಾಗೆ ಭಯ ಪಡುವ ಅಗತ್ಯವಿಲ್ಲ ಎಂದುಕೊಳ್ಳುತ್ತಿರುವಂತೆಯೇ ಮತ್ತೆ ವೈರಸ್ ಅಬ್ಬರಿಸುತ್ತಿದೆ. ದಿನೇ ದಿನೇ ಕೋವಿಡ್ ಸಾವು-ನೋವಿನ ಪ್ರಮಾಣ ಅಧಿಕವಾಗುತ್ತಿದೆ.
ಶುಕ್ರವಾರ ಒಂದೇ ದಿನ 40,953 ಸೋಂಕಿತರು ಪತ್ತೆಯಾಗಿದ್ದು, 188 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಕೊರೊನಾ ಕೇಸ್ಗಳ ಸಂಖ್ಯೆ 1,15,55,284 ಹಾಗೂ ಮೃತರ ಸಂಖ್ಯೆ 1,59,558ಕ್ಕೆ ಏರಿಕೆಯಾಗಿದೆ. 1,11,07,332 ಸೋಂಕಿತರು ಚೇತರಿಸಿಕೊಂಡಿದ್ದು, 2,88,394 ಪ್ರಕರಣಗಳು ಇನ್ನೂ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಇದನ್ನೂ ಓದಿ: ಕೊರೊನಾ ಉಪಟಳ: ಮಾರ್ಚ್ 31 ರವರೆಗೆ ಪಂಜಾಬ್ ಶಾಲಾ-ಕಾಲೇಜುಗಳು ಬಂದ್
ಇನ್ನು ಮಾರ್ಚ್ 19ರವರೆಗೆ 23 ಕೋಟಿಗೂ ಹೆಚ್ಚು (23,24,31,517) ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,60,971 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.
ಆರೋಗ್ಯ ಕಾರ್ಯಕರ್ತರು, ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು, 60 ವರ್ಷಕ್ಕಿಂತ ಮೇಲ್ಪಟ್ಟವರು, ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸೇರಿ ಈವರೆಗೆ ಒಟ್ಟು 4,20,63,392 ಮಂದಿಗೆ ಲಸಿಕೆ ನೀಡಲಾಗಿದೆ.