ನವದೆಹಲಿ : ನಾಳೆಯಿಂದ ಭಾರತದಲ್ಲಿ ಎರಡನೇ ಹಂತದ ಕೋವಿಡ್ ವ್ಯಾಕ್ಸಿನೇಷನ್ ಅಭಿಯಾನ ಆರಂಭವಾಗಲಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮತ್ತು ಕಾಯಿಲೆಗಳಿಂದ ಬಳಲುತ್ತಿರುವ 45 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಲಸಿಕೆ ನೀಡಲಾಗುವುದು.
ಮೊದಲ ಹಂತದಲ್ಲಿ ನಿನ್ನೆಯವೆರೆಗೆ ಆರೋಗ್ಯ ಕಾರ್ಯಕರ್ತರು ಹಾಗೂ ಕೋವಿಡ್ ವಿರುದ್ಧದ ಹೋರಾಟದಲ್ಲಿರುವ ಮುಂಚೂಣಿ ಕಾರ್ಮಿಕರು ಸೇರಿ 1,43,01,266 ಮಂದಿಗೆ ಲಸಿಕೆ ನೀಡಲಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಉಚಿತವಾಗಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ 250 ರೂ. ನೀಡಿ ಪಡೆಯಬೇಕಿದೆ.
ಇದನ್ನೂ ಓದಿ: ಮಾ.1ರಿಂದ ಖಾಸಗಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ : ವ್ಯಾಕ್ಸಿನ್ ದರದ ಗೊಂದಲ ಸುಖಾಂತ್ಯ
ಕಳೆದ 24 ಗಂಟೆಗಳಲ್ಲಿ 16,752 ಪ್ರಕರಣ ಪತ್ತೆಯಾಗಿವೆ. 496 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,10,96,731 ಹಾಗೂ ಮೃತರ ಸಂಖ್ಯೆ 1,57,051ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪೈಕಿ 1,07,75,169 ಮಂದಿ ಚೇತರಿಸಿಕೊಂಡಿದ್ದಾರೆ. 1,64,511 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
-
#LargestVaccineDrive
— Ministry of Health (@MoHFW_INDIA) February 28, 2021 " class="align-text-top noRightClick twitterSection" data="
For more information on list of private hospitals being used as #COVID Vaccination Centres (CVCs), please see:
https://t.co/tbkoPvo6cQ pic.twitter.com/ezYOxrFJqW
">#LargestVaccineDrive
— Ministry of Health (@MoHFW_INDIA) February 28, 2021
For more information on list of private hospitals being used as #COVID Vaccination Centres (CVCs), please see:
https://t.co/tbkoPvo6cQ pic.twitter.com/ezYOxrFJqW#LargestVaccineDrive
— Ministry of Health (@MoHFW_INDIA) February 28, 2021
For more information on list of private hospitals being used as #COVID Vaccination Centres (CVCs), please see:
https://t.co/tbkoPvo6cQ pic.twitter.com/ezYOxrFJqW
ಫೆಬ್ರವರಿ 27ರವರೆಗೆ 11 ಕೋಟಿಗೂ ಹೆಚ್ಚು 21,62,31,106 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದೆ. ನಿನ್ನೆ ಒಂದೇ ದಿನ 7,95,723 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.