ETV Bharat / bharat

ಭಾರತದ ಕೋವಿಡ್​ ಸಮರ: ಮರಣ ಪ್ರಮಾಣ ಶೇ.1.46ಕ್ಕೆ ಇಳಿಕೆ

ದೇಶದಲ್ಲಿ ಕೊರೊನಾದಿಂದ ಗುಣಮುಖರಾದ ಪ್ರಮಾಣ ಶೇ.93.71ಕ್ಕೆ ಏರಿಕೆಯಾಗಿದ್ದು, ಸಕ್ರಿಯ ಪ್ರಕರಣಗಳ ಪ್ರಮಾಣ ಶೇ.4.83 ಹಾಗೂ ಮರಣ ಪ್ರಮಾಣ ಶೇ.1.46ಕ್ಕೆ ಇಳಿಕೆಯಾಗಿದೆ.

Total number of corona cases and deaths in India
ಭಾರತದ ಕೋವಿಡ್​ ಸಮರ
author img

By

Published : Nov 29, 2020, 10:34 AM IST

ನವದೆಹಲಿ: ಭಾರತದಲ್ಲಿ ಕೋವಿಡ್​ನಿಂದ ಮೃತಪಟ್ಟವರ ಸಂಖ್ಯೆ 1,36,696ಕ್ಕೆ ಏರಿಕೆಯಾಗಿದ್ದರೂ ಸಹ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸೋಂಕಿ​ಗೆ ಬಲಿಯಾದವರ ಸಂಖ್ಯೆ ಕಡಿಮೆಯಿದೆ. ಸತತವಾಗಿ ಕೆಲ ವಾರಗಳಿಂದ ಸಾವಿನ ಸಂಖ್ಯೆ ತಗ್ಗಿದ್ದು, ಮರಣ ಪ್ರಮಾಣ ಶೇ.1.46ಕ್ಕೆ ಇಳಿಕೆಯಾಗಿದೆ.

Total number of corona cases and deaths in India
ಆರೋಗ್ಯ ಇಲಾಖೆ ಟ್ವೀಟ್

ಕಳೆದ 24 ಗಂಟೆಗಳಲ್ಲಿ 41,810 ಸೋಂಕಿತರು ಪತ್ತೆಯಾಗಿದ್ದು, 496 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 93,92,920ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ ಶೇ.93.71 ರಷ್ಟು ಅಂದರೆ 88,02,267 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. ಉಳಿದಂತೆ ಶೇ.4.83 ರಷ್ಟು ಅಂದರೆ 4,53,956 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್​​

ನವೆಂಬರ್​ 28ರ 13,95,03,803 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 12,83,449 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.