ನವದೆಹಲಿ: ರೈತರ ಆಂದೋಲನಕ್ಕೆ ಸಂಬಂಧಿಸಿದ 'ಟೂಲ್‌ಕಿಟ್' ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 9 ರಂದು ಮುಂಬೈ ಮೂಲದ ಕಾರ್ಯಕರ್ತೆ ವಕೀಲೆ ನಿಕಿತಾ ಜಾಕೋಬ್ ಅವರ ಜಾಮೀನು ಅರ್ಜಿಯನ್ನು ಆಲಿಸುವುದಾಗಿ ದೆಹಲಿ ನ್ಯಾಯಾಲಯ ಮಂಗಳವಾರ ತಿಳಿಸಿದೆ.
ಅರ್ಜಿಗೆ ಸಮಗ್ರ ಉತ್ತರ ಸಲ್ಲಿಸಲು ಹೆಚ್ಚಿನ ಸಮಯಬೇಕು ಎಂದು ದೆಹಲಿ ಪೊಲೀಸರು ತಿಳಿಸಿದ ನಂತರ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಈ ವಿಷಯವನ್ನು ಮುಂದೂಡಿದ್ದರು.
ಓದಿ: ಟೂಲ್‌ಕಿಟ್ ವಿವಾದ ಪ್ರಕರಣ: ದಿಶಾ ರವಿಗೆ ಷರತ್ತು ಬದ್ಧ ಜಾಮೀನು
ದಿಶಾ ರವಿ ಮತ್ತು ಶಾಂತನು ಮುಲುಕ್ ಈ ಪ್ರಕರಣದಲ್ಲಿ ಪಿತೂರಿ ಮತ್ತು ದೇಶದ್ರೋಹದ ಆರೋಪ ಎದುರಿಸುತ್ತಿದ್ದಾರೆ. ಮಾರ್ಚ್ 10 ರಂದು ಅವರ ಷರತ್ತು ಬದ್ಧ ಜಾಮೀನು ಮುಗಿಯಲಿದ್ದು, ಮಾರ್ಚ್ 9 ರಂದು ವಕೀಲೆ ನಿಕಿತಾ ಜಾಕೋಬ್ ಅವರ ಜಾಮೀನು ಅರ್ಜಿಯನ್ನು ದೆಹಲಿ ನ್ಯಾಯಾಲಯ ಆಲಿಸಲಿದೆ.