ನವದೆಹಲಿ: 2022ನೇ ಸಾಲಿನ ಪ್ರತಿಷ್ಠಿತ ಅಂತರರಾಷ್ಟ್ರೀಯ 'ಬೂಕರ್ ಪ್ರಶಸ್ತಿ'ಯು ಲೇಖಕಿ ಗೀತಾಂಜಲಿ ಶ್ರೀ ಅವರ 'ಟಾಂಬ್ ಆಫ್ ಸ್ಯಾಂಡ್' ಕಾದಂಬರಿಗೆ ಲಭಿಸಿದೆ. ಈ ಕೃತಿಯನ್ನು ಅಮೆರಿಕದ ಡೇಸಿ ರಾಕ್ವೆಲ್ ಇಂಗ್ಲಿಷ್ಗೆ ಅನುವಾದಿಸಿದ್ದರು.
50 ಸಾವಿರ ಪೌಂಡ್ ಮೌಲ್ಯದ ಸಾಹಿತ್ಯ ಪ್ರಶಸ್ತಿಗೆ ಜಗತ್ತಿನ ನಾನಾ ಭಾಗಗಳಿಂದ ಅನೇಕ ಮಹತ್ವದ ಪುಸ್ತಕಗಳು ಸ್ಪರ್ಧೆಯಲ್ಲಿದ್ದವು. ಆದರೆ ಅಂತಿಮವಾಗಿ, ಗೀತಾಂಜಲಿ ಶ್ರೀ ಅವರ ಈ ಕೃತಿಗೆ ಪ್ರಶಸ್ತಿ ಲಭಿಸಿದೆ. ಇದು ಬೂಕರ್ ಪ್ರಶಸ್ತಿ ಪಡೆದ ಮೊದಲ ಹಿಂದಿ ಭಾಷೆಯ ಕಾದಂಬರಿಯಾಗಿದೆ.
-
We are delighted to announce that the winner of the #2022InternationalBooker Prize is ‘Tomb of Sand’ by Geetanjali Shree, translated from Hindi to English by @shreedaisy and published by @tiltedaxispress@Terribleman @JeremyTiang @mervatim @VascoDaGappah @VivGroskop pic.twitter.com/TqUTew0Aem
— The Booker Prizes (@TheBookerPrizes) May 26, 2022 " class="align-text-top noRightClick twitterSection" data="
">We are delighted to announce that the winner of the #2022InternationalBooker Prize is ‘Tomb of Sand’ by Geetanjali Shree, translated from Hindi to English by @shreedaisy and published by @tiltedaxispress@Terribleman @JeremyTiang @mervatim @VascoDaGappah @VivGroskop pic.twitter.com/TqUTew0Aem
— The Booker Prizes (@TheBookerPrizes) May 26, 2022We are delighted to announce that the winner of the #2022InternationalBooker Prize is ‘Tomb of Sand’ by Geetanjali Shree, translated from Hindi to English by @shreedaisy and published by @tiltedaxispress@Terribleman @JeremyTiang @mervatim @VascoDaGappah @VivGroskop pic.twitter.com/TqUTew0Aem
— The Booker Prizes (@TheBookerPrizes) May 26, 2022
ಉತ್ತರ ಪ್ರದೇಶದ ಮೈನ್‌ಪುರಿಯಲ್ಲಿ ಜನಿಸಿದ ಗೀತಾಂಜಲಿ ದೆಹಲಿ ನಿವಾಸಿ. ಇವರು ಮೂರು ಕಾದಂಬರಿಗಳು ಮತ್ತು ಹಲವು ಕಥೆಗಳನ್ನು ಬರೆದಿದ್ದಾರೆ. ಇದರಲ್ಲಿ ಹಲವು ಪುಸ್ತಕಗಳು ಇಂಗ್ಲಿಷ್, ಫ್ರೆಂಚ್, ಜರ್ಮನ್ ಹಾಗೂ ಕೊರಿಯಾ ಭಾಷೆಗಳಿಗೆ ಭಾಷಾಂತರಗೊಂಡಿವೆ.
‘ಟಾಂಬ್ ಆಫ್ ಸ್ಯಾಂಡ್’ ಬ್ರಿಟನ್ನಲ್ಲಿ ಪ್ರಕಟವಾಗಿರುವ ಅವರ ಮೊದಲ ಕೃತಿಯಾಗಿದೆ. ಈ ಕಾದಂಬರಿಯು ಉತ್ತರ ಭಾರತದ 80 ವರ್ಷದ ವೃದ್ಧೆ ತನ್ನ ಪತಿಯನ್ನು ಕಳೆದುಕೊಂಡ ಬಳಿಕ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗುವುದು ಮತ್ತು ಅದರಿಂದ ಹೊರಬರುವುದು ಸೇರಿದಂತೆ ಹಲವು ವಿಭಿನ್ನ ಕಥಾಹಂದರವನ್ನು ಒಳಗೊಂಡಿದೆ.
ಇದನ್ನೂ ಓದಿ: 2 ವರ್ಷದಲ್ಲಿ 15 ಮದುವೆ; ಇಬ್ಬರು ಮಕ್ಕಳ ತಾಯಿ: ಹನಿಮೂನ್ ಹೆಸರಲ್ಲಿ ವಂಚಿಸುತ್ತಿದ್ದವಳ ಬಂಧನ!