ಹೈದರಾಬಾದ್: ಟಾಲಿವುಡ್ ಡ್ರಗ್ಸ್ ಕೇಸ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪದ ಮೇಲೆ ಈಗಾಗಲೇ ಅನೇಕ ನಟಿ - ನಟರಿಗೆ ಸಮನ್ಸ್ ಜಾರಿಯಾಗಿದ್ದು, ಅವರ ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯ ತಯಾರಿ ನಡೆಸಿದೆ.
ಸುಮಾರು 4 ವರ್ಷಗಳ ಹಿಂದಿನ ಕೇಸ್ ಇದಾಗಿದ್ದು, 2017ರಲ್ಲಿ ತೆಲಂಗಾಣ ಪೊಲೀಸರು ಸುಮಾರು 30 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದ್ದರು. ಇದಾದ ಬಳಿಕ ಪ್ರಕರಣದ ತನಿಖೆ ಆರಂಭ ಮಾಡಿದ್ದ ಪೊಲೀಸರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದವು. ಅದರ ಆಧಾರದ ಮೇಲೆ ಪ್ರಮುಖ ನಟ - ನಟಿಯರ ವಿಚಾರಣೆಗೆ ಜಾರಿ ನಿರ್ದೇಶನಾಲಯ(ಇಡಿ) ಮುಂದಾಗಿದೆ. ಈ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆ ಆಗಿರುವುದು ಕೂಡ ಕಂಡು ಬಂದಿತ್ತು. ಇದರಲ್ಲಿ ನಟಿ - ನಟಿಯರು ಭಾಗಿಯಾಗಿದ್ದಾರಾ? ಎಂಬ ವಿಚಾರಣೆ ನಡೆಯಬೇಕಿದೆ.
ಪ್ರಮುಖವಾಗಿ ಡೈರೆಕ್ಟರ್ ಪುರಿ ಜಗನ್ನಾಥ್, ನಟಿಯರಾದ ಚಾರ್ಮಿ, ರಾಕುಲ್ ಪ್ರೀತ್ ಸಿಂಗ್, ನಟರಾದ ರಾಣಾ ದಗ್ಗುಬಾಟಿ, ರವಿ ತೇಜ್, ತಾನಿಷ್, ಮುಮ್ತಾಜ್ ಖಾನ್, ನಂದು, ತರುಣ್ ಸೇರಿದಂತೆ ಅನೇಕರಿಗೆ ಸಮನ್ಸ್ ಜಾರಿ ಮಾಡಲಾಗಿದೆ.
ಸ್ಯಾಂಡಲ್ವುಡ್ನಲ್ಲಿ ಈಗಾಗಲೇ ಡ್ರಗ್ಸ್ ಪ್ರಕರಣ ಕೇಳಿ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯರಾದ ಸಂಜನಾ ಗಲ್ರಾನಿ ಹಾಗೂ ರಾಗಿಣಿ ಬಂಧನಕ್ಕೊಳಗಾಗಿ, ರಿಲೀಸ್ ಆಗಿದ್ದಾರೆ.