ETV Bharat / bharat

ಮಂದೀಪ್ ಸಿಧು ಜನಪ್ರಿಯತೆಯ ಲಾಭ ಪಡೆಯಲು ಮುಂದಾಗಿದ್ದ ಅಮೃತಪಾಲ್..! - Gurmeet Singh Bukkanwala

ಈಗಾಗಲೇ ಮಂದೀಪ್ ಸಿಧು ಅವರ ಸಹೋದರ ನಡೆಸುತ್ತಿರುವ ''ವಾರಿಸ್ ಪಂಜಾಬ್ ದೇ'' ಎಂಬ ಸಂಘಟನೆಯ ಜನಪ್ರಿಯತೆಯ ಲಾಭ ಪಡೆಯಲು ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ''ವಾರಿಸ್ ಪಂಜ್-ಆಬ್ ದೇ'' ಅನ್ನು ರಚಿಸಿದ್ದಾರೆ ಎಂದು ಅಮೃತಪಾಲ್ ಅವರ ಆತ್ಮೀಯ ಸ್ನೇಹಿತ ಗುರ್ಮೀತ್ ಸಿಂಗ್ ಬುಕ್ಕನ್ವಾಲಾ ಅವರಿಂದ ಬಹಿರಂಗವಾಗಿದೆ.

Amritpal
ಅಮೃತಪಾಲ್
author img

By

Published : Mar 27, 2023, 7:07 PM IST

ಚಂಡೀಗಢ(ಪಂಜಾಬ್​): ಈಗಾಗಲೇ ದಿವಂಗತ ನಟ ದೀಪ್ ಸಿಧು ಅವರ ಸಹೋದರ ನಡೆಸುತ್ತಿರುವ ‘ವಾರಿಸ್ ಪಂಜಾಬ್ ದೇ’ ಸಂಘಟನೆಯ ಜನಪ್ರಿಯತೆಯನ್ನು ಲಾಭ ಪಡೆದುಕೊಳ್ಳಲು ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಅವರು ‘ವಾರಿಸ್ ಪಂಜ್-ಆಬ್ ದೇ’ ರಚಿಸಿದ್ದಾರೆ. ಅಮೃತಪಾಲ್ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ, ಪಂಜಾಬ್ ಪೊಲೀಸರು ವಶಪಡಿಸಿಕೊಂಡಿರುವ ದಾಖಲೆಗಳಿಂದ ಈ ಮಾಹಿತಿ ದೊರೆತಿದೆ.

ದಾಖಲೆಯ ಪ್ರಕಾರ, 'ವಾರಿಸ್ ಪಂಜಾಬ್ ದೇ' ಸಂಘಟನೆಯನ್ನು ವಶಪಡಿಸಿಕೊಳ್ಳಲು ವಿಫಲವಾದ ನಂತರ, ಖಲಿಸ್ತಾನ್ ಪರ ಅಮೃತಪಾಲ್ ಅದೇ ಹೆಸರಿನ 'ವಾರಿಸ್ ಪಂಜ್-ಆಬ್ ದೇ' ಮತ್ತೊಂದು ಸಂಘಟನೆಯನ್ನು ರಚಿಸಿದ್ದಾರೆ.

ಮಂದೀಪ್ ಸಿಧು ತಿಳಿಸಿದ್ದೇನು?:'ವಾರಿಸ್ ಪಂಜಾಬ್ ದೇ' ಸಂಸ್ಥೆಯನ್ನು ಉತ್ತೇಜಿಸುವ ಉದ್ದೇಶದಿಂದ 2022ರ ಜುಲೈನಲ್ಲಿ ಸ್ಥಾಪಿಸಲಾಗಿದೆ. 'ಸರ್ವ ಶಿಕ್ಷಾ ಅಭಿಯಾನ'ವು ಮಾಲಿನ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು. ಮಾದಕ ವ್ಯಸನಿ ಯುವಕರನ್ನು ಕ್ರೀಡೆಗಳತ್ತ ಆಕರ್ಷಿಸುವುದು. ನೈಸರ್ಗಿಕ ವಿಕೋಪಗಳ ಸಮಯದಲ್ಲಿ ಜನರಿಗೆ ಸಹಾಯ ಮಾಡುವುದು. ಇದು ಪದಾಧಿಕಾರಿಗಳ ಪಾತ್ರಗಳು ಮತ್ತು ಚುನಾವಣೆ ಸೇರಿದಂತೆ ಇತರ ಕಟ್ಟುನಿಟ್ಟಾದ ನಿಯಮಗಳನ್ನು ಹಾಕಿದೆ. ಪಂಜಾಬ್ ಜನತೆಗೆ ಸೇವೆ ಸಲ್ಲಿಸಲು ಬಯಸಿದ್ದ ದಿವಂಗತ ಸಹೋದರನ ಕನಸನ್ನು ನನಸಾಗಿಸುವುದು ಈ ಸಂಸ್ಥೆಯ ಉದ್ದೇಶವಾಗಿದೆ ಎಂದು ಹೇಳುತ್ತಾರೆ ಮಂದೀಪ್.

ಆಗಸ್ಟ್ 2022ರಲ್ಲಿ, ಅಮೃತಪಾಲ್ ವಿದೇಶದಿಂದ ಹಿಂದಿರುಗಿದಾಗ ವೇಳೆ 'ವಾರಿಸ್ ಪಂಜಾಬ್ ದೇ' ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಮಂದೀಪ್ ಅವುಗಳನ್ನು ಹಸ್ತಾಂತರಿಸಲು ನಿರಾಕರಿಸಿದರು ಎಂದಿದ್ದರು. ಸಿಧು ಕುಟುಂಬವು ಅಮೃತಪಾಲ್ ಅವರನ್ನು ಸಿದ್ಧಾಂತದಲ್ಲಿ ಮಂದೀಪ್ ಅವರ ಉತ್ತರಾಧಿಕಾರಿ ಎಂದು ಒಪ್ಪಿಕೊಳ್ಳಲು ನಿರಾಕರಿಸಲಾಯಿತು. 2022ರ ಫೆಬ್ರವರಿಯಲ್ಲಿ ನಡೆದ ದುರಂತ ರಸ್ತೆ ಅಪಘಾತದ ಮೊದಲು ಅಮೃತಪಾಲ್ ಅವರ ಫೋನ್ ಸಂಖ್ಯೆ ಬಂದ್​ ಆಗಿತ್ತು ಎಂದರು. ಆಗ ಇದ್ದಕ್ಕಿದ್ದಂತೆ, 'ವಾರಿಸ್ ಪಂಜ್-ಆಬ್ ದೇ' ಎಂಬ ಹೊಸ ಸಂಘಟನೆಯು ಹುಟ್ಟಿಕೊಂಡಿದೆ. ಅದರೊಂದಿಗೆ ಮಂದೀಪ್ ಸಿಧು ಅವರ ಅಧಿಕೃತ ಫೇಸ್​ಬುಕ್​ ಪುಟವನ್ನು ಲಿಂಕ್ ಮಾಡಲಾಗಿದೆ. ಇದನ್ನು 2021ರ ಡಿಸೆಂಬರ್ 15ರಂದು ಮೊಗಾ ಜಿಲ್ಲೆಯಲ್ಲಿ ನೋಂದಾಯಿಸಲಾಗಿದೆ ಎಂದು ಫೇಸ್​ಬುಕ್​ನಲ್ಲಿ ಬರೆಯಲಾಗಿದೆ.

ಗುರ್ಮೀತ್ ಸಿಂಗ್ ಹೇಳಿದ್ದೇನು?: ಫೇಸ್​ಬುಕ್ ಪೇಜ್ ಫಾಲೋವರ್​ಗಳ ಸಂಖ್ಯೆ ಹೆಚ್ಚಿದ್ದು, ಮಂದೀಪ್ ಸಿಧು ರಚಿಸಿದ ಸಂಸ್ಥೆಯನ್ನು ಅಮೃತ್ ಪಾಲ್ ಕೈಗೆತ್ತಿಕೊಂಡಿದ್ದಾರೆ ಎಂದು ನಂಬಿದ್ದವರಲ್ಲಿ ಗೊಂದಲ ಮೂಡಿದೆ. ಅಮೃತಪಾಲ್ ವಿರುದ್ಧ ನಡೆಯುತ್ತಿರುವ ವಿಚಾರಣೆಯ ಸಂದರ್ಭದಲ್ಲಿ ಬೆಳಕಿಗೆ ಬಂದ ಕೆಲವು ದಾಖಲೆಗಳು ತಿಳಿಸುವಂತೆ, 'ವಾರಿಸ್ ಪಂಜ್-ಆಬ್ ದೇ' ಈ ಹಿಂದೆಯೇ ಸ್ಥಾಪನೆಯಾಗಿದೆ ಎಂಬುದನ್ನು ಸೂಚಿಸುತ್ತದೆ. ಸಂಸ್ಥೆಯ ನೋಂದಾಯಿತ ವಿಳಾಸ ಗುರುನಾನಕ್ ಫರ್ನಿಚರ್ ಸ್ಟೋರ್ ಆಗಿದ್ದು, ಮೊಗಾ ಜಿಲ್ಲೆಯ ದುನೆಕೆ ಗ್ರಾಮದಲ್ಲಿ ಅಮೃತಪಾಲ್ ಅವರ ನಿಕಟವರ್ತಿ ಗುರ್ಮೀತ್ ಸಿಂಗ್ ಬುಕ್ಕನ್ವಾಲಾ ಒಡೆತನದಲ್ಲಿದೆ. ಅಮೃತಪಾಲ್ ವಿರುದ್ಧ ನಡೆಯುತ್ತಿರುವ ವಿಚಾರಣೆಯಲ್ಲಿ ಗುರ್ಮೀತ್​ನನ್ನು ಬಂಧಿಸಿ ಅಸ್ಸೋಂನ ದಿಬ್ರುಗಢ ಸೆಂಟ್ರಲ್ ಜೈಲಿಗೆ ಕಳುಹಿಸಲಾಗಿದೆ. ವಿಚಾರಣೆಯ ಸಮಯದಲ್ಲಿ ಗುರ್ಮೀತ್, ಈ ಸಂಸ್ಥೆಯನ್ನು ಬಹಳ ವರ್ಷಗಳ ಹಿಂದೆಯೇ ಸ್ಥಾಪಿಸಲಾಗಿದೆ ಎಂದು ಹೇಳಿದ್ದಾನೆ.

ಇದನ್ನೂ ಓದಿ: ಕ್ಯಾಲಿಫೋರ್ನಿಯಾದ ಗುರುದ್ವಾರದಲ್ಲಿ ಶೂಟೌಟ್‌: ಇಬ್ಬರಿಗೆ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.