ETV Bharat / bharat

ಆಕ್ಸಿಸ್​ ಬ್ಯಾಂಕ್​ ಮ್ಯಾನೇಜರ್​​​ನಿಂದ ಐಸಿಐಸಿಐ ಬ್ಯಾಂಕ್ ಲೂಟಿ: ತಡೆಯಲು ಬಂದ ಅಧಿಕಾರಿಯ ಕೊಲೆ - ಐಸಿಐಸಿಐ ಬ್ಯಾಂಕಿನಲ್ಲಿ ದರೋಡೆಗೆ ವಿಫಲ ಯತ್ನ

ಆಕ್ಸಿಸ್ ಬ್ಯಾಂಕ್ ಶಾಖೆಯ ಮ್ಯಾನೇಜರ್ ಐಸಿಐಸಿಐ ಬ್ಯಾಂಕಿನಲ್ಲಿ ದರೋಡೆಗೆ ಯತ್ನಿಸಿ ವಿಫಲಗೊಂಡಿದ್ದಾನೆ. ಆದರೆ, ಈ ವೇಳೆ ಮತ್ತು ಐಸಿಐಸಿಐ ಬ್ಯಾಂಕಿನ ಅಧಿಕಾರಿಗೆ ಇರಿದು ಕೊಲೆ ಮಾಡಿದ್ದಾನೆ.

ಆಕ್ಸಿಸ್​ ಬ್ಯಾಂಕ್​ ಮ್ಯಾನೇಜರ್​​​ನಿಂದ  ಐಸಿಐಸಿಐ ಬ್ಯಾಂಕ್ ಲೂಟಿ

author img

By

Published : Jul 30, 2021, 4:33 PM IST

ಪಾಲ್ಘರ್ (ಮಹಾರಾಷ್ಟ್ರ): ಆಕ್ಸಿಸ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕನೇ ಐಸಿಐಸಿಐ ಬ್ಯಾಂಕಿನಲ್ಲಿ ದರೋಡೆಗೆ ವಿಫಲ ಯತ್ನ ನಡೆಸಿದ್ದಾನೆ. ಈ ವೇಳೆ ಶಾಖೆಯ ಐಸಿಸಿಐ ವ್ಯವಸ್ಥಾಪಕರನ್ನು ಇರಿದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಐಸಿಐಸಿಐ ಬ್ಯಾಂಕಿನ ವಿರಾರ್ ಪೂರ್ವ ಶಾಖೆಯಲ್ಲಿ ಬ್ಯಾಂಕಿಂಗ್ ಸಮಯ ಮುಗಿದ ನಂತರ ಗುರುವಾರ ರಾತ್ರಿ 8 ಗಂಟೆ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ.

ಆಕ್ಸಿಸ್​ ಬ್ಯಾಂಕ್​ ಮ್ಯಾನೇಜರ್​​​ನಿಂದ  ಐಸಿಐಸಿಐ ಬ್ಯಾಂಕ್ ಲೂಟಿ
ಆಕ್ಸಿಸ್​ ಬ್ಯಾಂಕ್​ ಮ್ಯಾನೇಜರ್​​​ನಿಂದ ಐಸಿಐಸಿಐ ಬ್ಯಾಂಕ್ ಲೂಟಿ

ವಿರಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಸುರೇಶ್ ವಾರಡೆ ಹೇಳುವ ಪ್ರಕಾರ, ಆರೋಪಿ ಅನಿಲ್ ದುಬೆಯು ಐಸಿಐಸಿಐ ಬ್ಯಾಂಕ್‌ನ ದೀರ್ಘಕಾಲದ ಉದ್ಯೋಗಿಯಾಗಿದ್ದ. ಈಗ ನೈಗಾಂವ್ ಆಕ್ಸಿಸ್ ಬ್ಯಾಂಕ್ ಶಾಖೆಯ ವ್ಯವಸ್ಥಾಪಕನಾಗಿ ಕೆಲಸ ಮಾಡುತ್ತಿದ್ದು ಆರೋಪಿಯನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ದುಬೆ ಮತ್ತು ಐಸಿಐಸಿಐ ಬ್ಯಾಂಕ್ ಡೆಪ್ಯೂಟಿ ಮ್ಯಾನೇಜರ್ ಯೋಗಿತಾ ನಿಶಾಂತ್ ಚೌಧರಿ ಮತ್ತು ಅವರ ಕ್ಯಾಷಿಯರ್ ಸಹೋದ್ಯೋಗಿ ಶ್ರದ್ಧಾ ದೇವ್ರುಖ್ಕರ್ ಅವರ ನಡುವೆ ಈ ವೇಳೆ ಸಂಘರ್ಷ ಜರುಗಿದೆ. ಲೂಟಿ ಮಾಡಿದ ಹಣವನ್ನು ಚೀಲದೊಂದಿಗೆ ಪರಾರಿಯಾಗಲು ಪ್ರಯತ್ನಿಸುವ ವೇಳೆ ಚಾಕುವಿನಿಂದ ಇರಿದಿದ್ದಾನೆ. ಅದರೆ, ಬ್ಯಾಂಕಿನಿಂದ ಹೊರಗೆ ಬಂದಾಗ ಸ್ಥಳೀಯರು ಇವರನ್ನು ಸೆರೆಹಿಡಿದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.