ETV Bharat / bharat

ಹುಡುಗಿ ಜೊತೆ ಓಡಿ ಹೋದ ಮಗ.. ವಿದ್ಯುತ್​ ಕಂಬಕ್ಕೆ ಕಟ್ಟಿ ಹಾಕಿ ತಾಯಿಗೆ ಥಳಿತ! - ಯುವತಿ ಜೊತೆ ಓಡಿ ಹೋದ ಮಗನ ತಾಯಿ ಮೇಲೆ ಹಲ್ಲೆ

TN Woman tied to lamp beaten: ಪರಸ್ಪರ ಪ್ರೀತಿಸುತ್ತಿದ್ದ ಜೋಡಿವೊಂದು ಓಡಿಹೋಗಿದ್ದು, ಇದರಿಂದ ಆಕ್ರೋಶಗೊಂಡಿರುವ ಯುವತಿಯ ಕುಟುಂಬಸ್ಥರು ಯುವಕನ ತಾಯಿಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಅಮಾನವೀಯ ರೀತಿ ಥಳಿಸಿದ್ದಾರೆ. ತಮಿಳುನಾಡಿನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.

TN Woman tied to lamp
TN Woman tied to lamp
author img

By

Published : Jan 27, 2022, 3:37 PM IST

ವಿರುಧುನಗರ್(ತಮಿಳುನಾಡು): ಯುವಕನೋರ್ವ ಗ್ರಾಮದ ಯುವತಿ ಜೊತೆ ಓಡಿ ಹೋಗಿದ್ದಕ್ಕೆ ಆತನ ತಾಯಿಯನ್ನ ವಿದ್ಯುತ್​ ಕಂಬಕ್ಕೆ ಕಟ್ಟಿ ಹಾಕಿ ಥಳಿಸಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ವಿರುಧುನಗರ್​​​ ಜಿಲ್ಲೆಯ ಅರುಪ್ಪುಕೊಟ್ಟೈನ 43 ವರ್ಷದ ಮೀನಾಕ್ಷಿ ಥಳಿತಕ್ಕೊಳಗಾದವರು.

ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಮಹಿಳೆಯೋರ್ವಳ ಮೇಲೆ ಹಲ್ಲೆ

ಮಹಿಳೆಯ ಮಗ ಶಕ್ತಿಶಿವ(24) ಚೆನ್ನೈನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದು, ಅದೇ ಗ್ರಾಮದ ಭುವನೇಶ್ವರಿ(19) ಎಂಬಾಕೆ ಜೊತೆ ಓಡಿ ಹೋಗಿದ್ದಾನೆ. ಇದರ ಬೆನ್ನಲ್ಲೇ ಈ ಅಮಾನವೀಯ ಘಟನೆ ನಡೆದಿದೆ. ಕಳೆದ ಕೆಲ ತಿಂಗಳಿಂದ ಈ ಜೋಡಿ ಪರಸ್ಪರ ಪ್ರೀತಿಸುತ್ತಿತ್ತು. ಆದರೆ, ಎರಡು ಕುಟುಂಬದಿಂದ ಇದಕ್ಕೆ ವಿರೋಧ ವ್ಯಕ್ತವಾಗಿತ್ತು ಎನ್ನಲಾಗ್ತಿದೆ.

ಜನವರಿ 22ರಂದು ಶಕ್ತಿಶಿವ ಭುವನೇಶ್ವರಿ ಜೊತೆ ಮನೆಯಿಂದ ಪರಾರಿಯಾಗಿದ್ದಾನೆ.ಇದರಿಂದ ಆಕ್ರೋಶಗೊಂಡಿರುವ ಯುವತಿಯ ತಾಯಿ ಸುಧಾ ಹಾಗೂ ಇತರೆ ಸಂಬಂಧಿಕರು ಜನವರಿ 25ರಂದು ಮೀನಾಕ್ಷಿ ಎಂಬ ಮಹಿಳೆಯನ್ನ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿರುವ ಪೊಲೀಸರು ಮಹಿಳೆಯ ರಕ್ಷಣೆ ಮಾಡಿದ್ದು, ಚಿಕಿತ್ಸೆಗೋಸ್ಕರ ಅರುಪ್ಪುಕೊಟ್ಟೈ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಇದನ್ನೂ ಓದಿರಿ: "ದೇವರು ನನ್ನ ಬ್ರಾ ಸೈಜ್​​ ತೆಗೆದುಕೊಳ್ಳುತ್ತಿದ್ದಾನೆ": ವಿವಾದಾತ್ಮಕ ಹೇಳಿಕೆ ನೀಡಿದ​ ನಟಿ ಶ್ವೇತಾ ತಿವಾರಿ

ಮೀನಾಕ್ಷಿ ನೀಡಿರುವ ದೂರಿನ ಆಧಾರದ ಮೇಲೆ ಪರಾಳಚಿ ಠಾಣೆ ಪೊಲೀಸರು ಭುವನೇಶ್ವರಿ ತಾಯಿ ಸುಧಾ ಸೇರಿದಂತೆ 14 ಮಂದಿಯ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದರ ಬೆನ್ನಲ್ಲೇ ಆರೋಪಿಗಳನ್ನ ಬಂಧನ ಮಾಡುವಂತೆ ಹಲ್ಲೆಗೊಳಗಾಗಿರುವ ಮೀನಾಕ್ಷಿ ಸಂಬಂಧಿಕರು ಆಗ್ರಹಿಸಿದ್ದಾರೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.