ETV Bharat / bharat

ಗುಂಡುಹಾರಿಸಿ ರೌಡಿಶೀಟರ್​ನನ್ನು ಬಂಧಿಸಿದ ಧೀರೆ.. ಮಹಿಳಾ ಎಸ್​ಐ ಮೀನಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ - ಈಟಿವಿ ಭಾರತ ಕನ್ನಡ

ದಿಟ್ಟ ಕೆಲಸ - ಗುಂಡುಹಾರಿಸಿ ರೌಡಿಶೀಟರ್​ನನ್ನು ಬಂಧಿಸಿದ ಮಹಿಳಾ ಎಸ್​ಐ- ಸಬ್​ ಇನ್​ಸ್ಪೆಕ್ಟರ್​ ಕಾರ್ಯಕ್ಕೆ ಭಾರೀ ಮೆಚ್ಚುಗೆ

Woman SI
ಮಹಿಳಾ ಎಸ್​ಐ
author img

By

Published : Feb 23, 2023, 10:37 AM IST

ಚೆನ್ನೈ (ತಮಿಳುನಾಡು): ಮಹಿಳಾ ಪೊಲೀಸ್​ ಅಧಿಕಾರಿಯೊಬ್ಬರು ತೋರಿದ ಸಾಹಸ ತಮಿಳುನಾಡು ಪೊಲೀಸ್​ ವಲಯದಲ್ಲಿ ಭಾರೀ ಚರ್ಚೆ ಮತ್ತು ಪ್ರಶಂಸೆಗೆ ಪಾತ್ರವಾಗಿದೆ. ಮೊದಲ ಬಾರಿಗೆ ಮಹಿಳಾ ಸಬ್​ ಇನ್​ಸ್ಪೆಕ್ಟರ್ ಗುಂಡುಹಾರಿಸಿ ರೌಡಿಶೀಟರ್​ನನ್ನು ಬಂಧಿಸಿದ್ದಾರೆ.​ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯು ಪೊಲೀಸ್​ ತಂಡದ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಎಸ್​ಐ ಮೀನಾ ಆತನಿಗೆ ಗುಂಡು ಹಾರಿಸಿದ್ದಾರೆ.

ಸೋಮವಾರ ಚೆನ್ನೈನ ಅಯನಾವರಂನಲ್ಲಿ ಟ್ರಾಫಿಕ್​ ಪೊಲೀಸ್​ ಅಧಿಕಾರಿಯ ಮೇಲೆ ಅಮಾನುಷ ಹಲ್ಲೆ ನಡೆದಿತ್ತು. ಅದರ ಬೆನ್ನಲ್ಲೇ ಆರೋಪಿ ಮೇಲೆ ಗುಂಡಿನ ದಾಳಿ ನಡೆದಿದೆ. ಟ್ರಾಫಿಕ್​ ಪೊಲೀಸರು ಅಯನಾವರಂನಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿದ್ದ ಬೆಂದು ಸೂರ್ಯ ಮತ್ತು ಆತನ ಸಹಚರರು ಸಬ್ ​ಇನ್​ಸ್ಪೆಕ್ಟರ್​ ಶಂಕರ್​ ಅವರ ಮೇಲೆ ಕಬ್ಬಿಣದ ರಾಡ್​ನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಬಳಿಕ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಬೆಂದು ಸೂರ್ಯ ತಲೆಮರೆಸಿಕೊಂಡಿದ್ದ.

ಸುಳಿವಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ನೆರೆಯ ತಿರುವಳ್ಳೂರು ಜಿಲ್ಲೆಯ ಅಕ್ಕನ ಮನೆಯಲ್ಲಿದ್ದ ಸೂರ್ಯನನ್ನು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ಆತನನ್ನು ಚೆನ್ನೈಗೆ ಕರೆತರುವಾಗ ವಾಷ್​ರೂಂ ತೆರಳಲು ವಾಹನ ನಿಲ್ಲಿಸುವಂತೆ ಮನವಿ ಮಾಡಿದ್ದಾನೆ. ಈ ವೇಳೆ ಹೊಸ ಅವಡಿ ರಸ್ತೆಯ ಬಳಿ ಗಾಡಿ ನಿಲ್ಲಿಸಿದ್ದ ವೇಳೆ ರಸ್ತೆ ಬದಿಯ ಜ್ಯೂಸ್​ ಅಂಗಡಿಗೆ ತೆರಳಿ ಚಾಕು ತೆಗೆದುಕೊಂಡು ಬಂದು ಏಕಾಏಕಿ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ದಾಳಿಯಲ್ಲಿ ಇಬ್ಬರು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಕಟ್ಟಿ ಹಾಕಿದ್ರೂ ಸಿಂಹದ ಮರಿಗಳೆದುರು ಸಾಮರ್ಥ್ಯ ಪ್ರದರ್ಶಿಸಿದ ಗೂಳಿ: ವಿಡಿಯೋ

ಈ ವೇಳೆ ಎಸ್​ಐ ಮೀನಾ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಚಾಕುವನ್ನು ಬಿಟ್ಟು ಶರಣಾಗುವಂತೆ ಸೂರ್ಯನಿಗೆ ಎಚ್ಚರಿಕೆ ನೀಡಿದ್ದಾರೆ. ಆದರೆ ಇದಕ್ಕೆಲ್ಲಾ ಕ್ಯಾರೇ ಅನ್ನದೇ ಸೂರ್ಯ ತಪ್ಪಿಸಿಕೊಳ್ಳಲು ನೋಡಿದ್ದು, ಮೀನಾ ಆತನಿಗೆ ಮೊಣಕಾಲಿಗೆ ಗುಂಡು ಹಾರಿಸಿದ್ದಾರೆ. ಬಳಿಕ ಗಾಯಗೊಂಡ ಪೊಲೀಸರನ್ನು ಮತ್ತು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ತಮಿಳುನಾಡಿನಲ್ಲಿ ಆರೋಪಿಯ ಮೇಲೆ ಗುಂಡು ಹಾರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಗೆ ಎಸ್​ಐ ಮೀನಾ ಪಾತ್ರರಾಗಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಆರೋಪಿಗಳನ್ನು ಹಿಡಿಯಲು ಪೊಲೀಸರು ಗುಂಡಿನ ದಾಳಿ ನಡೆಸಿದ ಮೂರನೇ ನಿದರ್ಶನ ಇದಾಗಿದೆ.

ಈ ಬಗ್ಗೆ ಪೊಲೀಸ್​ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, "ಕರ್ತವ್ಯದಲ್ಲಿದ್ದ ಇಬ್ಬರು ಪೊಲೀಸರ ಮೇಲೆ ರೌಡಿ ಸೂರ್ಯ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಸಬ್​ ಇನ್​ಸ್ಪೆಕ್ಟರ್​ ಗಾಳಿಯಲ್ಲಿ ಗುಂಡು ಹಾರಿಸಿದ್ದು ಶರಣಾಗುವಂತೆ ಹೇಳಿದ್ದಾರೆ. ಆದರೆ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರಿಂದ ಮೀನಾ ಸೂರ್ಯನ ಮೊಣಕಾಲಿಗೆ ಗುಂಡು ಹಾರಿಸಿದ್ದಾರೆ. ಆತನ ವಿರುದ್ಧ ಹಲವು ಕ್ರಿಮಿನಲ್​ ಕೇಸ್​ಗಳಿವೆ" ಎಂದು ತಿಳಿಸಿದ್ದಾರೆ. "ಗಾಯಗೊಂಡಿರುವ ಪೊಲೀಸರು ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಹೇಳಿದ್ದಾರೆ. ಮಹಿಳಾ ಪೊಲೀಸ್​ ಅಧಿಕಾರಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಮಾರಣಾಂತಿಕವಲ್ಲದಿದ್ದರೂ ಧೈರ್ಯ ತುಂಬಿ ಆರೋಪಿಗೆ ಗುಂಡಿಕ್ಕಿ ಹಿಡಿದ ರೀತಿ ಹಲವಾರು ಅಧಿಕಾರಿಗಳ ಪ್ರಶಂಸೆಗೆ ಪಾತ್ರವಾಗಿದೆ.

ಇದನ್ನೂ ಓದಿ: ಕೊರೊನಾಗೆ ಹೆದರಿ 3 ವರ್ಷದಿಂದ ಮನೆಯಲ್ಲೇ ಲಾಕ್​ ಆಗಿದ್ದ ತಾಯಿ, ಮಗು ರಕ್ಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.