ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಸೈಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಅರುಣಾಚಲ ಪ್ರದೇಶವನ್ನು ಪಾಕಿಸ್ತಾನ ಮತ್ತು ಚೀನಾದ ಭಾಗವೆಂದು ತಪ್ಪಾಗಿ ತೋರಿಸಿರುವ ಕುರಿತು ತೃಣಮೂಲ ಕಾಂಗ್ರೆಸ್ ಸಂಸದ ಸಂತಾನು ಸೇನ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ನಾನು 'WHO COVID-19' ವೆಬ್ಸೈಟ್ ಅನ್ನು ಕ್ಲಿಕ್ ಮಾಡಿದಾಗ ಅದರಲ್ಲಿ ಬರುವ ವಿಶ್ವ ಭೂಪಟದಲ್ಲಿ ಭಾರತದ ಭಾಗವನ್ನು ಹತ್ತಿರದಿಂದ ನೋಡಿದಾಗ ಜಮ್ಮು ಮತ್ತು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಿರುವುದು ಹಾಗೂ ಅರುಣಾಚಲ ಪ್ರದೇಶ ಚೀನಾಗೆ ಸೇರಿರುವುದನ್ನ ತೋರಿಸುತ್ತಿದೆ. ಇದರಲ್ಲಿ ಕೊರೊನಾ ಅಂಕಿ - ಅಂಶ ಬೇರೆ ಬೇರೆಯಾಗಿ ತೋರಿಸುತ್ತಿದ್ದು, ಆದಷ್ಟು ಬೇಗ ಕೇಂದ್ರ ಸರ್ಕಾರ ಇದರ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನ ಕೈಗೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಇದನ್ನು "ಅಂತಾರಾಷ್ಟ್ರೀಯ ಸಮಸ್ಯೆ" ಎಂದು ಬಣ್ಣಿಸಿದ ಸೇನ್, ಸರ್ಕಾರವು ಈ ವಿಚಾರದಲ್ಲಿ ಹೆಚ್ಚು ಜಾಗರೂಕತೆಯಿಂದ ಇರಬೇಕು. ಸಮಸ್ಯೆ ದೊಡ್ಡದಾಗುವ ಮೊದಲೇ ಕ್ರಮ ತೆಗೆದುಕೊಳ್ಳಬೇಕು. ಇಷ್ಟು ದೊಡ್ಡ ತಪ್ಪನ್ನು ಇಷ್ಟು ದಿನ ಹೇಗೆ ನಿರ್ಲಕ್ಷಿಸಲಾಯಿತು ಎಂದು ಪತ್ರದಲ್ಲಿ ಹೇಳಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ