ಕೋಲ್ಕತ್ತಾ: ದೇಶದಲ್ಲಿ ಎರಡನೇ ಹಂತವ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಕೊರೊನಾ ಸೋಂಕಿತ ಪ್ರಕರಣ ದಾಖಲಾಗುತ್ತಿವೆ. ಇದರ ಮಧ್ಯೆ ಸಾವಿರಾರು ಜನರು ಡೆಡ್ಲಿ ವೈರಸ್ಗೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಐಪಿಎಲ್ ನಡೆಸುವ ಅವಶ್ಯಕತೆ ಇದೆಯಾ? ಎಂದು ಟಿಎಂಸಿ ಸಂಸದೆ ಪ್ರಶ್ನೆ ಮಾಡಿದ್ದಾರೆ.
-
Also why is an IPL happening in the middle of this deathly chaos?
— Mahua Moitra (@MahuaMoitra) May 1, 2021 " class="align-text-top noRightClick twitterSection" data="
Do Indian sport lovers really want this macabre “distraction”?
">Also why is an IPL happening in the middle of this deathly chaos?
— Mahua Moitra (@MahuaMoitra) May 1, 2021
Do Indian sport lovers really want this macabre “distraction”?Also why is an IPL happening in the middle of this deathly chaos?
— Mahua Moitra (@MahuaMoitra) May 1, 2021
Do Indian sport lovers really want this macabre “distraction”?
ತೃಣಮೂಲ ಕಾಂಗ್ರೆಸ್ನ ಸಂಸದೆಯಾಗಿರುವ ಮಹುವಾ ಮೊಯಿತ್ರಾ ಟ್ವೀಟ್ ಮಾಡಿ,ಕ್ರೀಡಾಭಿಮಾನಿಗಳಲ್ಲಿ ಪ್ರಶ್ನೆ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಹಾವಳಿ ಜೋರಾಗಿರುವ ಇಂತಹ ಸಂದರ್ಭದಲ್ಲಿ ಐಪಿಎಲ್ ಏಕೆ ನಡೆಸಲಾಗುತ್ತಿದೆ? ಭಾರತೀಯ ಕ್ರೀಡಾಭಿಮಾನಿಗಳು ನಿಜವಾಗಿಯೂ ಭೀಕರ ವ್ಯಾಕುಲತೆ ಬಯಸುತ್ತಾರೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಜತೆಗೆ ಈ ತಕ್ಷಣವೇ ಟೂರ್ನಿ ಮೊಟಕುಗೊಳಿಸುವಂತೆ ಅವರು ಹೇಳಿದ್ದಾರೆ.
ಇದನ್ನೂ ಓದಿ: ಐಸಿಸಿ ಟಿ-20 ವಿಶ್ವಕಪ್ ಆಯೋಜಿಸಲು ಯುಎಇ ನಮ್ಮ 2ನೇ ಆಯ್ಕೆ : ಬಿಸಿಸಿಐ
ದೇಶದಲ್ಲಿ ಇದೀಗ ಕೊರೊನಾ ನಾಗಾಲೋಟ ಜೋರಾಗಿದ್ದು, ನಿನ್ನೆ 4 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣ ದೃಢಗೊಂಡಿದೆ. ಸದ್ಯ ದೇಶದಲ್ಲಿ 1.19 ಕೋಟಿ ಪ್ರಕರಣಗಳಿದ್ದು, 32.63 ಲಕ್ಷ ಸಕ್ರಿಯ ಕೇಸ್ಗಳಿವೆ.