ETV Bharat / bharat

ಅಂಕಲ್ ಜೀ ಕುಟುಂಬಸ್ಥರೇ ರಾಜಭವನ ಆಳುತ್ತಿದ್ದಾರೆ: ಗವರ್ನರ್ ಕಾಲೆಳೆದ​ ಟಿಎಂಸಿ ಸಂಸದೆ - ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ

ರಾಜ್ಯಪಾಲರು ಯಾವಾಗಲೂ ರಾಜ್ಯ ಸರ್ಕಾರವನ್ನು ಪ್ರಶ್ನೆ ಮಾಡುತ್ತಿರುತ್ತಾರೆ. ಆದರೆ, ನಮಗೂ ಅವರನ್ನು ಪ್ರಶ್ನಿಸುವ ಹಕ್ಕಿದೆ. ಅವರು ತಮ್ಮ ಇಡೀ ಗ್ರಾಮ ಹಾಗೂ ಕುಟುಂಬವನ್ನೇ ರಾಜಭವನದಲ್ಲಿ ತಂದು ಕೂರಿಸಿದ್ದಾರೆ ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆರೋಪಿಸಿದ್ದಾರೆ.

tmc-mp-calls-bengal-guv-uncle-ji-says-his-kin-appointed-as-officer-on-special-duty
ಅಂಕಲ್ ಜೀ ಕುಟುಂಬಸ್ಥರೇ ಪ. ಬಂಗಾಳ ರಾಜಭವನ ಆಳುತ್ತಿದ್ದಾರೆ; ಟಿಎಂಸಿ ಸಂಸದೆ ಆರೋಪ
author img

By

Published : Jun 6, 2021, 10:16 PM IST

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧಂಕರ್ ಅವರನ್ನು ಅಂಕಲ್​ ಜಿ ಎಂದು ಸಂಬೋಧಿಸಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಅಂಕಲ್​ ಜಿ ಕುಟುಂಬದ ಸದಸ್ಯರು ಹಾಗೂ ಪರಿಚಯಸ್ಥರನ್ನು ರಾಜಭವನದಲ್ಲಿ ವಿಶೇಷ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, "ಅಬ್ಭುದೋಯ್ ಸಿಂಗ್ ಶೇಖಾವತ - ರಾಜ್ಯಪಾಲರ ವಿಶೇಷ ಅಧಿಕಾರಿ, ಅಖಿಲ್ ಚೌಧರಿ - ರಾಜ್ಯಪಾಲರ ವಿಶೇಷ ಸಂವಹನಾಧಿಕಾರಿ, ಪ್ರಸಾಂತ್ ದೀಕ್ಷಿತ್ - ಶಿಷ್ಟಾಚಾರಗಳ ವಿಶೇಷ ಅಧಿಕಾರಿ, ಕೌಸ್ತವ್​ ವಾಲಿಕಾರ - ಐಟಿ ವಿಶೇಷ ಅಧಿಕಾರಿ ಮತ್ತು ಹೊಸದಾಗಿ ನೇಮಿಸಲ್ಪಟ್ಟ ವಿಶೇಷ ಅಧಿಕಾರಿ - ಕಿಶನ್ ಧಂಕರ್" ಇವರೆಲ್ಲರ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

  • Uncleji only way WB’s “grim situation” will improve is if you move your sorry self back to Delhi & find another job.

    Some suggestions:

    1. Advisor to Ajay Bisht YogiCM on how best to Thok Do opposition
    2. Advisor to Home Min on how best to hide during a pandemic https://t.co/oWLW0Ciupg

    — Mahua Moitra (@MahuaMoitra) June 6, 2021 " class="align-text-top noRightClick twitterSection" data=" ">

ಶೇಖಾವತ ಧಂಕರ್ ಅವರ ಸೋದರಳಿಯನ ಮಗ, ರುಚಿ ದುಬೆ ಇವರು ರಾಜ್ಯಪಾಲರ ಹಿಂದಿನ ಎಡಿಸಿಯಾಗಿದ್ದ ಗೋರಂಗ್ ದೀಕ್ಷಿತ್ ಅವರ ಪತ್ನಿ ಹಾಗೂ ಪ್ರಶಾಂತ್​ ದೀಕ್ಷಿತ್ ಇದೇ ಗೋರಂಗ್ ಅವರ ಸಹೋದರ ಎಂದು ಮೊಯಿತ್ರಾ ಹೇಳಿದ್ದಾರೆ.

  • And Uncleji- while you’re at it- take the extended family you’ve settled in at WB RajBhavan with you. pic.twitter.com/a8KpNjynx9

"ರಾಜ್ಯಪಾಲರು ಯಾವಾಗಲೂ ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತಿರುತ್ತಾರೆ. ಆದರೆ, ನಮಗೂ ಅವರನ್ನು ಪ್ರಶ್ನಿಸುವ ಹಕ್ಕಿದೆ. ಅವರು ತಮ್ಮ ಇಡೀ ಗ್ರಾಮ ಹಾಗೂ ಕುಟುಂಬವನ್ನೇ ರಾಜಭವನದಲ್ಲಿ ತಂದು ಕೂರಿಸಿದ್ದಾರೆ. ಒಂದು ಬಾರಿ ಕನ್ನಡಿಯಲ್ಲಿ ಅವರು ತಮ್ಮ ಮುಖ ನೋಡಿಕೊಳ್ಳಲಿ." ಎಂದು ಸಂಸದೆ ಮಹುವಾ ಮೊಯಿತ್ರಾ ವ್ಯಂಗ್ಯವಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.