ಭುವನೇಶ್ವರ್ (ಒಡಿಶಾ): ಒಡಿಶಾದಲ್ಲಿ ನಡೆದ ಭೀಕರ ರೈಲು ಅಪಘಾತದಲ್ಲಿ ಈವರೆಗೆ 233 ಪ್ರಾಣಗಳು ಬಲಿಯಾಗಿದ್ದು, ಗಾಯಾಳುಗಳ ಸಂಖ್ಯೆ 1 ಸಾವಿರಕ್ಕೆ ತಲುಪಿದೆ. ಕೋರಮಂಡಲ್ ಎಕ್ಸ್ಪ್ರೆಸ್, ಯಶವಂತರಪುರ ಹೌರಾ ಎಕ್ಸ್ಪ್ರೆಸ್ ಮತ್ತು ಗೂಡ್ಸ್ ನಡುವಿನ ತ್ರಿವಳಿ ಅಪಘಾತ ದೇಶವನ್ನೇ ಬೆಚ್ಚಿಬೀಳಿಸಿದೆ. ಘಟನೆಯ ಹೊಣೆ ಹೊತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ. ಈಗಾಗಲೇ ಕೇಂದ್ರ ಸರ್ಕಾರ ಮೃತರ ಕುಟುಂಬಗಳಿಗೆ 12 ಲಕ್ಷ ಪರಿಹಾರ ಘೋಷಿಸಿದೆ.
-
#WATCH | Odisha Train accident: At around 7pm, 10-12 coaches of the Shalimar-Chennai Coromandel Express derailed near Baleswar and fell on the opposite track. After some time, another train from Yeswanthpur to Howrah dashed into those derailed coaches resulting in the derailment… pic.twitter.com/Fixk7RVfbq
— ANI (@ANI) June 2, 2023 " class="align-text-top noRightClick twitterSection" data="
">#WATCH | Odisha Train accident: At around 7pm, 10-12 coaches of the Shalimar-Chennai Coromandel Express derailed near Baleswar and fell on the opposite track. After some time, another train from Yeswanthpur to Howrah dashed into those derailed coaches resulting in the derailment… pic.twitter.com/Fixk7RVfbq
— ANI (@ANI) June 2, 2023#WATCH | Odisha Train accident: At around 7pm, 10-12 coaches of the Shalimar-Chennai Coromandel Express derailed near Baleswar and fell on the opposite track. After some time, another train from Yeswanthpur to Howrah dashed into those derailed coaches resulting in the derailment… pic.twitter.com/Fixk7RVfbq
— ANI (@ANI) June 2, 2023
ಹೇಗಾಯ್ತು?: ಶುಕ್ರವಾರ ರಾತ್ರಿ 7 ಗಂಟೆ ಹೊತ್ತಿನಲ್ಲಿ ಈ ದುರಂತ ಸಂಭವಿಸಿದೆ. ಕೋಲ್ಕತ್ತಾದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್ಪ್ರೆಸ್ ಒಡಿಶಾದ ಬಹನಗಾ ರೈಲು ನಿಲ್ದಾಣದಲ್ಲಿ ಸಾಗುತ್ತಿದ್ದಾಗ ಹಳಿ ತಪ್ಪಿದೆ. ಇದರಿಂದ ಪಕ್ಕದ ಹಳಿಯಲ್ಲಿ ನಿಂತಿದ್ದ ರೈಲಿಗೆ ಡಿಕ್ಕಿ ಹೊಡೆದಿದೆ. ರೈಲಿನ 12 ಬೋಗಿಗಳು ಜಾರಿ ಮೂರನೇ ಹಳಿಯ ಮೇಲೆ ಬಿದ್ದಿವೆ. ಇದೇ ವೇಳೆ ಅದೇ ಮಾರ್ಗವಾಗಿ ಎದುರಿನಿಂದ ಬಂದ ಬೆಂಗಳೂರಿನಿಂದ ಹೊರಟಿದ್ದ ಹೌರಾ ಎಕ್ಸ್ಪ್ರೆಸ್ ಹಳಿತಪ್ಪಿ ಬಿದ್ದಿದ್ದ ಬೋಗಿಗಳಿಗೆ ರಭಸವಾಗಿ ಗುದ್ದಿದೆ. ಈ ವೇಳೆ ಈ ರೈಲಿನ 4 ಬೋಗಿಗಳೂ ಹಳಿತಪ್ಪಿವೆ.
-
#WATCH | Latest visuals from the site of the deadly train accident in Odisha's Balasore. Rescue operations underway
— ANI (@ANI) June 3, 2023 " class="align-text-top noRightClick twitterSection" data="
The current death toll stands at 233 pic.twitter.com/H1aMrr3zxR
">#WATCH | Latest visuals from the site of the deadly train accident in Odisha's Balasore. Rescue operations underway
— ANI (@ANI) June 3, 2023
The current death toll stands at 233 pic.twitter.com/H1aMrr3zxR#WATCH | Latest visuals from the site of the deadly train accident in Odisha's Balasore. Rescue operations underway
— ANI (@ANI) June 3, 2023
The current death toll stands at 233 pic.twitter.com/H1aMrr3zxR
ಹಳಿ ತಪ್ಪಿದ ಬೋಗಿಗಳಿಗೆ ರೈಲು ಡಿಕ್ಕಿಯಾದ ಕಾರಣ ಭೀಕರತೆ ಹೆಚ್ಚಾಗಿದೆ. ಕೆಲ ದೇಹಳು ತುಂಡಾಗಿ ಬಿದ್ದಿವೆ. ಇನ್ನೂ ಕೆಲವರು ನುಜ್ಜುಗುಜ್ಜಾದ ಬೋಗಿಯ ಒಳಗೆ ದುರ್ಮರಣಕ್ಕೀಡಾಗಿದ್ದಾರೆ. ಇಲ್ಲಿಯವರೆಗೂ ನಡೆದ ರಕ್ಷಣಾ ಕಾರ್ಯಾಚರಣೆಯಲ್ಲಿ 233 ಶವಗಳನ್ನು ಹೊರತೆಗೆಯಲಾಗಿದೆ. 1 ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದು, ಗಂಭೀರ ಗಾಯಗೊಂಡವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಎಲ್ಲರನ್ನೂ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
-
#WATCH | Latest visuals from the spot where the horrific train accident took place in Odisha's Balasore district, killing 207 people and injuring 900
— ANI (@ANI) June 2, 2023 " class="align-text-top noRightClick twitterSection" data="
Rescue operations underway pic.twitter.com/wzNzqUc4gp
">#WATCH | Latest visuals from the spot where the horrific train accident took place in Odisha's Balasore district, killing 207 people and injuring 900
— ANI (@ANI) June 2, 2023
Rescue operations underway pic.twitter.com/wzNzqUc4gp#WATCH | Latest visuals from the spot where the horrific train accident took place in Odisha's Balasore district, killing 207 people and injuring 900
— ANI (@ANI) June 2, 2023
Rescue operations underway pic.twitter.com/wzNzqUc4gp
ಶೋಕಾಚರಣೆ ಘೋಷಣೆ: ಬಾಲಸೋರ್‌ನಲ್ಲಿ ರೈಲು ಹಳಿತಪ್ಪಿ ನಡೆದ ಭೀಕರ ದುರಂತದ ಹಿನ್ನೆಲೆ ಸರ್ಕಾರ ಶನಿವಾರ ಒಂದು ದಿನದ ಶೋಕಾಚರಣೆಯನ್ನು ಘೋಷಿಸಿದೆ. ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಶೋಕಾಚರಣೆ ಘೋಷಿಸಿದ್ದು, ಎಲ್ಲ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದಾರೆ. ಸಿಎಂ ಪಟ್ನಾಯಕ್ ಅವರು ಇಂದು ಘಟನಾ ಸ್ಥಳಕ್ಕೆ ಆಗಮಿಸಿದ್ದಾರೆ.
ಉನ್ನತ ಮಟ್ಟದ ತನಿಖೆಗೆ ಆದೇಶ: ಕಂಡು ಕೇಳರಿಯದ ರೀತಿಯಲ್ಲಿ ಸಂಭವಿಸಿದ ದುರಂತದಿಂದ ಭಾರೀ ಟೀಕೆ ವ್ಯಕ್ತವಾಗಿದ್ದು, ಕೇಂದ್ರ ಸರ್ಕಾರ ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಘಟನೆಯ ಕುರಿತು ಮಾತನಾಡಿದರು ರೈಲ್ವೆ ಖಾತೆ ಸಚಿವ ಅಶ್ವಿನಿ ವೈಷ್ಣವ್, ಅಪಘಾತವು ದುರದೃಷ್ಟಕರವಾಗಿದೆ. ರೈಲು ಬೋಗಿಗಳು ಹಳಿ ತಪ್ಪಲು ಕಾರಣವೇನೆಂದು ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶನಿವಾರ ಅಪಘಾತ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದುಬಂದಿದೆ. ಭೀಕರ ಸ್ಥಳದಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಳ್ಳಲು ಖರಗ್‌ಪುರದಿಂದ ಅಧಿಕಾರಿಗಳನ್ನು ಕಳುಹಿಸಲಾಗಿದೆ.
-
#WATCH | Our focus is on rescue and relief operations. Restoration will begin after clearance from district administration. A detailed high-level inquiry will be conducted and the rail safety commissioner will also do an independent inquiry: Railways Minister Ashwini Vaishnaw… pic.twitter.com/yfCecv0FxB
— ANI (@ANI) June 3, 2023 " class="align-text-top noRightClick twitterSection" data="
">#WATCH | Our focus is on rescue and relief operations. Restoration will begin after clearance from district administration. A detailed high-level inquiry will be conducted and the rail safety commissioner will also do an independent inquiry: Railways Minister Ashwini Vaishnaw… pic.twitter.com/yfCecv0FxB
— ANI (@ANI) June 3, 2023#WATCH | Our focus is on rescue and relief operations. Restoration will begin after clearance from district administration. A detailed high-level inquiry will be conducted and the rail safety commissioner will also do an independent inquiry: Railways Minister Ashwini Vaishnaw… pic.twitter.com/yfCecv0FxB
— ANI (@ANI) June 3, 2023
ಪರಿಹಾರ ಘೋಷಣೆ: ಕೇಂದ್ರ ರೈಲ್ವೆ ಸಚಿವ ಅಶ್ಬಿನಿ ವೈಷ್ಣವ್ ಸ್ಥಳದಲ್ಲಿ ಬಿಡಾರ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈಗಾಗಲೇ ಕೇಂದ್ರ ರೈಲ್ವೆ ಇಲಾಖೆ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದರೆ, ಗಾಯಾಳುಗಳಿಗೆ ತಲಾ 2 ಲಕ್ಷ ರೂ. ಹಾಗೂ ಸಣ್ಣ ಪುಟ್ಟ ಗಾಯಗೊಂಡವರಿಗೆ ತಲಾ 50 ಸಾವಿರ ರೂ ಘೋಷಣೆ ಮಾಡಿದೆ. ಪ್ರಧಾನಿ ಮೋದಿ ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಪ್ರಧಾನಿ ಧನ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂ ಪರಿಹಾರ ಘೋಷಣೆ ಮಾಡಿದ್ದಾರೆ.
-
#WATCH | Odisha Train accident: At around 7pm, 10-12 coaches of the Shalimar-Chennai Coromandel Express derailed near Baleswar and fell on the opposite track. After some time, another train from Yeswanthpur to Howrah dashed into those derailed coaches resulting in the derailment… pic.twitter.com/Fixk7RVfbq
— ANI (@ANI) June 2, 2023 " class="align-text-top noRightClick twitterSection" data="
">#WATCH | Odisha Train accident: At around 7pm, 10-12 coaches of the Shalimar-Chennai Coromandel Express derailed near Baleswar and fell on the opposite track. After some time, another train from Yeswanthpur to Howrah dashed into those derailed coaches resulting in the derailment… pic.twitter.com/Fixk7RVfbq
— ANI (@ANI) June 2, 2023#WATCH | Odisha Train accident: At around 7pm, 10-12 coaches of the Shalimar-Chennai Coromandel Express derailed near Baleswar and fell on the opposite track. After some time, another train from Yeswanthpur to Howrah dashed into those derailed coaches resulting in the derailment… pic.twitter.com/Fixk7RVfbq
— ANI (@ANI) June 2, 2023
ವಂದೇ ಭಾರತ್ ಉದ್ಘಾಟನೆ ರದ್ದು: ರೈಲು ಅಪಘಾತದ ಘಟನೆಯ ಹಿನ್ನೆಲೆಯಲ್ಲಿ ಶನಿವಾರದ ನಡೆಯಬೇಕಿದ್ದ ಗೋವಾ- ಮುಂಬೈ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಚಾಲನೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲಿಗೆ ಹಸಿರು ನಿಶಾನೆ ತೋರಿಸುವವರಿದ್ದರು.
ಸಚಿವರ ರಾಜೀನಾಮೆಗೆ ಒತ್ತಾಯ: ಒಡಿಶಾದಲ್ಲಿ ಸಂಭವಿಸಿದ ಘನಘೋರ ತ್ರಿವಳಿ ರೈಲು ದುರಂತದ ಅಪಘಾತಕ್ಕೆ ಸಂಬಂಧಿಸಿದಂತೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಟಿಎಂಸಿ ಒತ್ತಾಯಿಸಿದೆ. ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ಕೇಂದ್ರ ಪ್ರತಿಪಕ್ಷ ನಾಯಕರ ಮೇಲೆ ಕಣ್ಣಿಡಲು ಸಾಫ್ಟ್‌ವೇರ್‌ಗಾಗಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ.
ಆದರೆ ಅಪಘಾತಗಳನ್ನು ತಡೆಯಲು ರೈಲುಗಳಲ್ಲಿ ಸಾಧನಗಳನ್ನು ಅಳವಡಿಸುವುದನ್ನು ನಿರ್ಲಕ್ಷಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ವಂದೇ ಭಾರತ್ ರೈಲುಗಳು ಮತ್ತು ಹೊಸದಾಗಿ ನಿರ್ಮಿಸಲಾದ ರೈಲು ನಿಲ್ದಾಣಗಳ ಉದ್ಘಾಟನೆಯಲ್ಲಿ ತೊಡಗಿದೆ. ಆದರೆ, ಸುರಕ್ಷತಾ ಕ್ರಮಗಳನ್ನು ನಿರ್ಲಕ್ಷಿಸುತ್ತಿದೆ. ಹೀಗಾಗಿ ಸಚಿವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ದುರಂತವನ್ನು ರಾಜಕೀಯಗೊಳಿಸಲು ಟಿಎಂಸಿ ಪ್ರಯತ್ನಿಸುತ್ತಿದೆ ಎಂದು ಬಿಜೆಪಿ ತಿರುಗೇಟು ನೀಡಿದೆ. ಮಮತಾ ಬ್ಯಾನರ್ಜಿ ರೈಲ್ವೇ ಸಚಿವರಾಗಿದ್ದಾಗ, ರೈಲು ಅಪಘಾತಗಳು ಸಂಭವಿಸಿದ್ದವು. ಆಗ ಅವರು ರಾಜೀನಾಮೆ ನೀಡಿದ್ದರೇ ಎಂದು ಪ್ರಶ್ನಿಸಿ, ದುರಂತ ಅಪಘಾತವನ್ನು ರಾಜಕೀಯಗೊಳಿಸುವುದನ್ನು ಟಿಎಂಸಿ ನಿಲ್ಲಿಸಬೇಕು ಎಂದು ಬಿಜೆಪಿ ರಾಜ್ಯ ವಕ್ತಾರ ಸಾಮಿಕ್ ಭಟ್ಟಾಚಾರ್ಯ ಹೇಳಿದ್ದಾರೆ.
ಇದನ್ನೂ ಓದಿ: ಒಡಿಶಾದಲ್ಲಿ ಭೀಕರ ರೈಲು ಅಪಘಾತ: ಮೃತರ ಸಂಖ್ಯೆ 233ಕ್ಕೆ ಏರಿಕೆ, 900 ಮಂದಿಗೆ ಗಾಯ