ಕೋಲ್ಕತ್ತಾ : ಕಾರ್ಪೊರೇಷನ್ ಚುನಾವಣೆಯಲ್ಲಿ ಬಿಜೆಪಿಯು ಪ್ರತಿ ಅಭ್ಯರ್ಥಿಗಳಿಂದ 1 ಲಕ್ಷ ರೂ.ಗೆ ಬೇಡಿಕೆ ಇಡುತ್ತಿದೆ ಎಂದು ಆರೋಪಿಸಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) (All India Trinamool Congress ) ಪ್ರತಿಪಕ್ಷ ಬಿಜೆಪಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದೆ.
-
.@BJP4Bengal is demanding 1 LAKH FOR EACH CANDIDATE.@DrSukantaBJP, is this how you collect funds for your propaganda?
— All India Trinamool Congress (@AITCofficial) November 14, 2021 " class="align-text-top noRightClick twitterSection" data="
SHOCKING! pic.twitter.com/mO3oBEkhHN
">.@BJP4Bengal is demanding 1 LAKH FOR EACH CANDIDATE.@DrSukantaBJP, is this how you collect funds for your propaganda?
— All India Trinamool Congress (@AITCofficial) November 14, 2021
SHOCKING! pic.twitter.com/mO3oBEkhHN.@BJP4Bengal is demanding 1 LAKH FOR EACH CANDIDATE.@DrSukantaBJP, is this how you collect funds for your propaganda?
— All India Trinamool Congress (@AITCofficial) November 14, 2021
SHOCKING! pic.twitter.com/mO3oBEkhHN
ಬಿಜೆಪಿ ನಾಯಕ ಪ್ರೀತಮ್ ಸರ್ಕಾರ್(Pritam Sarkar) ಮತ್ತು ಅಪರಿಚಿತ ವ್ಯಕ್ತಿಯ ನಡುವಿನ ವಾಟ್ಸ್‌ಆ್ಯಪ್ ಕರೆ ಸಂಭಾಷಣೆಯ ಆಡಿಯೋ ಕ್ಲಿಪ್ ಅನ್ನು ಪಕ್ಷವು ಟ್ವೀಟ್ ಮಾಡಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಡಾ.ಸುಕಾಂತ ಮಜುಂದಾರ್ (Dr Sukanta Majundar) ಅವರ ಹೆಸರಿನಲ್ಲಿ ಪಾಲಿಕೆ ಚುನಾವಣೆಯಲ್ಲಿ ಪ್ರತಿ ಅಭ್ಯರ್ಥಿ ಸ್ಥಾನಕ್ಕೆ ತಲಾ 1 ಲಕ್ಷ ರೂಪಾಯಿ ನೀಡುವಂತೆ ಪ್ರೀತಮ್ ಅವರು ದೂರವಾಣಿ ಕರೆಯಲ್ಲಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಆರೋಪಗಳನ್ನು ರಾಜ್ಯ ಬಿಜೆಪಿ ನಾಯಕರು ಕಟುವಾಗಿ ತಳ್ಳಿ ಹಾಕಿದ್ದಾರೆ.