ETV Bharat / bharat

ಖಾಸಗಿ ತೆಕ್ಕೆ ಸೇರಲಿದೆ ತಿರುಪತಿ (ರೇಣಿಗುಂಟಾ) ವಿಮಾನ ನಿಲ್ದಾಣ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು ದೇಶದಲ್ಲಿ 137 ವಿಮಾನ ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ 24 ಅಂತಾರಾಷ್ಟ್ರೀಯ, 10 ಕಸ್ಟಮ್ಸ್ ಮತ್ತು 103 ದೇಶೀಯ ವಿಮಾನ ನಿಲ್ದಾಣಗಳಿವೆ. 2020-21ರಲ್ಲಿ ಅಹಮದಾಬಾದ್, ಲಕ್ನೋ, ಮಂಗಳೂರು, ಗುವಾಹಟಿ, ಜೈಪುರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಯಿತು. ಈಗ ಅಮೃತಸರ, ವಾರಣಾಸಿ, ಭುವನೇಶ್ವರ್, ಇಂದೋರ್, ರಾಯ್‌ಪುರ, ತಿರುಚಿರಾಪಳ್ಳಿ ಸೇರಿ 7 ಸಣ್ಣಪುಟ್ಟ ವಿಮಾನ ನಿಲ್ದಾಣಗಳು ಮಾರಾಟಕ್ಕೆ ಸಿದ್ಧವಾಗಿವೆ.

tirupathi-renigunta-airport-set-to-go-in-to-private-hands
ತಿರುಪತಿ(ರೇಣಿಗುಂಟಾ) ವಿಮಾನ ನಿಲ್ದಾಣ ಖಾಸಗಿ ತೆಕ್ಕೆಗೆ!
author img

By

Published : Nov 1, 2021, 5:38 PM IST

ತಿರುಪತಿ: ದೇಶದ 13 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸಿದ್ಧವಾಗಿದೆ. ಇವುಗಳಲ್ಲಿ ತಿರುಪತಿಯೂ ಸೇರಿದೆ. ಈ ಕುರಿತ ಪ್ರಸ್ತಾವನೆಯನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಅಧ್ಯಕ್ಷ ಸಂಜೀವ್ ಕುಮಾರ್ ತಿಳಿಸಿದ್ದಾರೆ.

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಏಳು ಸಣ್ಣ ಮತ್ತು ಆರು ಪ್ರಮುಖ ವಿಮಾನ ನಿಲ್ದಾಣಗಳಿಗೆ ಜಂಟಿಯಾಗಿ ಬಿಡ್ ಮಾಡಲು ಪ್ರಸ್ತಾಪಿಸಿದೆ. ಇದರ ಭಾಗವಾಗಿ ವಾರಣಾಸಿ-ಕುಶಿನಗರ, ಗಯಾ, ಅಮೃತಸರ-ಕಾಂಗ್ರಾ, ಭುವನೇಶ್ವರ-ತಿರುಪತಿ, ರಾಯ್‌ಪುರ-ಔರಂಗಾಬಾದ್, ಇಂದೋರ್-ಜಬಲ್‌ಪುರ ಮತ್ತು ತಿರುಚಿ-ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ವೈಯಕ್ತಿಕ ಯೋಜನೆಗಳಾಗಿ ಖಾಸಗಿ ವಲಯಕ್ಕೆ ಹಸ್ತಾಂತರಿಸಲಾಗುತ್ತಿದೆ.

2022-25ರ ವೇಳೆಗೆ ದೇಶದ 25 ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಮತ್ತು 20,782 ಕೋಟಿ ರೂ.ಗಳನ್ನು ಸಂಗ್ರಹಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 137 ವಿಮಾನ ನಿಲ್ದಾಣಗಳನ್ನು ಹೊಂದಿದೆ. ಇದರಲ್ಲಿ 24 ಅಂತಾರಾಷ್ಟ್ರೀಯ, 10 ಕಸ್ಟಮ್ಸ್ ಮತ್ತು 103 ದೇಶೀಯ ವಿಮಾನ ನಿಲ್ದಾಣಗಳಿವೆ. 2020-21ರಲ್ಲಿ ಅಹಮದಾಬಾದ್, ಲಕ್ನೋ, ಮಂಗಳೂರು, ಗುವಾಹಟಿ, ಜೈಪುರ ಮತ್ತು ತಿರುವನಂತಪುರಂ ವಿಮಾನ ನಿಲ್ದಾಣಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲಾಗಿದೆ. ಈಗ ಅಮೃತಸರ, ವಾರಣಾಸಿ, ಭುವನೇಶ್ವರ್, ಇಂದೋರ್, ರಾಯ್‌ಪುರ, ತಿರುಚಿರಾಪಳ್ಳಿ ಸೇರಿ 7 ಸಣ್ಣಪುಟ್ಟ ವಿಮಾನ ನಿಲ್ದಾಣಗಳು ಮಾರಾಟಕ್ಕೆ ಸಿದ್ಧವಾಗಿವೆ.

2024ರ ವೇಳೆಗೆ ಆಂಧ್ರಪ್ರದೇಶದ ವಿಜಯವಾಡ ಮತ್ತು ತಿರುಪತಿ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿತ್ತು. ಈಗ 2021-22 ಹಣಕಾಸು ವರ್ಷದಲ್ಲಿ ಖಾಸಗಿ ವಲಯಕ್ಕೆ ಹಸ್ತಾಂತರಿಸಲು ಬಯಸುವ 6 ದೊಡ್ಡ ವಿಮಾನ ನಿಲ್ದಾಣಗಳೊಂದಿಗೆ ತಿರುಪತಿ ವಿಮಾನ ನಿಲ್ದಾಣವನ್ನು ಬಿಡ್ಡಿಂಗ್‌ಗೆ ಸೇರ್ಪಡೆಗೊಳಿಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.