ETV Bharat / bharat

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅಚ್ಚರಿ ಉಡುಗೊರೆ ನೀಡಿದ ತಿರುನೆಲ್ವೇಲಿ ಡಿಸಿ - ಜಿಲ್ಲಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ

ಜಿಲ್ಲಾಧಿಕಾರಿಯ ಈ ಕಾರ್ಯಕ್ಕೆ ಮೆಚ್ಚುಗೆ ಜೊತೆಗೆ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಅಚ್ಚರಿ ಉಡುಗೊರೆ ನೀಡಿದ ತಿರುನೆಲ್ವೇಲಿ ಜಿಲ್ಲಾಧಿಕಾರಿ
tirunelveli-district-collector-gave-a-surprise-gift-to-the-candidates-preparing-for-the-competitive-exam
author img

By

Published : Nov 17, 2022, 2:12 PM IST

ತಿರುನೆಲ್ವೇಲಿ: ಹಿಂದಿನ ಕಾಲದಲ್ಲಿ ಯುವಜನರಿಗೆ ಸೀಮಿತ ಉದ್ಯೋಗಾವಕಾಶಗಳು ಇಲ್ಲ. ಖಾಸಗಿ ಕಂಪನಿಗಳಲ್ಲಿ ಭರಪೂರ ಅವಕಾಶ ಸಿಕ್ಕರೂ ಉದ್ಯೋಗ ಭದ್ರತೆ ಅವರನ್ನೂ ಕಾಡುತ್ತದೆ. ಇದೇ ಕಾರಣಕ್ಕೆ ಇಂದಿನ ಯುವ ಜನತೆ ಇದೀಗ ಸರ್ಕಾರಿ ಕೆಲಸಗಳತ್ತ ಒಲವು ತೋರುತ್ತಿದ್ದಾರೆ. ಇದಕ್ಕಾಗಿ ಹಗಲು - ರಾತ್ರಿ ಶ್ರಮವಹಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಾರೆ.

ಈ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ಹಿನ್ನೆಲೆ ಅನೇಕರು ಇದಕ್ಕೆಂದೇ ಇರುವ ಅಕಾಡೆಮಿಗಳನ್ನು ಸೇರುತ್ತಾರೆ. ಆರ್ಥಿಕವಾಗಿ ಸಬಲರಲ್ಲದ ಅಭ್ಯರ್ಥಿಗಳು ಸ್ವಯಂ ಅಧ್ಯಯನಕ್ಕೆ ಮುಂದಾಗುತ್ತಾರೆ. ಈ ವೇಳೆ, ಅವರಿಗೆ ಮನೆಯಲ್ಲಿ ಓದಲು ಸರಿಯಾದ ಅವಕಾಶ ಹಾಗೂ ತೊಂದರೆಗಳು ಎದುರಾಗುವ ಹಿನ್ನೆಲೆ ಅವರು, ಪಾರ್ಕ್​, ಬಸ್​ನಿಲ್ದಾಣ, ರಸ್ತೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಅಧ್ಯಯನಕ್ಕೆ ತೊಡಗುತ್ತಾರೆ. ಅದರಲ್ಲೂ ವಿಶೇಷವಾಗಿ ಮಹಿಳಾ ಅಭ್ಯರ್ಥಿಗಳು ಯಾವುದೇ ರಕ್ಷಣೆಯಿಲ್ಲದೇ ಪಾರ್ಕ್​ನಲ್ಲಿ ಅಧ್ಯಯನ ನಡೆಸುವುದು ಕಂಡು ಬರುತ್ತದೆ.

ಅಭ್ಯರ್ಥಿಗಳಿಗೆ ನೆರವು: ಇಂತಹ ಘಟನೆ ತಿರುನೆಲ್ವೇಲಿಯ ಜಿಲ್ಲಾಧಿಕಾರಿ ವಿಷ್ಣುಗೆ ಕಂಡು ಬಂದಿದೆ. ಅವರು ಕಾರಿನಲ್ಲಿ ಹೋಗುವಾಗ, ಸರಿಯಾದ ಸೌಲಭ್ಯಗಳು ಇಲ್ಲದೇ ಅಭ್ಯರ್ಥಿಗಳು ಅಧ್ಯಯನದಲ್ಲಿ ತೊಡಗಿದ್ದನ್ನು ಕಂಡು, ಅವರಿಗಾಗಿ ಏನನ್ನಾದರೂ ಮಾಡಬೇಕು ಎಂದು ನಿರ್ಧರಿಸಿದ್ದಾರೆ. ಇದಕ್ಕಾಗಿ ಅವರು ಪಲಯಂಕೊಟ್ಟಯಿ ಬಸ್​ ನಿಲ್ದಾಣದಲ್ಲಿ ಎರಡು ಅಂಗಡಿಗಳನ್ನು ಪಡೆದು ಅವುಗಳನ್ನು ಕಲಿಕಾ ಕೇಂದ್ರವಾಗಿ ಮಾರ್ಪಡಿಸಿದ್ದಾರೆ.

ಕಲಿಕೆಗಾಗಿ ನಿರ್ಮಾಣವಾಯಿತು ವಿಶೇಷ ಕೇಂದ್ರ: ಜಿಲ್ಲಾಧಿಕಾರಿಗಳ ವಿಶೇಷ ಪ್ರಯತ್ನದೊಂದಿಗೆ ಈ ಎರಡು ಶಾಪ್​ಗಳನ್ನು ವಿಶೇಷ ಕಲಿಕಾ ಕೇಂದ್ರವಾಗಿ ಮಾಡಿರುವ ಈ ಕೇಂದ್ರವನ್ನು ಅವರೇ ಉದ್ಘಾಟಿಸಿದ್ದಾರೆ. ಈ ಕೆಂದ್ರದಲ್ಲಿ ಲೈಬ್ರರಿ ಇದ್ದು, 50 ಜನರು ಏಕಕಾಲದಲ್ಲಿ ಕಲಿಕೆ ಮಾಡಬಹುದಾಗಿದೆ.

ಅಭ್ಯರ್ಥಿಗಳಿಗೆ ಟೇಬಲ್​ - ಕುರ್ಚಿ, ಕುಡಿವ ನೀರಿನ ವ್ಯವಸ್ಥೆ, ಹವಾ ನಿಯಂತ್ರಿತ ವ್ಯವಸ್ಥೆ ಸೇರಿದಂತೆ ಹಲವು ಸೌಕರ್ಯಗಳನ್ನು ಕಾಪಾಡಲಾಗಿದೆ. ಇನ್ನು ಈ ಕೇಂದ್ರಕ್ಕೆ ಅಭ್ಯರ್ಥಿಗಳು 12 ರೂ ಹಣವನ್ನು ಚಾರ್ಜ್​ ಮಾಡಲಾಗುವುದು.

ಜಿಲ್ಲಾಧಿಕಾರಿ ಕಾರ್ಯಕ್ಕೆ ಮೆಚ್ಚುಗೆ: ಈ ಕಲಿಕಾ ಕೇಂದ್ರ ಬೆಳಗ್ಗೆ 9 ರಿಂದ ರಾತ್ರಿ 9ರವರೆಗೆ ತೆರೆದಿರುತ್ತದೆ. ತಮಿಳುನಾಡಿನ ಇತಿಹಾಸ, ನಾಯಕರ ಇತಿಹಾಸದ ಪುಸ್ತಕ, ಕೇಂದ್ರದ ಗೋಡೆಯಲ್ಲಿ ಜಾಗತಿಕ ಭೂಪಟ ಕಾಣಬಹುದಾಗಿದೆ. ಪುಸ್ತಕ ಎರವಲು ಪಡೆದು ಓದಲು ಯಾವುದೇ ಚಾರ್ಜ್​ ಅನ್ನು ಅಭ್ಯರ್ಥಿಗಳಿಗೆ ನಿಗದಿ ಪಡಿಸಿಲ್ಲ. ಇನ್ನು ಜಿಲ್ಲಾಧಿಕಾರಿಯ ಈ ಕಾರ್ಯಕ್ಕೆ ಮೆಚ್ಚುಗೆ ಜೊತೆಗೆ ಅಭ್ಯರ್ಥಿಗಳು ಸಂತಸ ವ್ಯಕ್ತಪಡಿಸಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಟೋಪಿ ತೊಟ್ಟ ಸೂರತ್ ತರಕಾರಿ​ ವ್ಯಾಪಾರಿಗಳು: ಇದು ಪೂರ್ವ ನಿಯೋಜಿತ ಎಂದ ಎಎಪಿ, ಕಾಂಗ್ರೆಸ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.