ಭುಪಾಲ್ಪಲ್ಲಿ (ತೆಲಂಗಾಣ): ಎರಡು ಕುಟುಂಬದ ನಡುವಿನ ದಶಕದ ಭೂ ವಿವಾದ ಮೂವರ ಕೊಲೆಯಲ್ಲಿ ಅಂತ್ಯವಾಗಿದೆ. ಇಲ್ಲಿನ ಕಟಾರಂ ಮಂಡಲದ ಗಂಗಾರಂನಲ್ಲಿ ತಂದೆ ಮತ್ತು ಇಬ್ಬರು ಗಂಡು ಮಕ್ಕಳನ್ನು ಹತ್ಯೆ ಮಾಡಲಾಗಿದೆ. ಎರಡು ಕುಟುಂಬಗಳ ನಡುವೆ ಜಮೀನು ಗಡಿ ವಿಚಾರ ಸಂಬಂಧ ಸದಸ್ಯರ ನಡುವೆ ಗಲಾಟೆ ನಡೆದಿತ್ತು.
ಈ ಗಲಾಟೆ ತಾರಕಕ್ಕೆ ತಿರುಗಿ ಮಂಜು ನಾಯಕ್, ಅವರ ಪುತ್ರರಾದ ಸರಯ್ಯ ಮತ್ತು ಭಾಸ್ಕರ್ ಅವರ ಕಣ್ಣಿಗೆ ಖಾರದ ಪುಡಿ ಎರಚಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಬಳಿಕ ಸ್ಥಳಕ್ಕಾಗಮಿಸಿದ ಕಟಾರಂ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.