ಜಮ್ಮು ಮತ್ತು ಕಾಶ್ಮೀರ: ದಕ್ಷಿಣ ಕಾಶ್ಮೀರದಲ್ಲಿ ಎನ್ಕೌಂಟರ್ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಮೂವರು ಭಾರತೀಯ ಸೇನಾ ಸಿಬ್ಬಂದಿ ಹುತಾತ್ಮರಾಗಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಹಾಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅವಿತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಅರಣ್ಯ ಪ್ರದೇಶವನ್ನು ಸುತ್ತುವರೆದು ಶೊಧ ಕಾರ್ಯಾಚರಣೆ ಕೈಗೊಂಡಿದ್ದರು.
-
#WATCH | J&K | Encounter underway at high reaches of Halan forest area of Kulgam district. Army & Kulgam Police are carrying out the operation. Three jawans injured and evacuated to hospital for treatment.
— ANI (@ANI) August 4, 2023 " class="align-text-top noRightClick twitterSection" data="
(Visuals deferred by unspecified time) pic.twitter.com/4cAe93jiHe
">#WATCH | J&K | Encounter underway at high reaches of Halan forest area of Kulgam district. Army & Kulgam Police are carrying out the operation. Three jawans injured and evacuated to hospital for treatment.
— ANI (@ANI) August 4, 2023
(Visuals deferred by unspecified time) pic.twitter.com/4cAe93jiHe#WATCH | J&K | Encounter underway at high reaches of Halan forest area of Kulgam district. Army & Kulgam Police are carrying out the operation. Three jawans injured and evacuated to hospital for treatment.
— ANI (@ANI) August 4, 2023
(Visuals deferred by unspecified time) pic.twitter.com/4cAe93jiHe
ಈ ವೇಳೆ ಅಡಗಿದ್ದ ಉಗ್ರರು ಸೇನಾ ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಎನ್ಕೌಂಟರ್ ಆರಂಭಿಸಿದ ಸೇನಾ ಸಿಬ್ಬಂದಿ ಮೇಲೆ ಅವಿತುಕುಳಿತ ಉಗ್ರರು ಮನಸೋ ಇಚ್ಚೆ ಗುಂಡಿನ ದಾಳಿ ನಡೆಸಿದ್ದರು. ಗುಂಡಿನ ಚಕಮಕಿಯಲ್ಲಿ ಉಗ್ರರ ದಾಳಿಯಿಂದ ಮೂವರು ಭದ್ರಾತಾ ಪಡೆ ಸಿಬ್ಬಂದಿ ಗಂಭೀರವಾಗಿ ಗಾಯ ಗೊಂಡಿದ್ದರು. ಆದರೆ, ಚಿಕಿತ್ಸೆ ವೇಳೆ ಮೂವರು ಸಾವನ್ನಪ್ಪಿದ್ದಾರೆ. ಈ ಕುರಿತು ಅಧಿಕಾರಿಗಳು ತಿಳಿಸಿದ್ದಾರೆ.
-
Operation Halan #Kulgam
— Chinar Corps🍁 - Indian Army (@ChinarcorpsIA) August 4, 2023 " class="align-text-top noRightClick twitterSection" data="
On specific inputs regarding presence of terrorists on higher reaches of Halan in Kulgam, operations launched by Security Forces on 04 Aug 23. In exchange of firing with terrorists, three personnel sustained injuries and later succumbed.
Search operations… pic.twitter.com/NJ3DZa2OpK
">Operation Halan #Kulgam
— Chinar Corps🍁 - Indian Army (@ChinarcorpsIA) August 4, 2023
On specific inputs regarding presence of terrorists on higher reaches of Halan in Kulgam, operations launched by Security Forces on 04 Aug 23. In exchange of firing with terrorists, three personnel sustained injuries and later succumbed.
Search operations… pic.twitter.com/NJ3DZa2OpKOperation Halan #Kulgam
— Chinar Corps🍁 - Indian Army (@ChinarcorpsIA) August 4, 2023
On specific inputs regarding presence of terrorists on higher reaches of Halan in Kulgam, operations launched by Security Forces on 04 Aug 23. In exchange of firing with terrorists, three personnel sustained injuries and later succumbed.
Search operations… pic.twitter.com/NJ3DZa2OpK
ಕುಲ್ಗಾಮ್ನ ಹಲಾನ್ನ ಪ್ರದೇಶಗಳಲ್ಲಿ ಭಯೋತ್ಪಾದಕರ ಸುಳಿವು ಸಿಕ್ಕ ನಂತರ ಅವರನ್ನು ಸೆದೆಬಡಿಯಲೆಂದು 04 ಆಗಸ್ಟ್ 23 ರಂದು ಸೇನೆ ಕಾರ್ಯಾಚರಣೆ ಪ್ರಾರಂಭಿಸಿದೆವು. ಮೂವರು ಸೈನಿಕರು ಗಾಯಗೊಂಡು ಹುತಾತ್ಮರಾಗಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜೊತೆಗೆ ಈಗಿರುವ ಭದ್ರತಾ ಪಡೆಯನ್ನು ಹೆಚ್ಚಿಸಿದ್ದು, ಶೋಧ ಕಾರ್ಯಕ್ಕೆ ಇನ್ನಷ್ಟು ವೇಗ ನೀಡಲಾಗಿದೆ ಎಂದು ಶ್ರೀನಗರ ಮೂಲದ ಸೇನೆಯ ಚಿನಾರ್ ಕಾರ್ಪ್ಸ್ ಟ್ವೀಟ್ನಲ್ಲಿ ತಿಳಿಸಿದೆ.
ಪಾಕ್ ನುಸುಳುಕೋರ ಹತ್ಯೆ ಮಾಡಿದ ಬಿಎಸ್ಎಫ್: ಜುಲೈ 31ರಂದು ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಭಾರತೀಯ ಗಡಿ ಭದ್ರತಾ ಪಡೆಯು ಪಾಕಿಸ್ತಾನದಿಂದ ಭಾರತದ ಗಡಿಯತ್ತ ನುಸುಳುತ್ತಿದ್ದ ಪಾಕ್ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು. ಈ ಘಟನೆ ನಡೆದ ಇದರ ಹಿಂದಿನ ವಾರ ಕೂಡ ಇದೇ ರೀತಿಯ ಘಟನೆ ನಡೆದಿತ್ತು.
ಪಾಕ್ ನುಸುಳುಕೋರರಿಗೆ ಪ್ರತಿ ಬಾರಿ ನಮ್ಮ ಗಡಿ ಹತ್ತಿರ ಬರುವ ವೇಳೆ ಎಚ್ಚರಿಕೆ ನೀಡಲಾಗುತ್ತದೆ. ಹಾಗೆ ಈತನಿಗೂ ನೀಡಲಾಗಿತ್ತು. ಆದರೆ ಎಚ್ಚರಿಕೆಯನ್ನು ತಿರಸ್ಕರಿಸಿ ಮತ್ತೆ ಮತ್ತೆ ಪಾಕಿಸ್ತಾನದ ಕಡೆಯಿಂದ ಒಳನುಸುಳುವ ಯುತ್ನ ಮಾಡಿದ್ದಾನೆ. ಇದರಿಂದ ಬಿಎಸ್ಎಫ್ ಸಿಬ್ಬಂದಿ ಜುಲೈ 31 ರ ಬೆಳಗಿನ ಜಾವ 1:45 ರ ಸುಮಾರಿಗೆ ಅರ್ನಿಯಾ ಸೆಕ್ಟರ್‌ನ ಜಬೋವಾಲ್ ಗಡಿ ಹೊರಠಾಣೆ ಬಳಿ ಭದ್ರತೆ ಮತ್ತು ಸುರಕ್ಷತಾ ದೃಷ್ಟಿಯಿಂದ ನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಇದನ್ನೂ ಓದಿ: ದಕ್ಷಿಣ ಕಾಶ್ಮೀರದಲ್ಲಿ ಸೇನೆ, ಉಗ್ರರ ನಡುವೆ ಗುಂಡಿನ ಚಕಮಕಿ: ಮೂವರು ಯೋಧರಿಗೆ ಗಾಯ