ಭಿಂದ್ (ಮಧ್ಯಪ್ರದೇಶ): ಸ್ಯಾನಿಟೈಸರ್ ಸೇವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಮಧ್ಯಪ್ರದೇಶದ ಭಿಂದ್‌ನ ಚತುರ್ವೇದಿ ನಗರದಲ್ಲಿ ಘಟನೆ ನಡೆದಿದೆ.
ಮಂಗಳವಾರ ಭಿಂದ್‌ನಲ್ಲಿ ಮದ್ಯದಂಗಡಿಗಳು ಬಂದ್ ಆಗಿದ್ದವು. ಬೇರೆಡೆಗೆ ತೆರಳಿ ಸ್ಯಾನಿಟೈಸರ್ ಖರೀದಿಸಿ ತಂದಿರುವ ಸಾಧ್ಯತೆಯಿದೆ ಎಂದು ಭಿಂದ್ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ಸಿಂಗ್ ತಿಳಿಸಿದ್ದಾರೆ.
ವಶಪಡಿಸಿಕೊಂಡ ಸ್ಯಾನಿಟೈಸರ್ ಚೀನಾದಲ್ಲಿ ತಯಾರಾಗಿದೆ. ಅದರಲ್ಲಿ ಶೇಕಡಾ 100ರಷ್ಟು ಆಲ್ಕೋಹಾಲ್ ಅಂಶವಿದೆ. ವೈದ್ಯರ ಪ್ರಕಾರ, ಈ ಸ್ಯಾನಿಟೈಸರ್ನ 20 ಮಿ.ಲೀ.ನಷ್ಟು ಸೇವನೆಯೂ ಕೂಡ ಜೀವಕ್ಕೆ ಮಾರಕವಾಗಿದೆ. ಮೃತಪಟ್ಟವರು ತಲಾ 500 ಮಿ.ಲೀ.ನಷ್ಟು ಸೇವಿಸಿದ್ದರು ಎಂದು ಎಸ್ಪಿ ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಕಾರಿಗೆ ಬಸ್ ಡಿಕ್ಕಿ : ಇಬ್ಬರ ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ