ಗುರುದಾಸ್‌ಪುರ( ಪಂಜಾಬ್): ಒಂದೇ ಕುಟುಂಬದ ಮೂವರು ಸದಸ್ಯರು ಸೆಲ್ಫೋಸ್ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಂಜಾಬ್ನ ಗುರುದಾಸ್ಪುರದಲ್ಲಿ ನಡೆದಿದೆ.
ನರೇಶ್ ಶರ್ಮಾ, ಅವರ ಪತ್ನಿ ಭಾರತಿ ಶರ್ಮಾ ಮತ್ತು ಅವರ 17 ವರ್ಷದ ಮಗಳು ಮಾನ್ಸಿ ಶರ್ಮಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ಬಂದಿರುವ ಮೃತರು, ಭಾರತಿ ಅವರ ಸಹೋದರ ಪರ್ದೀಪ್ ಶರ್ಮಾ ಅವರು ಹಣಕಾಸಿನ ವಿಷಯದಲ್ಲಿ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ. ಇದರ ಆಧಾರದ ಮೇಲೆ ಧಾರಿವಾಲ್ ಪೊಲೀಸ್ ಠಾಣೆಯ ಪೊಲೀಸರು ಸೆಕ್ಷನ್ 306ರ (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ನರೇಶ್ ಅವರ ಮೃತದೇಹದಲ್ಲಿ ಡೆತ್ ನೋಟ್ ಪತ್ತೆಯಾಗಿದ್ದು, ಇದರಲ್ಲಿ ಒಂಬತ್ತು ಜನರ ಹೆಸರನ್ನು ಉಲ್ಲೇಖಿಸಲಾಗಿದೆ. "ನಮ್ಮ ಕುಟುಂಬ ಸದಸ್ಯರಿಗೆ ಹಣ ನೀಡುವಂತೆ ತೀವ್ರ ಹಿಂಸೆ ನೀಡುತ್ತಿದ್ದರು" ಎಂದು ಆರೋಪಿಸಲಾಗಿದೆ.
ಓದಿ:ಬಲವಂತದ ವೇಶ್ಯಾವಾಟಿಕೆ : 5 ವರ್ಷದಲ್ಲಿ 600 ಜನರಿಂದ ಬಾಲಕಿಗೆ ಲೈಂಗಿಕ ಕಿರುಕುಳ !
ಪೊಲೀಸರಿಗೆ ನೀಡಿದ ದೂರಿನಲ್ಲಿ ಭಾರತಿ ಅವರ ಮಗ ಕುನಾಲ್ ಶರ್ಮಾ, ನಾವು ಹಣ ನೀಡದಕ್ಕಾಗಿ ನನ್ನ ತಾಯಿಯ ಸಹೋದರ ಸಾಮಾಜಿಕ ಜಾಲತಾಣದಲ್ಲಿ ಯಾವಾಗಲು ನಮಗೆ ಅಪಹಾಸ್ಯ ಮಾಡುತ್ತಿದ್ದರು ಎಂದಿದ್ದಾರೆ.
ಈ ಸಂಬಂಧ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ರಾಜಿಂದರ್ ಸಿಂಗ್ ಸೋಹಲ್ ಮಾತನಾಡಿ, ಭಾರತಿ ಮತ್ತು ನರೇಶ್ ಅಮೃತಸರದ ಆಸ್ಪತ್ರೆಯಲ್ಲಿ ನಿಧನರಾದರು. ಗುರುದಾಸ್‌ಪುರದ ಸಿವಿಲ್ ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಮಾನ್ಸಿ ದಾರಿಯಲ್ಲೇ ಸಾವನ್ನಪ್ಪಿದ್ದಾರೆ. ನಾವು ದೀಪಾ ಮಹಾಜನ್ ಅವರನ್ನು ಬಂಧಿಸಿದ್ದೇವೆ ಮತ್ತು ಉಳಿದ ಎಂಟು ಮಂದಿಯನ್ನು ಶೀಘ್ರದಲ್ಲೇ ಬಂದಿಸಲಿದ್ದೇವೆ ಎಂದು ಹೇಳಿದ್ದಾರೆ.