ಲತೇಹರ್ (ಜಾರ್ಖಂಡ್): ಬಾವಿಯಲ್ಲಿನ ವಿಷಾನಿಲ ಸೇವಿಸಿ ಮೂವರು ಮೃತಪಟ್ಟಿರುವ ಘಟನೆ ಜಾರ್ಖಂಡ್ನ ಲತೇಹರ್ ಜಿಲ್ಲೆಯಲ್ಲಿ ನಡೆದಿದೆ.
ಮನೆಯೊಂದರ ಬಾವಿಯೊಳಗೆ ಡೀಸೆಲ್ ಪಂಪ್ ಅಳವಡಿಸಲೆಂದು ವ್ಯಕ್ತಿಯೋರ್ವ ಇಳಿದಿದ್ದ. ಆದರೆ ಬಾವಿಯೊಳಗಿದ್ದ ವಿಷಕಾರಿ ಅನಿಲದಿಂದ ಉಸಿರುಗಟ್ಟಿ ಆತ ಸಾವನ್ನಪ್ಪಿದ್ದಾನೆ. ಈತ ಹೊರಬರದ ಕಾರಣ ಮತ್ತಿಬ್ಬರು ಬಾವಿಯೊಳಗೆ ಇಳಿದಿದ್ದು ಅವರೂ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ಆಟೋ-ಕಾರು ಡಿಕ್ಕಿ: ಸ್ಥಳದಲ್ಲೇ ಏಳು ಮಂದಿಯ ದುರ್ಮರಣ
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.