ಶಿವಪುರಿ(ಮಧ್ಯಪ್ರದೇಶ): ಕರೈರಾದ ಅಮೋಲಾ ಪೊಲೀಸ್ ಠಾಣೆಯ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ಮೂವರು ಜೀವಂತ ಸಮಾಧಿಯಾಗಿದ್ದಾರೆ. ನಿಯಂತ್ರಣ ಕಳೆದುಕೊಂಡು ಪಲ್ಟಿಯಾದ ಟ್ರಕ್ಗೆ ದಿಢೀರ್ ಆಗಿ ಬೆಂಕಿ ಹೊತ್ತಿಕೊಂಡಿದ್ದು, ಪರಿಣಾಮ ಇಬ್ಬರು ಮಹಿಳೆಯರು ಸೇರಿ ಮೂವರು ಬೆಂಕಿಗಾಹುತಿಯಾಗಿದ್ದಾರೆ.
ನಿಯಂತ್ರಣ ಕಳೆದುಕೊಂಡ ಕಾರಣ ಟ್ರಕ್ ಪಲ್ಟಿ ಹೊಡೆದಿದ್ದು, ಈ ವೇಳೆ ಬೆಂಕಿ ಹೊತ್ತಿಕೊಂಡಿದೆ. ಅದರಲ್ಲಿದ್ದ ಇಬ್ಬರು ಮಹಿಳೆ ಹಾಗೂ ಓರ್ವ ಪುರುಷ ಸುಟ್ಟು ಕರಕಲಾಗಿದ್ದು, ಪವಾಡ ಸದೃಶ್ಯ ರೀತಿಯಲ್ಲಿ ಚಿಕ್ಕ ಬಾಲಕ ಪಾರಾಗಿದೆ. ಘಟನೆ ನಡೆಯುತ್ತಿದ್ದಂತೆ ಗ್ರಾಮಸ್ಥರು ಬೆಂಕಿ ನಂದಿಸುವ ಕಾರ್ಯ ನಡೆಸಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿ ತಿಳಿಸಿರುವ ಪ್ರಕಾರ, ಟ್ರಕ್ ಶಿವಪುರಿಯಿಂದ ಬರುತ್ತಿತ್ತು.ಈ ವೇಳೇ ಮಹಿಳೆ, ಪುರುಷ ಹಾಗೂ ಮಗು ಬೈಕ್ ಮೇಲೆ ಪ್ರಯಾಣ ಬೆಳೆಸಿದ್ದರು. ಅಡ್ಡಲಾಗಿ ಬಂದ ಓಮ್ನಿಗೆ ಡಿಕ್ಕಿ ಹೊಡೆಯುವುದನ್ನ ತಪ್ಪಿಸಲು ಹೋದಾಗ ಟ್ರಕ್ ಪಲ್ಟಿಯಾಗಿ ಬೈಕ್ಗೆ ಗುದ್ದಿದೆ. ಈ ವೇಳೆ, ಬೈಕ್ನಲ್ಲಿದ್ದ ಇಬ್ಬರು ಹಾಗೂ ಟ್ರಕ್ನಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಪಾಸ್ ಇಲ್ಲದೇ ಪ್ರಯಾಣಿಸುತ್ತಿದ್ದ ಪೃಥ್ವಿ ಶಾಗೆ ತಡೆ ಹಾಕಿದ ಪೊಲೀಸರು
ಆದರೆ, ಮಗು ಜಿಗಿದು ಬೇರೆ ಕಡೆ ಬಿದ್ದರುವ ಕಾರಣ ಬದುಕುಳಿದಿದೆ. ಘಟನೆಯಲ್ಲಿ ಸತ್ತವರ ಗುರುತು ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸ್ ಅಧಿಕಾರಿ ಅಮೋಲಾ ರಾಘವೇಂದ್ರ ಯಾದವ್ ತಿಳಿಸಿದ್ದಾರೆ.