ETV Bharat / bharat

ಅಲ್‌ ಖೈದಾ ಸಂಘಟನೆಗೆ ಸಹಕಾರ; ಯುಪಿಯಲ್ಲಿ ಮತ್ತೆ ಮೂವರು ಉಗ್ರರು ಅರೆಸ್ಟ್‌

author img

By

Published : Jul 14, 2021, 11:13 PM IST

ಮತ್ತೆ ಮೂವರು ಶಂಕಿತ ಭಯೋತ್ಪಾದಕರನ್ನು ಬಂಧಿಸುವಲ್ಲಿ ಉತ್ತರ ಪ್ರದೇಶ ಪೊಲೀಸರು ಯಶಸ್ವಿಯಾಗಿದ್ದಾರೆ.

Three more terrorists of Al-Qaeda outfit arrested in Uttar Pradesh
ಅಲ್‌ ಖೈದಾ ಸಂಘಟನೆಗೆ ಸಹಕಾರ; ಯುಪಿಯಲ್ಲಿ ಮತ್ತೆ ಮೂವರು ಉಗ್ರರು ಅರೆಸ್ಟ್‌

ಲಖನೌ: ಉತ್ತರ ಪ್ರದೇಶದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿರುವ ಪೊಲೀಸರು, ಅಲ್‌ ಖೈದಾ ಸಂಘಟನೆಯ ಸಂಪರ್ಕದ ಆರೋಪದಲ್ಲಿ ಮೂವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಲಖನೌ ನಗರದ ವಾಜಿರ್ಗಂಜ್‌ನ ಶಕೀಲ್‌, ಮೊಹಮ್ಮದ್ ಮುಸ್ತ್‌ಕ್ವೀಮ್‌ (ಮುಜಾಫರ್‌ನಗರ್‌), ಮೊಹಮ್ಮದ್ ಮೊಯಿದ್‌ (ಲಖನೌನ ನ್ಯೂ ಹೈದರ್‌ಗಂಜ್) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಲ್ ಖೈದಾ ಜೊತೆ ಸಂರ್ಪಕ ಹೊಂದಿರುವ ಅನ್ಸಾರ್ ಘಜ್ವಾತುಲ್ ಹಿಂದ್ ಉಗ್ರ ಸಂಘಟನೆಗೆ ಸೇರಿದವರು ಎನ್ನಲಾಗಿದೆ.

ಕಳೆದ ಭಾನುವಾರ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ, ಮುಶಿರುದ್ದೀನ್ ಮತ್ತು ಮಿನ್ಹಾದ್ ಅಹ್ಮದ್ ಎಂಬ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿತ್ತು. ಮೊಯಿದ್‌ ಪಿಸ್ತೂಲ್ ತಯಾರಿಸಿ ಮಿನ್ಹಾದ್ ಮೂಲಕ ಮುಸ್ತ್‌ಕ್ವೀಮ್‌ಗೆ ಹಸ್ತಾಂತರಿಸಿದ್ದನು. ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲು ಶಕೀಲ್ ಮಿನ್ಹಾದ್‌ಗೆ ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾನ್ಪುರದ ಎಂಟು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಮತ್ತು ಮೂವರು ಮಹಿಳೆಯರು ಸಹ ಉಗ್ರರೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಉತ್ತರ ಪ್ರದೇಶದ ಹಲವು ನಗರಗಳಲ್ಲಿ ದಾಳಿ ನಡೆಸುವುದು ಅವರ ಉದ್ದೇಶವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.