ETV Bharat / bharat

ತಾಪಿ ನದಿಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ - ನದಿಯಲ್ಲಿ ಮುಳುಗಿ ಮೂವರು ಮಕ್ಕಳು ದುರ್ಮರಣ

ನದಿ ದಡದ ಮೇಲೆ ಆಟವಾಡ್ತಿದ್ದ ವೇಳೆ ಏಕಾಏಕಿ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ಮೂವರು ಮಕ್ಕಳು ನೀರಿನಲ್ಲಿ ಮುಳುಗಿ ದುರ್ಮರಣಕ್ಕೀಡಾಗಿದ್ದಾರೆ.

Three minors drown in Tapi river in Surat

author img

By

Published : Apr 30, 2022, 3:15 PM IST

Updated : Apr 30, 2022, 4:10 PM IST

ಸೂರತ್​(ಗುಜರಾತ್​): ತಾಪಿ ನದಿಯ ದಡದಲ್ಲಿ ಆಟವಾಡ್ತಿದ್ದ ವೇಳೆ ಮೂವರು ಅಪ್ರಾಪ್ತ ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸೂರತ್​​​ನ ರಾಂಡರ್​ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ.

Three minors drown in Tapi river in Surat
ತಾಪಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಮಗು

ಇಕ್ಬಾಲ್​ ನಗರದ​ ಮೂವರು ಅಪ್ರಾಪ್ತ ವಯಸ್ಸಿನ ಮಕ್ಕಳು ನಿನ್ನೆ ಸಂಜೆ ಆಟವಾಡ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಮೃತರನ್ನ ಮೊಹಮ್ಮದ್ ಫಕೀರ್​(7), ಶಹದತ್​ ಫಕೀರ್​(8) ಹಾಗೂ ಸಾನಿಯಾ(14) ಎಂದು ಗುರುತಿಸಲಾಗಿದೆ. ಮೊಹಮ್ಮದ್​​ ಹಾಗೂ ಶಹದತ್​ ಮೃತದೇಹಗಳನ್ನ ನಿನ್ನೆ ಹೊರತೆಗೆಯಲಾಗಿದ್ದು, ಸಾನಿಯಾ ಮೃತದೇಹವನ್ನ ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಅಧಿಕಾರಿಗಳು ಹೊರತೆಗೆದಿದ್ದಾರೆ.

ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಮಗು

ಇದನ್ನೂ ಓದಿ: ನಟಿ ಜಾಕ್ವೆಲಿನ್ ಫರ್ನಾಂಡಿಸ್ 7 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶ

ನದಿ ದಡದಲ್ಲಿ ಮಕ್ಕಳು ಆಟವಾಡ್ತಿದ್ದ ವೇಳೆ ಅರಬ್ಬಿ​ ಸಮುದ್ರದಲ್ಲಿ ಏಕಾಏಕಿ ಏರಿಳಿತವಾಗಿರುವ ಕಾರಣ, ನದಿಯ ನೀರಿನ ಮಟ್ಟದಲ್ಲಿ ಹಠಾತ್ ಏರಿಕೆ ಕಂಡು ಬಂದಿದೆ. ಹೀಗಾಗಿ, ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Last Updated : Apr 30, 2022, 4:10 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.