ತ್ರಿಪುರ: ಎನ್‌ಎಲ್‌ಎಫ್‌ಟಿ (ತ್ರಿಪುರಾ ರಾಷ್ಟ್ರೀಯ ವಿಮೋಚನಾ ಪಡೆ) ಬಂಡುಕೋರರು ಪೊಲೀಸರ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿ ಶರಣಾಗಿದ್ದಾರೆ.
ತ್ರಿಪುರದ ಕೆಲವು ಭಾಗಗಳಲ್ಲಿ ಇನ್ನೂ ಸಕ್ರಿಯವಾಗಿರುವ ನಿಷೇಧಿತ ಉಗ್ರಗಾಮಿ ಗುಂಪುಗಳ ವಿರುದ್ಧ ನಡೆಸಿದ ಸತತ ಕಾರ್ಯಾಚರಣೆಗಳ ಫಲವಾಗಿ ಈ ಉಗ್ರಗಾಮಿಗಳು ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಶರಣಾದ ಬಂಡುಕೋರರನ್ನು ರೂಪಧನ್ ಡೆಬ್ಬರ್ಮಾ ರುಫೈ (30), ಅಮುಶ್ ತ್ರಿಪುರ ಅಲಿಯಾಸ್ ಸೆಂಗ್ಖಾರಿ (32) ಮತ್ತು ದಿಲೀಪ್ ಡೆಬ್ಬರ್ಮಾ ಅಕಾ ಮೊಮ್ಫಾಲ್ (43) ಎಂದು ಗುರುತಿಸಲಾಗಿದೆ.
ಈ ಮೂವರು ಉಗ್ರರು 2018 ರ ಆರಂಭದಲ್ಲಿ ಗುಂಪಿಗೆ ಸೇರಿಕೊಂಡು, ಎನ್‌ಎಲ್‌ಎಫ್‌ಟಿ (ಬಿಎಂ)ಯ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶಗಳ ತರಬೇತಿ ಶಿಬಿರಗಳಲ್ಲಿ ತರಬೇತಿ ಪಡೆದಿದ್ದಾರೆ ಎಂದು ಪ್ರಾಥಮಿಕ ವಿಚಾರಣೆಯ ವೇಳೆ ಪೊಲೀಸ್ ಮೂಲಗಳು ತಿಳಿಸಿವೆ.