ಬಕ್ಸಾ (ಅಸ್ಸೋಂ): ಅಸ್ಸೋಂನ ಬಕ್ಸಾ ಜಿಲ್ಲೆಯ ಶಲ್ಬರಿ ಎಂಬಲ್ಲಿ ಆಘಾತಕಾರಿ ಘಟನೆಯೊಂದು ಜರುಗಿದ್ದು, ಮೂವರು ಬಾಲಕಿಯರು ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಗುವಾಹಟಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಳೆದ ಶನಿವಾರ ಈ ಘಟನೆ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಬಾಲಕಿಯೊಬ್ಬಳು ಮೃತಪಟ್ಟಿದ್ದು, ಈ ಘಟನೆ ಗುರುವಾರ ಬೆಳಕಿಗೆ ಬಂದಿದೆ. ಇಬ್ಬರು ಬಾಲಕಿಯರ ಸ್ಥಿತಿಯಲ್ಲಿ ಗಂಭೀರವಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಮೂವರು ಬಾಲಕಿಯರು ಒಂದೇ ಶಾಲೆಯ ಒಂದೇ ತರಗತಿಯಲ್ಲಿ ಓದುತ್ತಿದ್ದರು. ಶಾಲೆಯಲ್ಲಿ ಕೆಲವು ಮಾನಸಿಕ ಒತ್ತಡದ ಕಾರಣದಿಂದ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಮನೆಯಲ್ಲಿ ಅವರು ಹೊಟ್ಟೆ ನೋವಿನಿಂದ ಬಳಲುತ್ತಿದ್ದಾಗ ಮೊದಲಿಗೆ ಅವರ ಪಾಲಕರು ಆಹಾರ ವಿಷಕ್ಕಾಗಿ ಇದು ಸಂಭವಿಸಬಹುದು ಎಂದು ಭಾವಿಸಿದ್ದರು. ಆದರೆ, ಬಾಲಕಿಯರನ್ನು ಆಸ್ಪತ್ರೆಗೆ ಕರೆದೊಯ್ದಾಗ ವಾಸ್ತವಾಂಶ ತಿಳಿಯಿತು. ಬುಧವಾರ ರಾತ್ರಿ ಆಸ್ಪತ್ರೆಯ ಬೆಡ್‌ನಲ್ಲಿ ಓರ್ವ ಬಾಲಕಿ ಸಾವನ್ನಪ್ಪಿದ್ದು, ಇನ್ನಿಬ್ಬರು ಜಿಎಂಸಿಎಚ್‌ನಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಬಕ್ಸಾ ಎಸ್ಪಿ ಮತ್ತು ಸ್ಥಳೀಯ ಬಹಬರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಶಾಲೆಯ ಆಡಳಿತ ಮಂಡಳಿಯ ಅಧಿಕಾರಿಗಳು, ವಿದ್ಯಾರ್ಥಿನಿಯರ ಮೇಲೆ ಯಾವುದೇ ರೀತಿಯ ಒತ್ತಡ ಹಾಕಿಲ್ಲ. ಈ ಕುರಿತು ಸೂಕ್ತ ತನಿಖೆ ನಡೆಯಬೇಕಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಇತ್ತೀಚಿನ ಪ್ರಕರಣ, ಆತ್ಮಹತ್ಯೆಗೆ ಶರಣಾದ ಜೋಡಿ: ಪ್ರೀತಿ ಮಾಡುತ್ತಿದ್ದ ಯುವಕ ಮತ್ತು ಬಾಲಕಿ ರಾತ್ರೋರಾತ್ರಿ ಮನೆಯಿಂದ ಓಡಿ ಹೋಗಿ, ಊರಾಚೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚೌಕಿ ತಾಂಡಾ ಹತ್ತಿರ ಇತ್ತೀಚೆಗೆ ನಡೆದಿತ್ತು. ಚಿತ್ತಾಪುರ ತಾಲೂಕಿನ ರಾಂಪೂರಹಳ್ಳಿಯ ಬಾಲಕಿ ಮತ್ತು ಇದೇ ತಾಲೂಕಿನ ಕೊಲ್ಲೂರ್ ಗ್ರಾಮದ ಆಕಾಶ್ (18) ಆತ್ಮಹತ್ಯೆಗೆ ಶರಣಾದವರು. ಯಾದಗಿರಿಯಲ್ಲಿ ಐಟಿಐ ಓದುತ್ತಿದ್ದ ಆಕಾಶ್, ಎಂಟನೇ ತರಗತಿ ಓದುತ್ತಿದ್ದ ಬಾಲಕಿ ಕಳೆದ ಒಂದು ವರ್ಷದಿಂದ ಪ್ರೀತಿ ಮಾಡುತ್ತಿದ್ದರು. ಆದರೆ, ಮನೆಯಿಂದ ಓಡಿಹೋದ ಆಕಾಶ್ ಮತ್ತು ಬಾಲಕಿ ಚೌಕಿ ತಾಂಡಾ ಹತ್ತಿರದ ಯಲ್ಲಮ್ಮದೇವಿ ದೇವಸ್ಥಾನ ಸಮೀಪದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆಗೂ ಮೊದಲು ಆಕಾಶ್, ತನ್ನ ತಾಯಿಗೆ ಫೋನ್ ಮಾಡಿ ವಿಷಯ ಹೇಳಿ ಕಾಲ್ ಕಟ್ ಮಾಡಿದ್ದ. ತಕ್ಷಣವೇ ಮನೆಯವರು ಸೇರಿ ಹುಡುಕಾಟ ಆರಂಭಿಸಿದ್ದರು. ಘಟನಾ ಸ್ಥಳಕ್ಕೆ ಹೋಗಿ ನೋಡುವುದರೊಳಗೆ ಇಬ್ಬರ ಸ್ಥಿತಿ ಗಂಭೀರವಾಗಿತ್ತು. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಇವರು ಸಾವನ್ನಪ್ಪಿದ್ದರು.
ಇದನ್ನೂ ಓದಿ: ಪತ್ನಿ ಜೊತೆ ಅಕ್ರಮ ಸಂಬಂಧ ಶಂಕೆ: ಸ್ವಂತ ತಮ್ಮನ ಗುಪ್ತಾಂಗ ಕತ್ತರಿಸಿ ಕೊಂದ ಅಣ್ಣ!