ETV Bharat / bharat

ಮೂವರು ವಿದ್ಯಾರ್ಥಿನಿಯರಿಗೆ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ.. ಕೋಟಿ ಕೋಟಿ ವಿದ್ಯಾರ್ಥಿ ವೇತನ - Master Data Science

ಆಂಧ್ರಪ್ರದೇಶದ ವಿಜಯವಾಡದ ಮೂವರು ವಿದ್ಯಾರ್ಥಿನಿಯರಾದ ಜೋಷಿಕಾ, ಅಕ್ಷರ, ಯುಕ್ತ ಅಮೆರಿಕದ ಡ್ರೆಕ್ಸೆಲ್ ವಿಶ್ವವಿದ್ಯಾಲಯದಲ್ಲಿ ಓದಲು ಪ್ರವೇಶವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೇ ಇವರಿಗೆ ಕೋಟಿ ರೂಪಾಯಿ ವಿದ್ಯಾರ್ಥಿ ವೇತನ ಸಹ ದೊರೆಯಲಿದೆ.

prestigious university in America
ವಿದ್ಯಾರ್ಥಿನಿಯರಿಗೆ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ
author img

By

Published : Dec 19, 2022, 5:06 PM IST

Updated : Dec 19, 2022, 5:54 PM IST

ವಿದ್ಯಾರ್ಥಿನಿಯರಿಗೆ ಅಮೆರಿಕದ ಪ್ರತಿಷ್ಠಿತ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ

ವಿಜಯವಾಡ: ವಿದೇಶದಲ್ಲಿ ಶಿಕ್ಷಣ ಪಡೆಯಬೇಕು ಎಂಬುದು ಹಲವಾರು ವಿದ್ಯಾರ್ಥಿಗಳ ಕನಸಾಗಿರುತ್ತದೆ. ಅಷ್ಟೇ ಅಲ್ಲದೇ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲೇ ಪ್ರವೇಶ ಪಡೆಯಬೇಕು ಎಂದು ಕನಸು ಕಂಡಿರುತ್ತಾರೆ. ಈ ರೀತಿಯ ಕನಸೊಂದನ್ನು ವಿಜಯವಾಡದ ಯುವತಿಯರು ನನಸು ಮಾಡಿಕೊಂಡಿದ್ದಾರೆ. ಅಮೆರಿಕದ ಪ್ರಸಿದ್ಧ ಡ್ರೆಕ್ಸೆಲ್ ವಿಶ್ವವಿದ್ಯಾಲಯದಲ್ಲಿ ಜೋಷಿಕಾ, ಅಕ್ಷರ, ಯುಕ್ತ ಪ್ರವೇಶ ಪಡೆದಿದ್ದಾರೆ.

ಬಾಲ್ಯದ ಕನಸನ್ನು ನನಸು ಮಾಡಿಕೊಂಡ ಜೋಷಿಕಾ: 'ಅಮೆರಿಕದಲ್ಲಿ ಓದಬೇಕೆಂಬುದು ನನ್ನ ಬಾಲ್ಯದ ಕನಸಾಗಿತ್ತು. ಇದಕ್ಕೆ ಪ್ರತಿಭೆ ಮಾತ್ರವಲ್ಲ, ಕೌಶಲ್ಯವೂ ಬೇಕು. ಅದಕ್ಕಾಗಿಯೇ ನಾನು ವ್ಯಾಪಾರ ಕೌಶಲ್ಯಗಳನ್ನು ಪಡೆಯಲು ಮೇಣದಬತ್ತಿಗಳ ಬ್ಯುಸಿನೆಸ್​ ಮಾಡಿದ್ದೇನೆ. ಆರು ತಿಂಗಳ ಕಾಲ ಇಂಟರ್ನ್‌ಶಿಪ್ ಮತ್ತು ಶಾಲೆಗೆ ವೆಬ್‌ಸೈಟ್ ತಯಾರಿ ಮಾಡಿದ್ದೇನೆ. ನಾನು ಒಂದೂವರೆ ವರ್ಷದ ಹಿಂದೆ ನನ್ನ ತಯಾರಿ ಆರಂಭಿಸಿದೆ.

ನನ್ನ ಅಧ್ಯಯನದ ಮೇಲೆ ಕೇಂದ್ರೀಕರಿಸುವಾಗ ವಿದೇಶಿ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆಗಳಿಗೆ ತಯಾರಿಯನ್ನು ಸಹ ಮಾಡುತ್ತಿದ್ದೆ. ನಾನು ಪ್ರತಿದಿನ 5 ಗಂಟೆಯನ್ನು ಇದಕ್ಕಾಗಿ ಮೀಸಲಿಟ್ಟಿದ್ದೇನೆ. ಈಗ ನನ್ನ ಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನನಗೆ ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಸೀಟು ಸಿಕ್ಕಿದ್ದು, ಜೊತೆಗೆ 1.5 ಕೋಟಿ ವಿದ್ಯಾರ್ಥಿ ವೇತನ ಸಹ ದೊರೆತಿದೆ' ಎಂದು ಜೋಷಿಕಾ ಹೇಳಿದ್ದಾರೆ.

ಇವರ ತಂದೆ ಓಬುಲೇಶು ಶ್ರೀಕಾಕುಳಂ ನಗರಸಭೆ ಆಯುಕ್ತರಾಗಿದ್ದು, ಅವರ ತಾಯಿ ಅರುಣಾ ಗೃಹಿಣಿಯಾಗಿದ್ದಾರೆ. ತಂತ್ರಜ್ಞಾನದೊಂದಿಗೆ ಬ್ಯುಸಿನೆಸ್‌ನಲ್ಲಿ ಪದವಿ ಮಾಡಬೇಕೆಂಬುದು ಜೋಷಿಕಾ ಕನಸಾಗಿದೆ. ಪಿಜಿ ಬಳಿಕ ಉತ್ತಮ ಉದ್ಯಮಿಯಾಗಬೇಕೆಂಬುದು ಜೋಷಿಕಾ ಹೆಬ್ಬಯಕೆಯಾಗಿದೆ.

ವೇಮುರಿ ಸಾಯಿ ಅಕ್ಷರ: ಎಂಟನೇ ತರಗತಿಯಲ್ಲಿಯೇ ಇವರು ಅಮೆರಿಕದಲ್ಲಿ ಕಂಪ್ಯೂಟರ್ ಎಂಜಿನಿಯರಿಂಗ್ ಮಾಡಲು ನಿರ್ಧರಿಸಿದರು. ಇವರ ತಂದೆ ವೇಣುಗೋಪಾಲ ರಾವ್ ಮತ್ತು ತಾಯಿ ಸುಜನಾಶ್ರೀ. ಇಬ್ಬರೂ ಶಿಕ್ಷಕರು. ಅವರ ಸಹಾಯದಿಂದ ನೂರಾರು ಯೋಜನೆಗಳು ಮತ್ತು ಸಣ್ಣ ಸ್ಟಾರ್ಟ್‌ಅಪ್‌ಗಳಿಗೆ ವೇಮುರಿ ಕೆಲಸ ಮಾಡಿದ್ದಾರೆ. ಸದ್ಯ ಇವರು ಡ್ರೆಕ್ಸೆಲ್ ವಿಶ್ವವಿದ್ಯಾಲಯದಲ್ಲಿ ಸೀಟು ಪಡೆದುಕೊಂಡಿದ್ದು, 1.2 ಕೋಟಿ ರೂ. ಸ್ಕಾಲರ್​ಶಿಪ್​ ಸಹ ಬರಲಿದೆ.

'ದಿನಕ್ಕೆ ಐದಾರು ಗಂಟೆ ಓದುತ್ತಿದ್ದೆ. ನನ್ನ ಶಿಕ್ಷಕರಾದ ಕೃಷ್ಣಮೋಹನ್ ಈ ವಿಷಯದಲ್ಲಿ ಸಾಕಷ್ಟು ಸಹಾಯ ಮಾಡಿದರು. ನಾನು ಇನ್ನೊಂದು ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿವೇತನವನ್ನು ಪಡೆದುಕೊಂಡೆ. ಇತರ ವಿಶ್ವವಿದ್ಯಾಲಯಗಳ ಪ್ರತಿಕ್ರಿಯೆಗಳನ್ನು ನಿರೀಕ್ಷಿಸಲಾಗುತ್ತಿದೆ. ಮೊದಲಿನಿಂದಲೂ ವಿಭಿನ್ನ ಅಂಶಗಳತ್ತ ಗಮನ ಹರಿಸಿದೆ. ನಾನು 2020 ರಲ್ಲಿ 5.12 ನಿಮಿಷಗಳಲ್ಲಿ 2 ರ ವರ್ಗಮೂಲವನ್ನು 6020 ದಶಮಾಂಶಗಳಿಗೆ ವಿಸ್ತರಿಸುತ್ತೇನೆ. ಇದು ವಿಶ್ವ ದಾಖಲೆಯೂ ಆಗಿತ್ತು. ಆ ಸಮಯದಲ್ಲಿ ಅಂದಿನ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು' ಎಂದು ಹೇಳಿದರು.

ಇದನ್ನೂ ಓದಿ: ವಿಡಿಯೋ: ಪ್ರಧಾನಿ ಮೋದಿ ಬಳಿ ಬಂದು ಬೆನ್ನು ತಟ್ಟಿ ಕೈ ಕುಲುಕಿದ ಅಮೆರಿಕ ಅಧ್ಯಕ್ಷ!

‘ಗಣಿತ ಪ್ರತಿಭೆ, ಶ್ರೇಷ್ಠತೆ’ ಮುಂತಾದ ಹಲವು ಪ್ರಶಸ್ತಿಗಳು ನನಗೆ ಬಂದಿವೆ. 'ನಾಸಾ ತಾಂತ್ರಿಕ ಸ್ಪರ್ಧೆಯಲ್ಲಿ ಗೆದ್ದ ನಂತರ, ಏಪ್ರಿಲ್ 2023 ರಲ್ಲಿ ನನಗೆ ಅಮೆರಿಕಕ್ಕೆ ಹೋಗಲು ಆಹ್ವಾನ ಬಂದಿತು. ಶ್ರೀಹರಿಕೋಟಾದಲ್ಲಿ ಉಪಗ್ರಹ ಉಡಾವಣೆಯನ್ನು ಹತ್ತಿರದಿಂದ ನೋಡುವ ಅವಕಾಶವೂ ನನಗೆ ಸಿಕ್ಕಿತು. ನಾನು ರಾಷ್ಟ್ರೀಯ ಮಟ್ಟದ ಬಿಲ್ಲುಗಾರ್ತಿ. ನಾನು ಯಾವಾಗಲೂ ಸಂಶೋಧನೆಯಲ್ಲಿ ಆಸಕ್ತಿ ಹೊಂದಿದ್ದೇನೆ. ಈ ಕ್ಷೇತ್ರದಲ್ಲಿ ಸಾಧನೆ ಮಾಡುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಮಾಸ್ಟರ್ ಡೇಟಾ ಸೈನ್ಸ್ - ಯುಕ್ತ ಟಾಟಾ ಕೊಗಂಟಿ: 'ಇಂಟರ್‌(ಪಿಯುಸಿ)ಗೆ ಸೇರಿದ ಆರಂಭದ ದಿನಗಳಲ್ಲಿ ನನ್ನ ಆಸಕ್ತಿ ಕಂಪ್ಯೂಟರ್‌ಗಳತ್ತ ಹೊರಳಿತು. ಅಮೆರಿಕದಲ್ಲಿ ಮುಗಿಸಿದರೆ ಭವಿಷ್ಯ ಚೆನ್ನಾಗಿರುತ್ತದೆ ಅನ್ನಿಸಿತು. ಅದಕ್ಕೇ ಮೊದಲ ವರ್ಷದಿಂದಲೇ ಅದರತ್ತ ಗಮನ ಹರಿಸಿದೆ. ಪ್ರತಿನಿತ್ಯ ಇಂಟರ್ ಸಬ್ಜೆಕ್ಟ್ ಓದಿದ ನಂತರ ವಿದೇಶಿ ವಿಶ್ವವಿದ್ಯಾಲಯಗಳ ವೆಬ್ ಸೈಟ್ ಗಳನ್ನು ಪರಿಶೀಲಿಸುತ್ತಿದ್ದೆ. ಅವರು ವಿದ್ಯಾರ್ಥಿಗಳಿಂದ ಏನನ್ನು ನಿರೀಕ್ಷಿಸುತ್ತಾರೆ ಎಂಬುದನ್ನು ಅಧ್ಯಯನ ಮಾಡಿದೆ. ಅವುಗಳ ಮೇಲೆ ಗಮನ ಕೇಂದ್ರೀಕರಿಸುತ್ತಲೇ ತರಬೇತಿ ಪಡೆದಿದ್ದೇನೆ. ಈಗ ವಿಜಯವಾಡದ ಶ್ರೀ ಚೈತನ್ಯ ಶಿಕ್ಷಣ ಸಂಸ್ಥೆಯಲ್ಲಿ ಸೀನಿಯರ್ ಇಂಟರ್ ಓದುತ್ತಿದ್ದೇನೆ' ಎಂದು ಯುಕ್ತ ಹೇಳಿದರು.

ಇವರ ತಂದೆ ಸುನೀಲ್ ಕುಮಾರ್ ದತ್ತಿ ಇಲಾಖೆಯಲ್ಲಿ ಇಒ ಆಗಿದ್ದಾರೆ. ತಾಯಿ ಮಾಧವಿ ರಸಾಯನಶಾಸ್ತ್ರ ಶಿಕ್ಷಕಿ. 'ವಿಜಯವಾಡ ನಗರಸಭೆಗೆ ತೆರೆದ ಚರಂಡಿಯಿಂದ ನಷ್ಟವಾಗಿದೆ ಎಂದು ‘ಮುಚ್ಚಿದ ಚರಂಡಿ’ ಯೋಜನೆ ಮಾಡಿದ್ದೇನೆ. ಅದಕ್ಕಾಗಿ ನಾನು ಸಾಕಷ್ಟು ಪ್ರಶಂಸೆಯನ್ನು ಪಡೆದಿದ್ದೇನೆ. ನನ್ನ ನಾಯಕತ್ವದ ಗುಣವೂ ಹೆಚ್ಚಿದೆ. ವಿಜಯವಾಡದ ‘ಇನ್ವಿಕ್ಟಾ’ ಸಂಸ್ಥೆಯಲ್ಲಿ ಜೋಷಿಕಾ ಮತ್ತು ಅಕ್ಷರ ಅವರ ಬಳಿ ತರಬೇತಿ ಪಡೆದೆ. ಡೇಟಾ ಸೈನ್ಸ್‌ನಲ್ಲಿ ಉತ್ತಮ ಹೆಸರು ಪಡೆಯುವುದು ನನ್ನ ಕನಸಾಗಿದೆ. ಸದ್ಯ ನನಗೆ ಅಮೆರಿಕದ ವಿಶ್ವವಿದ್ಯಾನಿಲಯದಲ್ಲಿ ಸೀಟ್​ ಸಿಕ್ಕಿದ್ದು, 1.03 ಕೋಟಿ ರೂ. ವಿದ್ಯಾರ್ಥಿವೇತನ ಸಿಗಲಿದೆ' ಎಂದು ಅವರು ಹೇಳಿದ್ದಾರೆ.

Last Updated : Dec 19, 2022, 5:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.