ETV Bharat / bharat

ಸೇತುವೆ ನಿರ್ಮಾಣದ ಗುಂಡಿಗೆ ಬಿದ್ದ ಬೈಕ್​.. ಆಂಧ್ರದಲ್ಲಿ ಮೂವರು ಕನ್ನಡಿಗರ ಸಾವು - ಕರ್ನೂಲ್‌ನಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯ ಗುಂಡಿಗೆ ಬಿದ್ದ ಬೈಕ್

ನಿರ್ಮಾಣ ಹಂತದ ಸೇತುವೆ ಗುಂಡಿಗೆ ಬೈಕ್​ ಬಿದ್ದಿದ್ದು, ರಾಜ್ಯದ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ಕಂಡು ಬಂದಿದೆ.

Karnataka people died in Andhra Pradesh road accident, Bike fell into constructed bridge dig in Kurnool, Kurnool crime news, ಆಂಧ್ರಪ್ರದೇಶದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಜನ ಸಾವು, ಕರ್ನೂಲ್‌ನಲ್ಲಿ ನಿರ್ಮಿಸಲಾಗುತ್ತಿರುವ ಸೇತುವೆಯ ಗುಂಡಿಗೆ ಬಿದ್ದ ಬೈಕ್, ಕರ್ನೂಲ್ ಅಪರಾಧ ಸುದ್ದಿ,
ಆಂಧ್ರದಲ್ಲಿ ಮೂವರು ಕನ್ನಡಿಗರ ಸಾವು
author img

By

Published : Apr 20, 2022, 12:43 PM IST

ಕರ್ನೂಲ್​ (ಆಂಧ್ರಪ್ರದೇಶ): ಜಿಲ್ಲೆಯಲ್ಲಿ ಘೋರವಾದ ರಸ್ತೆ ಅಪಘಾತವೊಂದು ಸಂಭವಿಸಿದೆ. ಸೇತುವೆ ನಿರ್ಮಾಣ ನಡೆಯುತ್ತಿದ್ದು, ಅಗೆದ ಗುಂಡಿಯಲ್ಲಿ ಬೈಕ್​ವೊಂದು ಆಯತಪ್ಪಿ ಬಿದ್ದಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾಲಹರವಿ ತಾಲೂಕಿನ ಚಿಂತಕುಂಟಾದಲ್ಲಿ ಕಂಡು ಬಂದಿದೆ.

ಆಂಧ್ರದಲ್ಲಿ ಮೂವರು ಕನ್ನಡಿಗರ ಸಾವು

ಓದಿ: ಕಾರು-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು, ಹೊತ್ತಿ ಉರಿದ ಬೈಕ್

ಸೇತುವೆಯ ಬಳಿ ಯಾವ ಸೂಚಕ ಫಲಕಗಳು ಇಲ್ಲದಿರುವುದರಿಂದ ಅತಿವೇಗದಿಂದ ಬಂದ ಬೈಕ್‌ ಗುಂಡಿಯಲ್ಲಿ ಬಿದ್ದು ಅಪಘಾತ ಸಂಭವಿಸಿದೆ ಎನ್ನಲಾಗ್ತಿದೆ. ಮೃತರು ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಶಿರುಗುಪ್ಪ ತಾಲೂಕಿನ ಟೆಕ್ಕಲಕೋಟ ಗ್ರಾಮದ ನಿವಾಸಿಗಳಾದ ಬೋಯ ಗದಿ, ಬೋಯ ಚಂದ್ರಶೇಖರ್ ಮತ್ತು ಕಾಡಸಿದ್ದ ಎಂದು ತಿಳಿದು ಬಂದಿದೆ.

ಓದಿ: ಕಾರು ಅಪಘಾತ: ಪ್ರಾಣಾಪಾಯದಿಂದ ಪಾರಾದ ಮಾಜಿ ಸಚಿವ ಟಿ ಬಿ ಜಯಚಂದ್ರ, ವಿಕ್ರಮ್​ ಆಸ್ಪತ್ರೆಗೆ ದಾಖಲು

ಸುದ್ದಿ ತಿಳಿದಾಕ್ಷಣ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಬಳಿಕ ಮೃತದೇಹಗಳನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದರು. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.