ಕಾಂಚೀಪುರಂ: ಶ್ರೀಪೆರುಂಬುದೂರಿನಲ್ಲಿ ಸೆಪ್ಟಿಕ್ ಟ್ಯಾಂಕ್ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ.
ಯಾವುದೇ ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ಕದ್ರಾಂಬಕ್ಕಂನ ಖಾಸಗಿ ಅಡುಗೆ ಕಂಪನಿಯಲ್ಲಿ ಟ್ಯಾಂಕ್ ಸ್ವಚ್ಛಗೊಳಿಸುವಾಗ ಈ ದುರ್ಘಟನೆ ಸಂಭವಿಸಿದೆ. ಮೃತರನ್ನು ಮುರುಗನ್ (41), ಬಕ್ಕಿಯರಾಜ್ (40) ಮತ್ತು ಅರುಮುಗಮ್ (45) ಎಂದು ಗುರುತಿಸಲಾಗಿದೆ.
ಸ್ಥಳಕ್ಕೆ ಶ್ರೀಪೆರುಂಬುದೂರ್ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೂರು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. 2019ರಲ್ಲಿ ಶ್ರೀಪೆರುಂಬುದೂರಿನ ಸಮೀಪ ವಿಷಕಾರಿ ಅನಿಲ ಸೇವಿಸಿ 6 ಜನ ಮೃತಪಟ್ಟಿದ್ದರು.