ಚೆನ್ನೈ, ತಮಿಳುನಾಡು: ವಿದ್ಯುತ್ ಅವಘಡ ಸಂಭವಿಸಿ, ಪ್ರತ್ಯೇಕ ಘಟನೆಗಳಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಚೆನ್ನೈ ನಗರದಲ್ಲಿ ನಡೆದಿದೆ. ಭಾರಿ ಮಳೆಯ ಕಾರಣ ಈ ವಿದ್ಯುತ್ ಅವಘಡಗಳು ಸಂಭವಿಸಿವೆ.
ಚೆನ್ನೈನಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ಭಾರಿ ಮಳೆ ಸುರಿದಿದ್ದು, ಹಲವಾರು ರಸ್ತೆಗಳಲ್ಲಿ ನೀರು ತುಂಬಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಇಷ್ಟೇ ಅಲ್ಲದೇ ಹಲವೆಡೆ ವಿದ್ಯುತ್ ಅವಘಡಗಳು ಸಂಭವಿಸಿದ್ದು, ಚೆನ್ನೈನ ಒಟ್ಟೆರಿ ಪ್ರದೇಶದಲ್ಲಿ 70 ವರ್ಷದ ಮಹಿಳೆ ತಮಿಳರಸಿ ಮೃತಪಟ್ಟಿದ್ದಾರೆ.
ಇದರ ಜೊತೆಗೆ ಉತ್ತರ ಪ್ರದೇಶ ಮೂಲದ ಹಾಗೂ ಸದ್ಯಕ್ಕೆ ಪುಲಿಯಂತೊಪ್ಪು ಪ್ರದೇಶದಲ್ಲಿ ವಾಸವಿರುವ 45 ವರ್ಷದ ಮಹಿಳೆ ಮೀನಾ, ಮೈಲಾಪೊರ್ನ 13 ಬಾಲಕ ಲಕ್ಷ್ಮಣನ್ ಕೂಡಾ ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ.
ಇನ್ನು ಮಳೆಯ ಕಾರಣಕ್ಕೆ ಚೆನ್ನೈ, ಕಂಚೀಪುರಂ, ಚೆಂಗಲ್ಪಟ್ಟು ಮತ್ತು ತಿರುವಳ್ಳೂರ್ನಲ್ಲಿ ಭಾರತೀಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇದನ್ನೂ ಓದಿ: ಛತ್ತೀಸ್ಗಢದ ನಕ್ಸಲ್ ಪೀಡಿತ ಬಸ್ತಾರ್ ಜಿಲ್ಲೆಯಲ್ಲಿ ಲೇಡಿ ಸಿಂಗಂ!