ಮಿರ್ಜಾಪುರ(ಉತ್ತರಪ್ರದೇಶ): ಜಿಲ್ಲೆಯ ಮಡಿಹಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಪಚೋಖರಾದಲ್ಲಿ 3 ಮಕ್ಕಳು ಬೆಂಕಿಗೆ ಆಹುತಿಯಾದ ದುರ್ಘಟನೆ ನಡೆದಿದೆ.
ರಾಣಿ (3), ಹರ್ಷಿತ್ (5), ಸುನೈನಾ (7) ಮೃತಪಟ್ಟ ಮಕ್ಕಳು. ಒಣಹುಲ್ಲಿನ ಬಣವೆಯಲ್ಲಿ ಮಕ್ಕಳು ಆಟವಾಡುತ್ತಿದ್ದಾಗ ದಿಢೀರ್ ಅಂತಾ ಬೆಂಕಿ ಹೊತ್ತಿಕೊಂಡಿದೆ. ದುರ್ಘಟನೆಯಲ್ಲಿ ಮೂವರು ಮಕ್ಕಳು ಸುಟ್ಟು ಕರಕಲಾಗಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬೆಂಕಿ ಹೊತ್ತಿದ ಕುರಿತು ತನಿಖೆ ಮಾಡಲಾಗುತ್ತಿದೆ.
ಮಕ್ಕಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಇದನ್ನೂ ಓದಿ: ರಾತ್ರೋರಾತ್ರಿ ಅಪಾರ್ಟ್ಮೆಂಟ್ಗೆ ನುಗ್ಗಿ ಶೂ,ಚಪ್ಪಲಿ ಕಳ್ಳತನ : ಕೃತ್ಯ ಸಿಸಿಟಿವಿಯಲ್ಲಿ ಸೆರೆ