ಗುಮ್ಲಾ (ಜಾರ್ಖಂಡ್): ಮೂವರು ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ಬಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿದ ನಂತರ ಮೂವರು ಯುವಕರು ಮೂವರು ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ರೈಡ್‌ಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಸಮೀಪದ ಕಾಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿರುವ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಈ ಕುರಿತು ಬಸಿಯಾ ಎಸ್‌ಡಿಪಿಒ ವಿಕಾಸ್ ಆನಂದ್ ಲಗುರಿ ಮಾತನಾಡಿ, ಜೂನ್ 26 ರ ರಾತ್ರಿ ಗ್ರಾಮದಲ್ಲಿ ಮದುವೆ ಸಮಾರಂಭವಿತ್ತು. ಅದರಲ್ಲಿ ಮೂವರು ಹುಡುಗಿಯರು ಭಾಗವಹಿಸಿದ್ದರು. ಈ ಮೂವರು ಹುಡುಗಿಯರು ಮೂವರು ಹುಡುಗರೊಂದಿಗೆ ಸ್ನೇಹಿತರಾಗಿದ್ದರು. ಬಾಲಕಿಯರನ್ನು ರೈಡ್‌ಗೆ ಹೋಗುವ ನೆಪದಲ್ಲಿ ಬೊಲೆರೋ ಕಾರಿನಲ್ಲಿ ಕರೆದೊಯ್ದಿದ್ದಾರೆ. ಬಳಿಕ ಆರೋಪಿಗಳು ಬಸಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಘುನ್ಸೇರಾ ಅರಣ್ಯಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂಬುದು ತನಿಖೆ ಮೂಲಕ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.
ಈ ವಿಷಯ ತಿಳಿದ ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕೂಡಲೇ ಘುನ್ಸೇರಾ ಅರಣ್ಯಕ್ಕೆ ಆಗಮಿಸಿ ಮೂವರು ಬಾಲಕಿಯರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಪೊಲೀಸರು ಸಂತ್ರಸ್ತೆಯರನ್ನು ವಿಚಾರಣೆಗೊಳಪಡಿಸಿ ವೈದ್ಯಕೀಯ ಚಿಕಿತ್ಸೆಗೆ ಒಳಪಡಿಸಿದರು. ವಿಷಯದ ಗಂಭೀರತೆಯನ್ನು ಕಂಡ ಪೊಲೀಸ್ ಸಿಬ್ಬಂದಿ ತಮ್ಮ ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಕ್ರಮ ಕೈಗೊಂಡ ನಂತರ, ಮೂವರು ಆರೋಪಿ ಯುವಕರನ್ನು ಬಂಧಿಸಲಾಯಿತು ಮಾಹಿತಿ ನೀಡಿದರು.
ಬಂಧಿತ ಯುವಕರನ್ನು 22 ವರ್ಷದ ಮುನ್ನಾ ಗೋಪೆ, 25 ವರ್ಷದ ಅಮಿತ್ ಬರ್ಲೇವ್ ಮತ್ತು 29 ವರ್ಷದ ಅನಿಲ್ ಇಂದ್ವಾರ್ ಎಂದು ಗುರುತಿಸಲಾಗಿದೆ. ಪ್ರಕರಣದ ಬಗ್ಗೆ ಮಾಹಿತಿ ಪಡೆದ ನಂತರ, ದಾಳಿಯಲ್ಲಿ ಭಾಗಿಯಾಗಿದ್ದ ಪೊಲೀಸ್ ತಂಡದಲ್ಲಿ ಬಸಿಯಾ ಪೊಲೀಸ್ ಠಾಣೆ ಛೋಟು ಓರಾನ್, ಪುವಾನಿ ಘನಶ್ಯಾಮ್ ಕುಮಾರ್ ರವಿ, ಕಾನ್‌ಸ್ಟೇಬಲ್ ವಿನಿತಾ ಕುಮಾರಿ ಮತ್ತು ಮೀಸಲು ಪಡೆಯ ಸಿಬ್ಬಂದಿ ಭಾಗಿಯಾಗಿದ್ದರು. ಸದ್ಯ ಪೊಲೀಸರು ಮೂವರೂ ಆರೋಪಿಗಳನ್ನು ಗುಮ್ಲಾ ಜೈಲಿಗೆ ಕಳುಹಿಸಿದ್ದಾರೆ.
ಓದಿ: ಪ್ರೀತಿಯ ಹೆಸರಲ್ಲಿ ಪ್ರೇಮಿ- ಇಬ್ಬರು ಸ್ನೇಹಿತರಿಂದ ಬಾಲಕಿ ಮೇಲೆ ಅತ್ಯಾಚಾರ... ಐವರು ಬಾಲಕರು ಸೇರಿ ಆರು ಜನರ ಬಂಧನ!
ಬಾಲಕಿ ಮೇಲೆ ಅತ್ಯಾಚಾರ: ತೆಲಂಗಾಣ ಕರೀಂನಗರ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಬಾಲಕಿಯೊಬ್ಬಳು ತನ್ನ ಪ್ರೇಮಿ ಮತ್ತು ಇಬ್ಬರು ಸ್ನೇಹಿತರಿಂದಲೇ ಅತ್ಯಾಚಾರಕ್ಕೊಳಗಾಗಿರುವ ಘಟನೆಯೊಂದು ನಡೆದಿದೆ. ಆದರೆ, ಈ ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದ ಆರು ಜನರನ್ನು ಪೊಲೀಸರು ಬಂಧಿಸಿದ್ದು, ಇದರಲ್ಲಿ ಐವರು ಬಾಲಕರಾಗಿದ್ದಾರೆ.
ಬಾಲಕಿಯ ಮೇಲೆ ಅತ್ಯಾಚಾರ: ಇತ್ತೀಚಿಗೆ ಕರೀಂನಗರ ಪಟ್ಟಣದಲ್ಲಿ ಬಾಲಕಿ ತನ್ನ ಪ್ರಿಯಕರನೊಂದಿಗೆ ಏಕಾಂತದಲ್ಲಿ ಕಾಲ ಕಳೆಯುತ್ತಿದ್ದಳು. ಈ ಸಂದರ್ಭದಲ್ಲಿ ಆಕೆಯ ಸ್ನೇಹಿತರು ರಹಸ್ಯವಾಗಿ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದರು. ಬಳಿಕ ಆಕೆಯನ್ನು ಬೆದರಿಸಿ ವಿವಿಧ ಸಂದರ್ಭಗಳಲ್ಲಿ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿತ್ತು. ಬಳಿಕ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.