ETV Bharat / bharat

ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ: ಇಂದು ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶ - ರಾಷ್ಟ್ರೀಯ ಪರೀಕ್ಷಾ ಸಂಸ್ಥೆ

ಇಂದು ಬೆಳಗ್ಗೆ ಆರಂಭವಾದ ಮೊದಲ ಹಂತದ ಪರೀಕ್ಷೆಗೆ ಕೆಲ ರಾಜ್ಯಗಳಲ್ಲಿ ಗೊಂದಲದ ಗೂಡಾಗಿತ್ತು. ಕೆಲವೆಡೆ ಏಕಾಏಕಿ ಪರೀಕ್ಷಾ ಕೇಂದ್ರಗಳನ್ನೇ ಬದಲಾಯಿಸಲಾಗಿತ್ತು. ಅಲ್ಲದೇ, ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಮತ್ತು ಪಂಜಾಬ್‌ನ ಪಠಾಣ್‌ಕೋಟ್‌ನ ಎರಡು ಕೇಂದ್ರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆ ರದ್ದುಗೊಳಿಸಲಾಗಿದೆ.

those-who-missed-cuet-due-to-exam-centre-change-to-get-another-chance-say-nta-officials
ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ: ಇಂದು ಪರೀಕ್ಷೆ ವಂಚಿತ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ
author img

By

Published : Jul 15, 2022, 3:58 PM IST

ನವದೆಹಲಿ: ಇಂದಿನಿಂದ ಆರಂಭವಾಗಿರುವ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ (ಸಿಯುಇಟಿ)ಗೆ ಕೇಂದ್ರಗಳ ಬದಲಾವಣೆಯಿಂದ ಹಾಜರಾಗದ ಅಭ್ಯರ್ಥಿಗಳಿಗೆ ಆಗಸ್ಟ್​​ ತಿಂಗಳಲ್ಲಿ ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶ ನೀಡಲಾಗುವುದು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್​ಇಟಿ) ತಿಳಿಸಿದೆ.

ಪದವಿಪೂರ್ವ ಕೋರ್ಸ್‌ಗಳ ಪ್ರವೇಶಕ್ಕಾಗಿ ಇಂದಿನಿಂದ ಸಿಯುಇಟಿ ಆರಂಭವಾಗಿದೆ. ಇದು ದೇಶದ ಎರಡನೇ ಅತಿ ದೊಡ್ಡ ಪರೀಕ್ಷೆಯಾಗಿದ್ದು, ದೇಶದ 500ಕ್ಕೂ ಹೆಚ್ಚು ನಗರಗಳು ಮತ್ತು ವಿದೇಶದ 10 ನಗರಗಳಲ್ಲಿ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಸುಮಾರು 14.90 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ದೊಡ್ಡ ಮಟ್ಟದಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿರುವುದರಿಂದ ವರ ಅನುಕೂಲಕ್ಕಾಗಿ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತಿದೆ. ಮೊದಲ ಹಂತದ ಪರೀಕ್ಷೆಯು ಜುಲೈ 15, 16, 19 ಮತ್ತು 20ರಂದು ನಡೆಯಲಿದೆ. ಎರಡನೇ ಹಂತವು ಆಗಸ್ಟ್ 4, 5, 6, 7, 8 ಮತ್ತು 10ರಂದು ನಡೆಯಲಿದೆ. ಇದು ಆರಂಭವಾಗಿರುವ ಮೊದಲ ಹಂತದ ಮೊದಲ ಪರೀಕ್ಷೆಯು ಬೆಳಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ನಡೆದಿದೆ. ಎರಡನೇ ಪರೀಕ್ಷೆ ಮಧ್ಯಾಹ್ನ 3 ರಿಂದ ಸಂಜೆ 6.45ರವರೆಗೆ ಇರುತ್ತದೆ.

ಎರಡು ಕಡೆ ಪರೀಕ್ಷೆ ರದ್ದು: ಇಂದು ಬೆಳಗ್ಗೆ ಆರಂಭವಾದ ಮೊದಲ ಹಂತದ ಪರೀಕ್ಷೆಗೆ ಕೆಲ ರಾಜ್ಯಗಳಲ್ಲಿ ಗೊಂದಲದ ಗೂಡಾಗಿತ್ತು. ಕೆಲವೆಡೆ ಏಕಾಏಕಿ ಪರೀಕ್ಷಾ ಕೇಂದ್ರಗಳನ್ನೇ ಬದಲಾಯಿಸಲಾಗಿತ್ತು. ಇದರಿಂದ ಕೊನೆಯ ಹಂತದಲ್ಲಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾದರು. ಇದು ವಿದ್ಯಾರ್ಥಿಗಳು ಮತ್ತು ಪೋಷಕರ ಆಕ್ರೋಶಕ್ಕೂ ಕಾರಣವಾಗಿದೆ.

ಅಲ್ಲದೇ, ಪಶ್ಚಿಮ ಬಂಗಾಳದ ನ್ಯೂ ಜಲ್ಪೈಗುರಿ ಮತ್ತು ಪಂಜಾಬ್‌ನ ಪಠಾಣ್‌ಕೋಟ್‌ನ ಎರಡು ಕೇಂದ್ರಗಳಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನು ತಾಂತ್ರಿಕ ಕಾರಣಗಳಿಂದ ರದ್ದುಗೊಳಿಸಲಾಗಿದೆ. ಇದರಿಂದ ಎಚ್ಚೆತ್ತುಕೊಂಡ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಕೇಂದ್ರಗಳ ಬದಲಾವಣೆಯಿಂದ ಇಂದು ಪರೀಕ್ಷೆಗಳನ್ನು ತಪ್ಪಿಸಿಕೊಂಡ ವಿದ್ಯಾರ್ಥಿಗಳಿಗೆ ಮರು ಅವಕಾಶ ನೀಡುವುದಾಗಿ ಸ್ಪಷ್ಪಪಡಿಸಿದೆ.

ಈ ಸಾಮಾನ್ಯ ಪ್ರವೇಶ ಪರೀಕ್ಷೆಯು ದೇಶದ 43 ಕೇಂದ್ರೀಯ ವಿಶ್ವವಿದ್ಯಾಲಯಗಳು, 13 ರಾಜ್ಯ ವಿಶ್ವವಿದ್ಯಾಲಯಗಳು, 12 ಡೀಮ್ಡ್ ವಿಶ್ವವಿದ್ಯಾಲಯಗಳು ಮತ್ತು 18 ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಪ್ರವೇಶಕ್ಕಾಗಿ ನಡೆಯುತ್ತಿದೆ.

ಈ ಪರೀಕ್ಷೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆಯಾಗಿದೆ. ಇಂದಿನಿಂದ ಆರಂಭವಾಗಿರುವ ಮೊದಲ ಹಂತ ಪರೀಕ್ಷೆಗೆ 8.10 ಲಕ್ಷ ವಿದ್ಯಾರ್ಥಿಗಳು ಹಾಗೂ ಎರಡನೇ ಹಂತದಲ್ಲಿ 6.80 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

ಇದನ್ನೂ ಓದಿ: ಎಚ್ಚರಿಕೆ​...! ಯುವಕರ ಜೊತೆಗೆ ಡ್ರಗ್ಸ್​ಗೆ ದಾಸರಾದ ಯುವತಿಯರು!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.