ಮುಂಬೈ : ಸಂಸದ ಅಸಾದುದ್ದೀನ್ ಓವೈಸಿಯ ಎಂಐಎಂ ಪಕ್ಷ ಬಿಜೆಪಿಯ ಬಿ ಟೀಮ್ ಎಂಬ ಆರೋಪ ಸದಾ ಕೇಳಿ ಬರುತ್ತಿದೆ. ಈ ಕುರಿತು ಮಹಾರಾಷ್ಟ್ರದ ಎಂಐಎಂ ಪಕ್ಷದ ರಾಜ್ಯಾಧ್ಯಕ್ಷ, ಸಂಸದ ಇಮ್ತಿಯಾಜ್ ಜಲೀಲ್, ‘ನಮ್ಮನ್ನು ಮಹಾವಿಕಾಸ ಅಘಾಡಿಯೊಂದಿಗೆ ಸೇರಿಸಿಕೊಳ್ಳಿ, ನಾವು ನಿಮ್ಮೊಂದಿಗೆ ಕೆಲಸ ಮಾಡುತ್ತೇವೆ’ ಎಂದು ಭರವಸೆ ನೀಡಿದ್ದರು. ಈ ಬಗ್ಗೆ ಶಿವಸೇನೆಯ ಹಿರಿಯ ನಾಯಕ ಸಂಜಯ್ ರಾವುತ್ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಓದಿ: ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು? ಮೂರು ದಿನದಲ್ಲಿ ರಾಜ್ಯದಲ್ಲಿ ನೀಡಿದ ಡೋಸ್ ಎಷ್ಟು ಗೊತ್ತಾ?
ಮಾಧ್ಯಮಗಳೊಂದಿಗೆ ಮಾತನಾಡಿದ ಸಂಜಯ್ ರಾವುತ್, ನಮ್ಮೂರಲ್ಲಿ ನಾಲ್ಕನೇಯವರಿಗೆ ಸ್ಥಾನವಿಲ್ಲ. ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ನಮ್ಮ ಮೂರು ಪಕ್ಷಗಳ ಮಹಾವಿಕಾಸ ಮೈತ್ರಿ ಇದೆ. ಅದರಲ್ಲಿ ನಾಲ್ಕನೇ ಅವರಿಗೆ ಸ್ಥಾನವಿಲ್ಲ.
ಔರಂಗಜೇಬ್ ಸಮಾಧಿಗೆ ತಲೆಬಾಗುವ ಜನರೊಂದಿಗೆ ಮಹಾರಾಷ್ಟ್ರದ ಯಾವುದೇ ಪಕ್ಷವು ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಹೌದು, ಅವರೇ ಬಿಜೆಪಿಯ ಬಿ ಟೀಮ್. ಉತ್ತರಪ್ರದೇಶದಲ್ಲಿ ಅವರು ಮಾಡಿದ್ದನ್ನು ಇಡೀ ದೇಶವೇ ನೋಡಿದೆ. ಅವರಿಂದಲೇ ಉತ್ತರಪ್ರದೇಶದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರು.
ಓದಿ: ಮಕ್ಕಳಿಗೆ ಲಸಿಕೆ ಹಾಕಿಸಲು ಪೋಷಕರ ಹಿಂದೇಟು? ಮೂರು ದಿನದಲ್ಲಿ ರಾಜ್ಯದಲ್ಲಿ ನೀಡಿದ ಡೋಸ್ ಎಷ್ಟು ಗೊತ್ತಾ?
25 ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬ ಕೇಂದ್ರ ಸಚಿವ ರಾವ್ಸಾಹೇಬ್ ದಾನ್ವೆ ಹೇಳಿಕೆಗೆ ಉತ್ತರಿಸಿದ ರಾವುತ್, ನಾವು 50 ಬಿಜೆಪಿ ಶಾಸಕರನ್ನು ಸಂಪರ್ಕಿಸಿದ್ದೇವೆ. ಇದು ವಾಸ್ತವದ ಪರಿಸ್ಥಿತಿ. ನಮ್ಮ ಸಂಪರ್ಕದಲ್ಲಿ ಕೇವಲ 50 ಬಿಜೆಪಿ ಶಾಸಕರಿದ್ದಾರೆ. ಹಾಗಾಗಿ, ದಾನ್ವೆ ಹೇಳಿಕೆಯನ್ನು ಲಘುವಾಗಿ ಪರಿಗಣಿಸಬೇಡಿ. ಅವರ ಬಳಿಯೂ 25 ಶಾಸಕರು ಇರಬಹುದೆಂದು ರಾವುತ್ ಹೇಳಿದ್ದಾರೆ.