ETV Bharat / bharat

11 ವರ್ಷಗಳಿಂದ ಬೀದಿ ನಾಯಿಗಳಿಗೆ ಬಿರಿಯಾನಿ ನೀಡುತ್ತಿರುವ ರಂಜಿತ್​ ದಾದಾ! - Abhinav Jeswani

ಬೀದಿ ನಾಯಿಗಳನ್ನು ಮಕ್ಕಳಂತೆ ಬೆಳೆಸಿರುವ ಇವರು ಕುರಿ-ಕೋಳಿ ಮಾಂಸವನ್ನು ಬಳಸಿ ಮಸಾಲೆಯುಕ್ತವಾಗಿ ರುಚಿಯಾದ ಬಿರಿಯಾನಿ ನೀಡುತ್ತಾ ಹಸಿದ ಶ್ವಾನಗಳ ಹೊಟ್ಟೆ ತುಂಬಿಸುತ್ತಿದ್ದಾರೆ.

This Man From Nagpur Is Feeding 150 Dogs Daily For Last 11 Years
ಬೀದಿ ನಾಯಿಗಳಿಗೆ ಬಿರಿಯಾನಿ
author img

By

Published : May 20, 2021, 1:48 PM IST

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರದ ರಂಜಿತ್ ನಾಥ್ ಎಂಬುವರು ಕಳೆದ 11 ವರ್ಷಗಳಿಂದ ಬೀದಿ ನಾಯಿಗಳಿಗೆ ಆಹಾರ ನೀಡುತ್ತಾ ಬಂದಿದ್ದು, ಇವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಂಜಿತ್ ನಾಥ್ ಅವರ ಈ ಕಾರ್ಯವನ್ನು ಅಭಿನವ್ ಜೆಸ್ವಾನಿ ಎಂಬುವರು ಇನ್​​ಸ್ಟಾಗ್ರಾಂ​​ನಲ್ಲಿ ಬೆಳಕಿಗೆ ತಂದಿದ್ದಾರೆ. ರಂಜಿತ್ ನಾಥ್ ಅವರನ್ನು 'ರಂಜಿತ್​ ದಾದಾ', 'ಡಾಗ್ ಮ್ಯಾನ್ ಆಫ್ ನಾಗ್ಪುರ', 'ಒನ್ ಮ್ಯಾನ್ ಆರ್ಮಿ' ಎಂದು ಅಭಿನವ್ ಜೆಸ್ವಾನಿ ಶ್ಲಾಘಿಸಿದ್ದಾರೆ. ಅಲ್ಲದೇ ಈ ವಿಡಿಯೋವನ್ನು ನಿಮ್ಮ ನಿಮ್ಮ ಇನ್​​ಸ್ಟಾಗ್ರಾಂ ರೀಲ್​ನಲ್ಲಿ ಶೇರ್​ ಮಾಡಿ, ಇವರಿಗೆ ಗೌರವ ಸೂಚಿಸುವಂತೆ ಮನವಿ ಮಾಡಿದ್ದಾರೆ.

ಬೀದಿ ನಾಯಿಗಳನ್ನು ಮಕ್ಕಳಂತೆ ಬೆಳೆಸಿರುವ ರಂಜಿತ್, ನಾಯಿಗಳಿಗೆ ಬಿಸ್ಕತ್ತು ನೀಡುವ ಮೂಲಕ ತಮ್ಮ ಸೇವೆ ಪ್ರಾರಂಭಿಸಿದರು. ಇದೀಗ ಕುರಿ-ಕೋಳಿ ಮಾಂಸವನ್ನು ಬಳಸಿ ಮಸಾಲೆಯುಕ್ತವಾಗಿ ರುಚಿಯಾದ ಬಿರಿಯಾನಿ ನೀಡುತ್ತಾ ಹಸಿದ ಶ್ವಾನಗಳ ಹೊಟ್ಟೆ ತುಂಬಿಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.