ETV Bharat / bharat

Video: ಊಟ ಮಾಡುತ್ತಿದ್ದಾಗ ಕೇಂದ್ರ ಸಚಿವ ರಾಣೆಯನ್ನು ಅರೆಸ್ಟ್ ಮಾಡಿದ ಪೊಲೀಸರು..ವಿಡಿಯೋ ರಿಲೀಸ್​ ಮಾಡಿದ ಬಿಜೆಪಿ

author img

By

Published : Aug 24, 2021, 6:15 PM IST

Updated : Aug 24, 2021, 9:25 PM IST

ತಮ್ಮ ನಿವಾಸದಲ್ಲಿ ಊಟ ಮಾಡುತ್ತಿರುವ ವೇಳೆ ಕೋಣೆಗೆ ನುಗ್ಗಿದ ಪೊಲೀಸರು ಕೇಂದ್ರ ಸಚಿವ ನಾರಾಯಣ್ ರಾಣೆ ಅವರನ್ನು ಅರೆಸ್ಟ್ ಮಾಡಿ ಕರೆದೊಯ್ದಿದ್ದಾರೆ ಎಂದು ಬಿಜೆಪಿ ಕಿಡಿ ಕಾರಿದೆ.

ಕೇಂದ್ರ ಸಚಿವ ರಾಣೆ
ಕೇಂದ್ರ ಸಚಿವ ರಾಣೆ

ರತ್ನಗಿರಿ (ಮಹಾರಾಷ್ಟ್ರ): ಕೇಂದ್ರ ಸಚಿವ ನಾರಾಯಣ್ ರಾಣೆ ಅವರು ತಮ್ಮ ನಿವಾಸದಲ್ಲಿ ಊಟ ಮಾಡುತ್ತಿರುವ ವೇಳೆ ಕೋಣೆಗೆ ನುಗ್ಗಿದ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ, ಪೊಲೀಸರ ನಡೆ ವಿರುದ್ಧ ಕಿಡಿ ಕಾರಿದೆ. ಘಟನೆಗೆ ಪೂರಕವಾಗಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಕಪಾಳಮೋಕ್ಷ ಮಾಡಬೇಕೆಂದಿದ್ದೆ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಸಚಿವ ರಾಣೆಯನ್ನ ಇಂದು ರತ್ನಗಿರಿ ಪೊಲೀಸರು ಬಂಧಿಸಿದ್ದಾರೆ. ಬಳಿಕ ಹೈಡ್ರಾಮಾ ಮಾಡುತ್ತಿರುವ ಬಿಜೆಪಿ, ರಾಣೆ ಅವರ ಶುಗರ್​ ಹಾಗೂ ಬಿಪಿ ಲೆವೆಲ್​ ಹೆಚ್ಚಿದ್ದು, ಅವರನ್ನು ವೈದ್ಯರ ಬಳಿ ಕರೆದೊಯ್ಯಬೇಕು ಎಂದು ಹೇಳುತ್ತಿದೆ.

ಇದನ್ನೂ ಓದಿ: ಸಿಎಂ ಠಾಕ್ರೆ ಬಗ್ಗೆ ವಿವಾದಾತ್ಮಕ ಹೇಳಿಕೆ: ಕೇಂದ್ರ ಸಚಿವ ನಾರಾಯಣ್ ರಾಣೆ ಬಂಧನ

ಜಾಮೀನು ಅರ್ಜಿ ತಿರಸ್ಕಾರ

ಸದ್ಯ ರತ್ನಗಿರಿಯ ಸಂಗಮೇಶ್ವರ ಪೊಲೀಸ್​ ಠಾಣೆಯಲ್ಲಿರುವ ಸಚಿವ ರಾಣೆ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿಯನ್ನ ರತ್ನಗಿರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ. ಹೀಗಾಗಿ ರಾಣೆ ಬಾಂಬೆ ಹೈಕೋರ್ಟ್​ ಮೊರೆ ಹೋಗಿದ್ದಾರೆ. ಆದರೆ, ಹೈಕೋರ್ಟ್​ ಕೂಡ ತಕ್ಷಣವೇ ಅರ್ಜಿ ವಿಚಾರಣೆ ನಡೆಸುವುದಕ್ಕೆ ನಿರಾಕರಿಸಿದೆ.

ಬಂಧನ ಖಂಡಿಸಿದ ಜೆ ಪಿ ನಡ್ಡಾ

ಮಹಾರಾಷ್ಟ್ರ ಸರ್ಕಾರದ ಈ ವರ್ತನೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ. ರಾಣೆ ಬಂಧನ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಜೆ ಪಿ ನಡ್ಡಾ, ಜನಾಶೀರ್ವಾದ ಯಾತ್ರೆಗೆ ದೊಡ್ಡ ಪ್ರತಿಕ್ರಿಯೆ ಸಿಗುತ್ತಿದೆ. ಇದು ವಿರೋಧಿಗಳ ನಿದ್ದೆಗೆಡಿಸಿದೆ. ನಾವು ಪ್ರಜಾಸತಾತ್ಮಕ ಮಾರ್ಗದಲ್ಲೇ ಹೋರಾಟ ಮುಂದುವರೆಸುತ್ತೇವೆ ಮತ್ತು ನಮ್ಮ ಜನಾಶೀರ್ವಾದ ಯಾತ್ರೆ ಮುಂದುವರೆಯುತ್ತೆ ಎಂದು ಟ್ವೀಟ್​ ಮಾಡಿದ್ದಾರೆ.

Last Updated : Aug 24, 2021, 9:25 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.