ETV Bharat / bharat

ಸೀರೆಯಲ್ಲಿ ಮೂಡಿದ ಭವ್ಯ ಭಾರತ... ಇದು ಒಡಿಶಾದ ಟೈ ಅಂಡ್​​ ಡೈ ನೇಕಾರನ ಕಮಾಲ್​​!

ಸೀರೆಯನ್ನು ನೇಯಲು ಯಾವುದೇ ರಾಸಾಯನಿಕ ವಸ್ತು ಅಥವಾ ಯಂತ್ರೋಪಕರಣಗಳನ್ನು ಬಳಸಲಾಗಿಲ್ಲ. ಈ ವಿನ್ಯಾಸದ ಸೀರೆಯನ್ನು ಉತ್ತಮವಾದ ಎಳೆಗಳು, ನೈಸರ್ಗಿಕ ಬಣ್ಣಗಳು ಮತ್ತು ಕೈಮಗ್ಗದ ಮೂಲಕ ನೇಯಲಾಗುತ್ತದೆ. ಈ ಸೀರೆಯನ್ನು “ಸಂಪೂರ್” ಎಳೆಗಳಿಂದ ತಯಾರಿಸಲಾಗಿರುವುದರಿಂದ ಇದು ತುಂಬಾ ಮೃದು ಮತ್ತು ಧರಿಸಲು ಆರಾಮದಾಯಕವಾಗಿದೆ.

this-hand-loom-sings-the-song-of-patriotism
ಸೀರೆಯಲ್ಲಿ ಮೂಡಿದೆ ಭವ್ಯ ಭಾರತ
author img

By

Published : Apr 18, 2021, 6:02 AM IST

ಒಡಿಶಾ: ಕಲೆಯೇ ಹಾಗೆ, ಅದು ಒಂದಿಲ್ಲೊಂದು ವೈವಿಧ್ಯತೆಯತ್ತ ಕಲಾವಿದನನ್ನು ಪ್ರಚೋದಿಸುತ್ತದೆ. ಒಡಿಶಾದಲ್ಲಿ ಟೈ ಅಂಡ್​ ಡೈ ನೇಯ್ಗೆ ಬಲು ಹೆಸರುವಾಸಿ. ಇದನ್ನು ‘ಬಂಧಕಲಾ’ ಎಂದೂ ಕರೆಯುತ್ತಾರೆ. ಈ ನೇಯ್ಗೆಯ ಜನ್ಮಸ್ಥಳ ಎಂದು ಪರಿಗಣಿಸಲ್ಪಟ್ಟಿರುವ ಸುಬರ್ಣಾಪುರದ ಕೈಮಗ್ಗ ನೇಕಾರರು ತಮ್ಮ ನೇಯ್ಗೆಯಲ್ಲಿ ದೇಶಭಕ್ತಿ ಸಾರಿದ್ದಾರೆ. ಬಣ್ಣದ ಎಳೆಗಳಿಂದ ಮಾತೃ ಭೂಮಿಯ ಪ್ರೇಮವನ್ನು ಹೆಣೆದಿದ್ದಾರೆ. ಕಾಶ್ಮೀರದಿಂದ ಕನ್ಯಾಕುಮಾರಿವರೆಗಿನ ಭಾರತದ ನಕ್ಷೆಯನ್ನು ಈ ಸೀರೆಯೊಂದರಲ್ಲಿ ಸುಂದರವಾಗಿ ನೇಯಲಾಗಿದೆ. ಭವ್ಯ ಭಾರತದ ನಕ್ಷೆ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಹೆಸರುಗಳನ್ನು ಸೀರಿಯೆ ಅಂಚಿನಲ್ಲಿ ಮತ್ತು ಅದರ ದಡಿಯಲ್ಲಿ ಉತ್ತಮವಾದ ಎಳೆಗಳಿಂದ ನೇಯಲಾಗಿದೆ.

ಸೀರೆಯಲ್ಲಿ ಮೂಡಿದೆ ಭವ್ಯ ಭಾರತ

ಅಲ್ಲದೇ ರೈತರ ಮಹತ್ವ ಸಾರುವ ಘೋಷಣೆಗಳಾದ ಜೈ ಜವಾನ್, ಜೈ ಕಿಸಾನ್ ಎಂಬ ಸಂದೇಶವನ್ನು ಸೀರೆಯಲ್ಲಿ ಚಿತ್ರಿಸಿದ್ದಾರೆ. ಸುಬರ್ಣಾಪುರ ಜಿಲ್ಲೆಯ ದುಂಗುರಿಪಾಲಿಯ ಸಹಾಲಾ ಗ್ರಾಮದ ಟೈ ಮತ್ತು ಡೈ ನೇಕಾರ ಈಶ್ವರ್ ಮೆಹರ್ ಅವರು ಈ ಎಲ್ಲ ಚಿತ್ರಗಳನ್ನು ಸುಂದರವಾಗಿ ‘ಸೀರೆಯಲ್ಲಿ’ ಚಿತ್ರಿಸಿದ್ದಾರೆ. ಅವರ ವಿಶಿಷ್ಟ ಕಲ್ಪನೆಗೆ ನಿಜವಾದ ಆಕಾರ ನೀಡುವಲ್ಲಿ ಅವರ ಕುಟುಂಬ ಸದಸ್ಯರು ಸಹ ಸಂಪೂರ್ಣ ಸಹಕಾರ ನೀಡಿದ್ದಾರೆ. ಮತ್ತೊಂದೆಡೆ, ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಈ ನೇಕಾರರ ಕಲೆಯನ್ನು ಶ್ಲಾಘಿಸಿದ್ದಾರೆ.

ಈ ಸೀರೆಯನ್ನು ನೇಯಲು ಯಾವುದೇ ರಾಸಾಯನಿಕ ವಸ್ತು ಅಥವಾ ಯಂತ್ರೋಪಕರಣಗಳನ್ನು ಬಳಸಲಾಗಿಲ್ಲ. ಈ ವಿನ್ಯಾಸದ ಸೀರೆಯನ್ನು ಉತ್ತಮವಾದ ಎಳೆಗಳು, ನೈಸರ್ಗಿಕ ಬಣ್ಣಗಳು ಮತ್ತು ಕೈಮಗ್ಗದ ಮೂಲಕ ನೇಯಲಾಗುತ್ತದೆ. ಈ ಸೀರೆಯನ್ನು “ಸಂಪೂರ್” ಎಳೆಗಳಿಂದ ತಯಾರಿಸಲಾಗಿರುವುದರಿಂದ ಇದು ತುಂಬಾ ಮೃದು ಮತ್ತು ಧರಿಸಲು ಆರಾಮದಾಯಕವಾಗಿದೆ. ಈ ವಿಶಿಷ್ಟ ಮತ್ತು ಆಕರ್ಷಕವಾದ ‘ಸೀರೆ’ಗೆ ಸಾಕಷ್ಟು ಬೇಡಿಕೆಯಿದೆ. ಈ ಸೀರೆಯನ್ನು ಹದಿನೈದರಿಂದ ಇಪ್ಪತ್ತು ಸಾವಿರ ರೂ.ಗೆ ಮಾರಾಟ ಮಾಡುವ ಭರವಸೆಯನ್ನು ನೇಕಾರ ಈಶ್ವರ್​ ಹೊಂದಿದ್ದಾರೆ.

ಐದು ಮೀಟರ್ ಉದ್ದದ ಈ ರೇಷ್ಮೆ ಸೀರೆಯಲ್ಲಿ ಚಿತ್ರಿಸಲಾದ ಪ್ರತಿಯೊಂದು ಚಿತ್ರವು ಕಲಾತ್ಮಕ ಕೃತಿಗಳ ವಿಷಯದಲ್ಲಿ ಒಡಿಶಾದ ಪರಿಣತಿಯ ಬಗ್ಗೆ ಸಾರುತ್ತದೆ. ಈ ವಿಶಿಷ್ಟ ಕಲಾಕೃತಿಯು ಪ್ರೋತ್ಸಾಹವನ್ನು ಪಡೆದರೆ, ಒಡಿಶಾದ ಕಲೆ ಇಡೀ ಜಗತ್ತಿನಲ್ಲಿ ಪ್ರಸಿದ್ಧಿ ಪಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.