ಖಮ್ಮಂ(ತೆಲಂಗಾಣ): ಎಟಿಎಂನಿಂದ ಹಣ ದೋಚಲು ಬಂದ ಕಳ್ಳರು ಪೇಚಿಗೆ ಸಿಲುಕಿದ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯ ಮಧಿರ ಬಸ್ ನಿಲ್ದಾಣದ ಸಮೀಪವಿರುವ ಎಟಿಎಂ ಕೇಂದ್ರದಲ್ಲಿ ಜರುಗಿದೆ.
ಬಸ್ ನಿಲ್ದಾಣದ ಹೆದ್ದಾರಿಯ ಪಕ್ಕದಲ್ಲಿದ್ದ ರೈಲ್ವೇ ಓವರ್ ಬ್ರಿಡ್ಜ್ ಕೆಳಗಡೆ ಒಂದು ಎಟಿಎಂ ಇದೆ. ಅದರೊಳಗೆ ಮಧ್ಯರಾತ್ರಿ ವೇಳೆ ನುಗ್ಗಿದ ಕಳ್ಳರಿಬ್ಬರು ಅಲ್ಲಿದ್ದ ಸಿಸಿಟಿವಿಯೊಂದನ್ನು ಗಮನಿಸಿ ಮೊದಲು ಅದನ್ನು ಒಡೆದು ಹಾಕಿದರು. ಆ ಬಳಿಕ ತಮ್ಮ ಎಟಿಎಂ ಚೋರಿ ಕೆಲಸ ಮುಂದುವರೆಸಿದ್ದಾರೆ. ಎಟಿಎಂ ಯಂತ್ರ ಒಡೆಯಲು ಶತಾಯಗತಾಯ ಪ್ರಯತ್ನಪಟ್ಟರು. ಆದ್ರೆ ಕೊನೆಗೆ ಇಬ್ಬರಿಂದ ಯಂತ್ರ ಒಡೆಯುವ ಕಾರ್ಯ ಅಸಾಧ್ಯ ಎಂದು ಮನಗಂಡಿದ್ದಾರೆ. ಎಷ್ಟೇ ಪ್ರಯಾಸಪಟ್ಟರೂ ಹಣ ಪಡೆಯಲಾಗದ ಕಳ್ಳರು ನಿರಾಸೆ ಅನುಭವಿಸಿದರು.
ಕೊರೊನಾ ಸಮಯವಾದ್ರಿಂದ ಮಾಸ್ಕ್ ಧರಿಸಿ ಜಾಗೃತರಾದ ಕಳ್ಳರು, ಅದೇ ಎಟಿಎಂನಲ್ಲಿದ್ದ ಇನ್ನೊಂದು ಸಿಸಿಟಿವಿಯನ್ನು ಕಾಣದಾದರು. ಇವರು ಎಟಿಎಂ ಕೇಂದ್ರದೊಳಗೆ ನಡೆಸಿದ ಪ್ರಯತ್ನಗಳೆಲ್ಲವೂ ಅದರಲ್ಲಿ ಅದಾಗಲೇ ಸೆರೆಯಾಗಿತ್ತು.
ಆ ಬಳಿಕ ಇನ್ನೊಂದು ಸಿಸಿ ಕ್ಯಾಮರಾ ಕಂಡ ಕಳ್ಳರು ಅಲ್ಲಿಂದ ಕಾಲ್ಕಿತ್ತರು. ಮುಂಜಾನೆ ಎಟಿಎಂ ನಿರ್ವಾಹಕ ಅಲ್ಲಿದೆ ಬಂದಾಗ ವಿಷಯ ತಿಳಿದಿದೆ. ತಕ್ಷಣ ಆತ ಪಟ್ಟಣ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ರಾಜಕೀಯ ಕುಟುಂಬದ ಯುವಕನಿಗೆ ISI ಹನಿಟ್ರ್ಯಾಪ್: ಓರ್ವನ ಬಂಧನ