ETV Bharat / bharat

ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಒಮಿಕ್ರಾನ್​ ಹೆಚ್ಚಳ.. ಕೇಂದ್ರ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ಗಂಟೆ

ಡಿಸೆಂಬರ್ 26 ರಿಂದ ಪ್ರತಿದಿನ 10 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೇ, ಕಳೆದ ವಾರದಿಂದ ದಿನಕ್ಕೆ ಸರಾಸರಿ 8,000 ಕ್ಕೂ ಹೆಚ್ಚು ಕೊರೊನಾ ಕೇಸ್​ಗಳು ದಾಖಲಾಗುತ್ತಿವೆ. ಪಾಸಿಟಿವಿಟಿ ದರ 0.92 ರಷ್ಟಿದೆ ಎಂದು ಜಂಟಿ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

positivity
ಒಮಿಕ್ರಾನ್​ ಹೆಚ್ಚಳ
author img

By

Published : Dec 30, 2021, 4:47 PM IST

ನವದೆಹಲಿ: ಕರ್ನಾಟಕ, ಮಹಾರಾಷ್ಟ್ರ, ದೆಹಲಿ, ಗುಜರಾತ್, ತಮಿಳುನಾಡು ರಾಜ್ಯಗಳಲ್ಲಿ ಒಮಿಕ್ರಾನ್​ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವುದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ, ಕೊರೊನಾ ಪ್ರಸರಣವೂ ಕಳೆದೆರಡು ವಾರಗಳಿಂದ ಹೆಚ್ಚುತ್ತಿದ್ದು, ಪಾಸಿಟಿವಿಟಿ ದರವೂ ಅಧಿಕವಾಗುತ್ತಿದೆ. ಕೊರೊನಾ ತಡೆ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿದೆ.

ದೇಶದ 22 ರಾಜ್ಯಗಳಲ್ಲಿ ಒಮಿಕ್ರಾನ್​ ಕಾಣಿಸಿಕೊಂಡಿದ್ದು, ಒಟ್ಟು 961 ಪ್ರಕರಣಗಳು ದಾಖಲಾಗಿವೆ. ಇನ್ನು ಮಿಜೋರಾಂನ 6 ಜಿಲ್ಲೆಗಳು, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳದ 8 ಜಿಲ್ಲೆಗಳಲ್ಲಿ ಶೇ.10 ಕ್ಕಿಂತ ಹೆಚ್ಚು ಒಮಿಕ್ರಾನ್​ ಕೇಸ್​ಗಳು ದೃಢಪಡುತ್ತಿವೆ. ಇನ್ನಿತರ 14 ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ 5 ರಿಂದ 10 ಪ್ರತಿಶತ ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ.

ಡಿಸೆಂಬರ್ 26 ರಿಂದ ನಿತ್ಯ 10 ಸಾವಿರ ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ಅಲ್ಲದೇ, ಕಳೆದ ವಾರದಿಂದ ದಿನಕ್ಕೆ ಸರಾಸರಿ 8,000 ಕ್ಕೂ ಹೆಚ್ಚು ಕೊರೊನಾ ಕೇಸ್​ಗಳು ದಾಖಲಾಗುತ್ತಿವೆ. ಪಾಸಿಟಿವಿಟಿ ದರ 0.92 ರಷ್ಟಿದೆ ಎಂದು ಜಂಟಿ ಕಾರ್ಯದರ್ಶಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಖಿಲೇಶ್​ ಯಾದವ್​ಗೆ ಮುಂದಿನ ಚುನಾವಣೆ ದೊಡ್ಡ ಸವಾಲು.. ಮುಲಾಯಂ ಸಿಂಗ್​ ಅನುಪಸ್ಥಿತಿಯಲ್ಲಿ ಏಕಾಂಗಿ ಹೋರಾಟ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.