ಹಿಮಾಚಲ ಪ್ರದೇಶ (ಕಿನೌರ್): ಬ್ರಿಟಿಷ್ ಕಾಲದಿಂದಲೂ ಭಾರತದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಮಹತ್ವ ನೀಡುತ್ತಾ ಬರಲಾಗಿದೆ. ಭಾರತದ ಮೂಲೆ ಮೂಲೆಗೂ ರಸ್ತೆ ಸಂಪರ್ಕವಿದ್ದು, ಪರ್ವತ ಶ್ರೇಣಿ, ಕಣಿವೆಗಳಲ್ಲೂ ರಸ್ತೆ ಸಂಪರ್ಕವಿದೆ. ಇದ್ರಲ್ಲಿ ಇಂಡೋ-ಟಿಬೆಟ್ ರಸ್ತೆ ಕಣಿವೆಗಳ ನಡುವೆ ನೀಳವಾಗಿ ಪರ್ವತದಲ್ಲಿ ಹಬ್ಬಿಕೊಂಡಿದೆ. ಬ್ರಿಟಿಷರು ತಮ್ಮ ವ್ಯಾಪಾರ ವೃದ್ಧಿಗಾಗಿ ವೇಗವಾಗಿ ರಸ್ತೆ ನಿರ್ಮಾಣ ಆರಂಭಿಸಿ ಈ ಇಂಡೋ-ಟಿಬೆಟ್ ಸಂಪರ್ಕ ಸಾಧಿಸಿದ್ದಾರೆ.
ಈ ರಸ್ತೆ ಕಲ್ಕಾದಿಂದ ಆರಂಭವಾಗಿ ಕಿನೌರ್ ಪ್ರದೇಶದಲ್ಲಿ ಅಂತ್ಯವಾಗಲಿದೆ. ಇದು ಇಂಡೋ-ಟಿಬೆಟ್ ಸಂಪರ್ಕಿಸುವ ಏಕೈಕ ಪರ್ವತ ರಸ್ತೆ ಎನಿಸಿದೆ. ಆ ಸಮಯದಲ್ಲಿ ಈ ರಸ್ತೆಯೇ ವಿಶ್ವದ ಅಂತೀ ಎತ್ತರದಲ್ಲಿ ನಿರ್ಮಾಣಗೊಂಡ ರಸ್ತೆ ಎನಿಸಿತ್ತು.
ಟಿಬೆಟ್ನಲ್ಲೂ ಭಾರತೀಯರ ವ್ಯಾಪಾರ
ಟಿಬೆಟ್ ಮತ್ತು ಭಾರತದ ನಡುವೆ ಸ್ನೇಹ ಸಂಬಂಧದ ಸಾಕ್ಷಿಯಾಗಿ ಈ ರಸ್ತೆ ಮಹತ್ವ ಪಡೆದಿತ್ತು. ವ್ಯಾಪಾರ-ವಹಿವಾಟಿನ ಪ್ರಮುಖ ದಾರಿಯಾಗಿತ್ತು. ಟಿಬೆಟ್‌ನ ವ್ಯಾಪಾರಿಗಳು ಉಣ್ಣೆ, ರೇಷ್ಮೆ, ವೆಲ್ವೆಟ್, ಟಿಬೆಟಿಯನ್ ಕೆತ್ತನೆ ವಸ್ತುಗಳು, ಚರ್ಮದ ಶೂಗಳು ಮತ್ತು ಚಪ್ಪಲಿಗಳನ್ನು ಭಾರತದಲ್ಲಿ ವ್ಯಾಪಾರ ಮಾಡುತ್ತಿದ್ದರೆ, ಭಾರತದ ವ್ಯಾಪಾರಿಗಳು ಟಿಬೆಟ್‌ನಲ್ಲಿ ಅಕ್ಕಿ, ಉಪ್ಪು, ತೈಲ ಮುಂತಾದ ವಸ್ತುಗಳನ್ನು ಈ ರಸ್ತೆ ಬಳಸಿ ಟಿಬೆಟ್‌ನಲ್ಲಿ ವ್ಯಾಪಾರ ಮಾಡುತ್ತಿದ್ದರು. ತಾಂತ್ರಿಕತೆ ಮುಂದಿವರೆದ ಕಾಲದಲ್ಲಿ ಈ ರಸ್ತೆ ನಿರ್ಮಾಣ ಸವಾಲಾಗಿತ್ತು. ಸಾವಿರಾರು ಕಾರ್ಮಿಕರು ಬಹುತೇಕ ಕೈಗಳ ಬಳಸಿಯೇ ಇಲ್ಲಿನ ಬಂಡೆಗಳ ಒಡೆದು ರಸ್ತೆ ನಿರ್ಮಾಣ ಕಾರ್ಯ ಮಾಡಿದ್ದಾರೆ.
ಯುದ್ಧದ ವೇಳೆ ಭಾರತೀಯ ಸೇನೆ ಬಳಸಿದ್ದ ರಸ್ತೆ
1952ರಲ್ಲಿ ಮೊದಲ ಬಾರಿಗೆ ಈ ರಸ್ತೆಯಲ್ಲಿ ವಾಹನ ಪ್ರಯಾಣ ಆರಂಭವಾಗಿತ್ತು. ಸ್ವಾತಂತ್ರ ನಂತರ ಭಾರತೀಯ ಸೇನೆಯು 1962ರ ಇಂಡೋ-ಚೀನಾ ಯುದ್ಧದಲ್ಲಿ ಬಳಸಿತ್ತು. ಗಡಿನಾಡ ಪ್ರದೇಶಗಳಿಗೆ ಈ ರಸ್ತೆ ಮೂಲಕವೇ ಭಾರತೀಯ ಸೇನೆ ಯುದ್ಧ ಸಾಮಗ್ರಿ ಸೇರಿದಂತೆ ಪಡಿತರ ಸಾಗಿಸಲು ಬಳಸುತ್ತಿತ್ತು. ಆದರೆ ಇಂದು ಈ ರಸ್ತೆಯನ್ನು ಕೆಲ ಕಡೆಗಳಲ್ಲಿ ಬಂದ್ ಮಾಡಲಾಗಿದೆ. ಅಲ್ಲದೆ ಪ್ರಯಾಣಕ್ಕಾಗಿ ಪ್ರತ್ಯೇಕ ವ್ಯವಸ್ಥೆಯೂ ಮಾಡಲಾಗಿದೆ.
ರಸ್ತೆ ಮುಚ್ಚಿದ ಪರಿಣಾಮವಾಗಿ ಭಾರತೀಯ ಸೈನ್ಯವು ಇಂಡೋ-ಚೀನಾ ಗಡಿಯನ್ನು ತಲುಪಲು ಹೆಚ್ಚುವರಿಯಾಗಿ 60 ಕಿ.ಮೀ ಪ್ರಯಾಣಿಸಬೇಕಾಗಿತ್ತು. ಈ ರಸ್ತೆಯ ಸ್ಥಿತಿ ಸುಧಾರಿಸಿದರೆ, ಪ್ರವಾಸೋದ್ಯಮದ ದೃಷ್ಟಿಯಿಂದ ಕಿನ್ನೌರ್ ಪ್ರದೇಶ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಜೊತೆಗೆ ಸ್ಥಳೀಯ ರೈತರು ಮತ್ತು ತೋಟಗಾರರಿಗೆ ಈ ರಸ್ತೆ ವರದಾನವಾಗಿದೆ. ಅಲ್ಲದೆ ಚೀನಾದೊಂದಿಗೆ ಉದ್ವಿಗ್ನತೆಯ ಸಂದರ್ಭದಲ್ಲಿಯೂ ಸೇನೆಯು ಈ ರಸ್ತೆಯನ್ನು ಬಳಸಬಹುದು. ಸೈನ್ಯದ ಪರಿಕರಗಳನ್ನು ಈ ಮಾರ್ಗ ಬಳಸಿ ಸುಲಭವಾಗಿ ಗಡಿಗೆ ಕೊಂಡೊಯ್ಯಬಹುದು.