ETV Bharat / bharat

ಮೊಬೈಲ್​ನಲ್ಲಿ ಮಾತಾಡ್ತಾ ಯುವತಿಗೆ ಎರಡು ಬಾರಿ ಲಸಿಕೆ ಹಾಕಿದ ನರ್ಸ್​

author img

By

Published : Jun 20, 2021, 10:10 AM IST

ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ನರ್ಸ್​ ಏಕಕಾಲದಲ್ಲಿ ಎರಡು ಬಾರಿ ಯುವತಿಗೆ ಕೋವಿಡ್​ ವ್ಯಾಕ್ಸಿನ್​ ಚುಚ್ಚಿರುವ ಘಟನೆ ತೆಲಂಗಾಣದ ರಂಗರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

The nurse while talking on the cell phone and vaccinated the young woman twice
ನರ್ಸ್​ ಎಡವಟ್ಟು

ಹೈದರಾಬಾದ್​ (ತೆಲಂಗಾಣ): ಕೋವಿಡ್​ ಲಸಿಕೆ ಪಡೆದ ಬಳಿಕ ಜ್ವರ, ತಲೆನೋವು, ಸುಸ್ತು, ವಾಂತಿ ಮೈ-ಕೈ ನೋವಿನಂತಹ ಕೆಲ ಸಣ್ಣ ಪ್ರಮಾಣದ ಅಡ್ಡಪರಿಣಾಮಗಳು ಸಾಮಾನ್ಯವಾಗಿರುತ್ತದೆ. ಒಂದು ಬಾರಿ ಲಸಿಕೆ ಹಾಕಿಸಿಕೊಂಡರೇನೆ ಕೆಲವರಿಗೆ ಸುಧಾರಿಸಿಕೊಳ್ಳಲು ಒಂದೆರಡು ದಿನ ಬೇಕಾಗುತ್ತದೆ. ಹೀಗಿರುವಾಗಿ ಇಲ್ಲೊಬ್ಬ ಯುವತಿಗೆ ಏಕಕಾಲದಲ್ಲಿ ಎರಡು ವ್ಯಾಕ್ಸಿನ್ ನೀಡಲಾಗಿದೆ.

ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಹಾಯತ್​ನಗರದ ನಿವಾಸಿ ಲಕ್ಷ್ಮಿ ಪ್ರಸನ್ನ (21 ವರ್ಷ) ಎಂಬ ಯುವತಿ ಕಳೆದ ಗುರುವಾರ ಪೆದ್ದಂಬರ್​ ಪೇಟ್​ನಲ್ಲಿರುವ ಜಿಲ್ಲಾ ಪರಿಷತ್ ಪ್ರೌಢ ಶಾಲೆಗೆ ಲಸಿಕೆ ಹಾಕಿಸಿಕೊಳ್ಳಲು ಬಂದಿದ್ದರು. ಅಲ್ಲಿ ಕರ್ತವ್ಯದಲ್ಲಿದ್ದ ಪದ್ಮಾ ಎಂಬ ನರ್ಸ್​, ಮೊಬೈಲ್​ನಲ್ಲಿ ಮಾತನಾಡುತ್ತಾ ಎರಡು ಬಾರಿ ವ್ಯಾಕ್ಸಿನ್​ ಚುಚ್ಚಿದ್ದಾರೆ.

ತಕ್ಷಣವೇ ಯುವತಿ ಅಸ್ವಸ್ಥಳಾಗಿದ್ದು, ಎಳನೀರು ಕೊಡಲಾಗಿದೆ. ಎರಡು ಲಸಿಕೆಯಲ್ಲದೇ ಅಸ್ವಸ್ಥಳಾಗಿದ್ದಕ್ಕೆ ಇಂಜೆಕ್ಷನ್​​ ಚುಚ್ಚಿ ವನಸ್ಥಲಿಪುರಂನ ಏರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡು ದಿನಗಳ ಕಾಲ ಚಿಕಿತ್ಸೆ ನೀಡಿ, ಆರೋಗ್ಯ ಸುಧಾರಿಸಿದ ಬಳಿಕ ಯುವತಿಯನ್ನು ಶನಿವಾರ ಬೆಳಗ್ಗೆ ಡಿಸ್ಚಾರ್ಜ್​ ಮಾಡಿ ಮನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ಎಡವಟ್ಟು: 15 ನಿಮಿಷದಲ್ಲೇ ಎರಡು ವ್ಯಾಕ್ಸಿನ್​ ಪಡೆದ ಮಹಿಳೆ

ಆದರೆ ರಂಗರೆಡ್ಡಿ ಜಿಲ್ಲೆಯ ಡಿಎಂಹೆಚ್‌ಒ ಸ್ವರಾಜ್ಯಲಕ್ಷ್ಮಿ ಅವರು ಯುವತಿಗೆ ಎರಡು ಡೋಸ್ ನೀಡಲಾಗಿದೆ ಎಂಬುದನ್ನು ಖಚಿತಪಡಿಸಿಲ್ಲ. ಘಟನೆಯ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಡಿಎಂಹೆಚ್‌ಒಗೆ ಆದೇಶಿಸಿದ್ದಾರೆ.

ಮೂರು ದಿನಗಳ ಹಿಂದೆ ಬಿಹಾರ ರಾಜಧಾನಿ ಪಾಟ್ನಾದಲ್ಲಿ 63 ವರ್ಷದ ಮಹಿಳೆಯೊಬ್ಬಳಿಗೆ ಕೇವಲ 15 ನಿಮಿಷಗಳ ಅಂತರದಲ್ಲಿ ಎರಡು ಕೋವಿಡ್​ ವ್ಯಾಕ್ಸಿನ್​ ನೀಡಲಾಗಿತ್ತು. ಮೊದಲು ಕೋವಿಶೀಲ್ಡ್​​ ಲಸಿಕೆ ನೀಡಲಾಗಿದ್ದು, ಇದರ ಬೆನ್ನಲ್ಲೇ ಕೋವ್ಯಾಕ್ಸಿನ್​ ಲಸಿಕೆ ಸಹ ನೀಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.