ಪುಣೆ: ಡೆಲ್ಟಾ ಮತ್ತು ಒಮಿಕ್ರಾನ್ ಸಂಯೋಜನೆಯಿಂದ ಹೊಸ ರೂಪಾಂತರ ರಚನೆಯಾಗಿದೆ. ಆದರೆ, ಇದು ಒಮಿಕ್ರಾನ್ ಹಾಗೆ ಹರಡುವ ಸಾಧ್ಯತೆಯಿಲ್ಲ ಎಂದು ಭಾರತೀಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ. ಅವಿನಾಶ್ ಭೋಂಡ್ವೆ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ನಾವು ವಿವಿಧ ರೀತಿಯ ಕೊರೊನಾ ರೂಪಾಂತರ ನೋಡಿದ್ದೇವೆ.ಆದರೆ, ಇದುವರೆಗೆ ಒಂದೇ ಕೊರೊನಾದ ಮೂರು ಅಲೆಗಳು ಬಂದು ಹೋಗಿವೆ. ಇದರಲ್ಲಿ ಸಾವಿರಾರು ನಾಗರೀಕರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈ ಹೊಸ ವೈರಸ್ ಅಪಾಯಕಾರಿಯಲ್ಲ. ಆದಾಗ್ಯೂ, ವೈರಸ್ ಎಷ್ಟು ಅಪಾಯಕಾರಿ ಎಂದು ಈ ಕ್ಷಣ ಸ್ಪಷ್ಟವಾಗಿಲ್ಲ ಎಂದು ಭೋಂಡ್ವೆ ತಿಳಿಸಿದರು.
ಇದನ್ನೂ ಓದಿ : Work From Home.. ಮನೆಯಿಂದಲೇ ಕೆಲಸ ಮಾಡಿ ಸುಸ್ತಾದವರಿಗೆ ಹೆಲ್ತ್ ಟಿಪ್ಸ್
ಚೀನಾದಲ್ಲಿ ಕೊರೊನಾ ಸೋಂಕು ಮತ್ತೆ ಹೆಚ್ಚಾಗುತ್ತಿದೆ. ಹಾಗಾಗಿ ಚೀನಾ ಪ್ರಮುಖ ನಗರಗಳಲ್ಲಿ ಲಾಕ್‌ಡೌನ್ ಹೇರುತ್ತಿದೆ. ಚೀನಾದ ವಿವಿಧ ನಗರಗಳಲ್ಲಿನ ಆರೋಗ್ಯ ಇಲಾಖೆಯು ಸಹ ಹೆಚ್ಚುತ್ತಿರುವ ಕೊರೊನಾ ಸೋಂಕಿನ ದೃಷ್ಟಿಯಿಂದ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ.