ತಿರುವನಂತಪುರಂ: ಶಬರಿಮಲೆ ವಾರ್ಷಿಕ ಯಾತ್ರಾ ಆರಂಭವಾಗುತ್ತಿದ್ದು, ಇದಕ್ಕಾಗಿ ಕೇರಳ ಸರ್ಕಾರ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಆರಂಭದ ದಿನಗಳಲ್ಲಿ ಒಟ್ಟು 25,000 ಜನರಿಗೆ ಮಾತ್ರ ಅವಕಾಶ ನೀಡಲು ನಿರ್ಧರಿಸಿದೆ.
ಪಂಬಾ ನದಿಯಲ್ಲಿ ಸ್ನಾನ ಮಾಡಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಯಾತ್ರಿಕರನ್ನು ಹೊತ್ತೊಯ್ಯುವ ವಾಹನಗಳಿಗೆ ನಿಲಕ್ಕಲ್ ವರೆಗೆ ಮಾತ್ರ ಅನುಮತಿಸಲಾಗಿದೆ. ಹಿಂದಿನ ವರ್ಷದಂತೆ ಈ ಭಾರಿಯೂ 'ತುಪ್ಪದ ಅಭಿಷೇಕ' ನಡೆಸಲು ಸರ್ಕಾರ ನಿರ್ಧರಿಸಿದೆ. ದರ್ಶನಕ್ಕಾಗಿ ವರ್ಚುಯಲ್ ಕ್ಯೂ ಸೌಲಭ್ಯವನ್ನು ಮುಂದುವರಿಸಲಾಗುತ್ತದೆ. ಇದೇ ವೇಳೆ, ಸ್ವಚ್ಛತಾ ಕಾರ್ಮಿಕರಿಗೆ ಸಿಹಿ ಸುದ್ದಿ ನೀಡಿರುವ ಕೇರಳ ಸರ್ಕಾರ ಸ್ವಚ್ಛತಾ ಕಾರ್ಮಿಕರ ವೇತನ ಹೆಚ್ಚಿಸಲು ನಿರ್ಧಾರ ಕೈಗೊಂಡಿದೆ.