ಮುಂಬೈ(ಮಹಾರಾಷ್ಟ್ರ): ವಿವೇಕ್ ಅಗ್ನಿಹೋತ್ರಿ ಇತ್ತೀಚಿನ ನಿರ್ದೇಶನದ ದಿ ಕಾಶ್ಮೀರ್ ಫೈಲ್ಸ್ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಇದೀಗ ಎರಡನೇ ವಾರಾಂತ್ಯದಲ್ಲಿ 150 ಕೋಟಿ ರೂ.ಗಳ ಗಡಿಯನ್ನು ದಾಟಿ ಸಿನಿಮಾ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದೆ.
ಭಾರತೀಯ ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಅವರು ತಮ್ಮ ಟ್ವಿಟರ್ನಲ್ಲಿ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರ ಮೊದಲ ದಿನವೇ 3.55 ಕೋಟಿ ಕಲೆಕ್ಷನ್ ಮಾಡಿದೆ. ಅದೇ ಮೊದಲ ಶನಿವಾರ 8.50 ಕೋಟಿ ರೂ.ಗೆ ಏರಿತ್ತು. ಮೊದಲ ಭಾನುವಾರ ಮತ್ತು ಸೋಮವಾರ ಕ್ರಮವಾಗಿ 15.10 ಕೋಟಿ ಮತ್ತು 15.05 ಕೋಟಿ ರೂ. ಗಲ್ಲಾಪೆಟ್ಟಿಗೆಯಲ್ಲಿ ದೋಚಿ ದಾಖಲೆ ನಿರ್ಮಿಸಿತ್ತು.
ಮೊದಲ ಮಂಗಳವಾರ ಚಿತ್ರದ ಕಲೆಕ್ಷನ್ 18 ಕೋಟಿ ರೂ. ಆ ದಿನಕ್ಕೆ ಒಟ್ಟು 60.20 ಕೋಟಿಯನ್ನು ಆದಾಗಲೇ ಸಿನಿಮಾ ಬಾಚಿಕೊಂಡು ಈಗಾಗಲೇ ಬಾಲಿವುಡ್ನ ಇತರ ಸಿನಿಮಾಗಳು ನಿರ್ಮಿಸಿದ್ದ ದಾಖಲೆಯನ್ನು ಹಿಂದಿಕ್ಕಿ ಕಾಶ್ಮೀರಿ ಫೈಲ್ಸ್ ಹೊಸ ದಾಖಲೆಯನ್ನು ತನ್ನದಾಗಿಸಿಕೊಂಡಿದೆ. ಸದ್ಯ ಒಟ್ಟು 167.45 ಕೋಟಿಗೆ ದಾಖಲೆಯ ಮುಂಚೂಣಿಯಲ್ಲಿದೆ.
1990ರಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆ ಸುತ್ತ ಸುತ್ತುವ ಕಥೆಯಿರುವ ಸಿನಿಮಾವಾಗಿದ್ದು, ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ, ದರ್ಶನ್ ಕುಮಾರ್, ಪುನೀತ್ ಇಸ್ಸಾರ್, ಮೃಣಾಲ್ ಕುಲಕರ್ಣಿ ಮತ್ತಿತರರು ಇದರಲ್ಲಿ ಅಭಿನಯಿಸಿದ್ದಾರೆ. ಉತ್ತರಪ್ರದೇಶ, ತ್ರಿಪುರಾ, ಗೋವಾ, ಹರಿಯಾಣ ಮತ್ತು ಉತ್ತರಾಖಂಡ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಈ ಚಿತ್ರಕ್ಕೆ ತೆರಿಗೆ ಮುಕ್ತವಾಗಿ ಘೋಷಿಸಲಾಗಿದೆ.